ಲಕ್ಷದ್ವೀಪ: ನಟಿ, ನಿರ್ಮಾಪಕಿ ವಿರುದ್ದ ದೇಶದ್ರೋಹ ಕೇಸ್‌; ಬಿಜೆಪಿ ತೊರೆದ 15 ನಾಯಕರು!

ಲಕ್ಷದ್ವೀಪದಲ್ಲಿನ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಸರ್ಕಾರದ ಈ ನಡೆಯನ್ನು ಬಿಜೆಪಿಯ ನಾಯಕರೇ ವಿರೋಧಿಸಿದ್ದು, 15 ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿ, ಪಕ್ಷ ತೊರೆದಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಕೇಂದ್ರ ಸರ್ಕಾರ ಆಡಳಿತಾಧಿಕಾರಿ ಪ್ರಪುಲ್ ಪಟೇಲ್‌ರವರನ್ನು ನೇಮಿಸಿದ್ದು, ಅವರ ಅಧಿಕಾರ ವಹಿಸಿಕೊಂಡ ನಂತರ ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ ಮತ್ತು ಕೇಂದ್ರವು “ಜೈವಿಕ ಶಸ್ತ್ರಾಸ್ತ್ರ” ವನ್ನು ಬಳಸಿದೆ ಎಂದು ನಿರ್ಮಾಪಕಿ ಆಯೆಷಾ ಆರೋಪಿಸಿದ್ದರು. ಈ ಆರೋಪಕ್ಕಾಗಿ ಅವರ ವಿರುದ್ದ ದೇಶದ್ರೋಹ ಪ್ರಕರಣ ದಾಖಲಾಸಲಾಗಿದೆ.

ನಿರ್ಮಾಪಕಿ ಆಯಿಷಾ ಸುಲ್ತಾನ ಅವರನ್ನು ಈ ಬಿಜೆಪಿ ನಾಯಕರು ಬೆಂಬಲಿಸಿದ್ದಾರೆ. ಆಯಿಷಾ ವಿರುದ್ದ ಪ್ರಕರಣವನ್ನು ಖಂಡಿಸಿ, 12 ಜನ ಬಿಜೆಪಿ ನಾಯಕರು ಮತ್ತು ಮೂವರು ಕಾರ್ಯಕರ್ತರು ದೂರಿನ ಪ್ರತಿಗೆ ಸಹಿ ಮಾಡಿದ್ದು, ಲಕ್ಷದ್ವೀಪದ ಬಿಜೆಪಿ ಮುಖ್ಯಸ್ಥ ಸಿ ಅಬ್ದುಲ್ ಖಾದರ್ ಹಾಜಿಯವರಿಗೆ ಸಲ್ಲಿಸಿದ್ದಾರೆ. “ಲಕ್ಷದ್ವೀಪದ ಆಡಳಿತಾಧಿಕಾರಿಯವರ ಜನವಿರೋಧಿ ಕ್ರಮಗಳು, ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ” ಎಂದು ದೂರಿನಲ್ಲಿ ಹೇಳಲಾಗಿದೆ.

Aisha Sultana
Aisha Sultana

“ಲಕ್ಷದ್ವೀಪದಲ್ಲಿ ಮೊದಲು ಯಾವುದೇ ಕೋವಿಡ್‌ ಪ್ರಕರಣಗಳಿರಲಿಲ್ಲ. ಆದರೆ ಹೊಸ ಆಡಳಿತಾಧಿಕಾರಿಯ ಆಗಮನದೊಂದಿಗೆ, ಅವರ ಅವೈಜ್ಞಾನಿಕ, ಬೇಜವಾಬ್ದಾರಿಯುತ ನಿರ್ಧಾರಗಳಿಂದ ಕೋವಿಡ್‌ ಪ್ರಕರಣಗಳು ದಿಢೀರನೆ ಹೆಚ್ಚಾಗಿವೆ ಎಂದು ಆಯಿಷಾ ಅವರು ವಾಸ್ತವವನ್ನು ಮಾತನಾಡಿದ್ದಾರೆ. ಅಷ್ಟಕ್ಕೆ ಪೊಲೀಸರಿಗೆ ನೀವು ನೀಡಿದ ದೂರಿನ ಆಧಾರದ ಮೇಲೆ, ಆಯಿಷಾ ಸುಲ್ತಾನಾ ವಿರುದ್ಧ ಪ್ರಕರಣ ದಾಖಲಾಗಿದೆ. ಇದು ಸರಿಯಲ್ಲ” ಎಂದು ಬಿಜೆಪಿ ನಾಯಕ ಆಯಿಷಾ ಸುಲ್ತಾನಾ ಕೂಡ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Read Also: RJD ನಾಯಕರನ್ನು ಭೇಟಿಯಾದ ಜಿತನ್‌ ಮಾಂಜಿ; BJP ನೇತೃತ್ವದ NDA ತೊರೆಯುತ್ತಾ HAM ಪಕ್ಷ?!

ನೀವು ಆ ಸಹೋದರಿಯ ವಿರುದ್ಧ ತಪ್ಪು ಮತ್ತು ಅನ್ಯಾಯಯುತ ದೂರು ನೀಡಿದ್ದೀರಿ. ಅವರ ಕುಟುಂಬ ಮತ್ತು ಆಕೆಯ ಭವಿಷ್ಯವನ್ನು ಹಾಳುಮಾಡುತ್ತಿದ್ದೀರಿ. ಹಾಗಾಗಿ ನಾವು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಮುಲ್ಲಿಫುಝ ತಿಳಿಸಿದ್ದಾರೆ.

“ಲಕ್ಷದ್ವೀಪದಲ್ಲಿ ಕೊರೊನಾ ಪ್ರಕರಣಗಳು ಶೂನ್ಯವಾಗಿದ್ದವು. ಈಗ ಪ್ರತಿದಿನ 100 ಪ್ರಕರಣಗಳನ್ನು ವರದಿ ಮಾಡುತ್ತಿದೆ. ಕೇಂದ್ರ ಸರ್ಕಾರವು “ಜೈವಿಕ ಶಸ್ತ್ರಾಸ್ತ್ರ” ಬಳಸುತ್ತಿದೆ ಎಂದು ನಾನು ಇದನ್ನು ಸ್ಪಷ್ಟವಾಗಿ ಹೇಳಬಲ್ಲೆ” ಎಂದು ಆಯಿಷಾ ಸುಲ್ತಾನಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಹಾಗಾಗಿ ಅವರ ವಿರುದ್ಧ ಲಕ್ಷದ್ವೀಪದ ಬಿಜೆಪಿ ಮುಖ್ಯಸ್ಥ ಸಿ ಅಬ್ದುಲ್ ಖಾದರ್ ಹಾಜಿ ದೇಶದ್ರೋಹದ ದೂರು ನೀಡಿದ್ದರು. ಅದರ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ) ಮತ್ತು 153 ಬಿ (ದ್ವೇಷಪೂರಿತ ಭಾಷಣ) ಅಡಿಯಲ್ಲಿ ಕವರತ್ತಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

Read Also: ಪಂಜಾಬ್‌ ಕಾಂಗ್ರೆಸ್‌ನಲ್ಲೂ ಆಂತರಿಕ ಬಿಕ್ಕಟ್ಟು; ಅಮರಿಂದರ್‌ ಮತ್ತು ಸಿಧು ನಡುವೆ ನಾಯಕತ್ವದ ಕುಸ್ತಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights