FACT CHECK | “ಆಪರೇಷನ್ ಸಿಂಧೂರ್” ಯಶಸ್ಸಿನ ಹಿನ್ನಲೆಯಲ್ಲಿ ಬಲೂಚಿಸ್ತಾನದಲ್ಲಿ ತಿರಂಗ ಯಾತ್ರೆ ನಡೆಸಲಾಗಿದೆಯೇ?
ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದಿಂದ ಬಲೂಚಿಸ್ತಾನ್ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಬಲೂಚಿಸ್ತಾನದ ಜನರು ಭಾರತದ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರಗೀತೆ ಹಾಡುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಭರತ್ರಾಜ್ ಪೂಜಾರಿ ಎಂಬ ಫೇಸ್ಬುಕ್ ಬಳಕೆದಾರರೊಬ್ಬ ಈ ವಿಡಿಯೋ ಪೋಸ್ಟ್ನಲ್ಲಿ ಹೀಗೆ ಬರೆದಿದ್ದಾರೆ, ಭಾರತದ ತಿರಂಗ ಹಿಡಿದು ಬಲೂಚಿಸ್ತಾನ್ನವರು ಆಪರೇಷನ್ ಸಿಂದೂರ್ಅನ್ನು ಸಂಭ್ರಮಿಸುತ್ತಿದ್ದಾರೆ, ಆದ್ರೆ ನಮ್ಮಲ್ಲಿ ಬುಲ್ಲಿ ಕಟ್ಗೆ ಹುಟ್ಟಿದೋರು ಸಾಕ್ಷಿ ಕೇಳ್ತವೆ ಎಂಬ ಹೇಳಿಕೆಯೊಂದಿಗೆ ಹಲವು ಸಾಮಾಝಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ನೋಡಬಹುದು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಮೆರವಣಿಗೆಯಲ್ಲಿ ಭಾರಿ ಜನಸಮೂಹ ಭಾಗವಹಿಸುವುದನ್ನು ಕಾಣಬಹುದು. ಅವರು ಭಾರತದ ರಾಷ್ಟ್ರಧ್ವಜವನ್ನು ಹಿಡಿದು, ಬ್ಯಾಂಡ್ ಭಾರಿಸುತ್ತಾ ‘ಸಾರೆ ಜಹಾನ್ ಸೆ ಅಚ್ಚಾ’ ಹಾಡನ್ನು ನುಡಿಸುತ್ತಿರವುದನ್ನು ಕೇಳಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಬಲೂಚಿಸ್ತಾನದಲ್ಲಿ ಇತ್ತೀಚೆಗೆ ನಡೆದ ಮೆರವಣಿಗೆಯಲ್ಲಿ ಬಲೂಚ್ ಜನರು ಭಾರತದ ರಾಷ್ಟ್ರಧ್ವಜವನ್ನು ಹಿಡಿದು ‘ಸಾರೆ ಜಹಾಂ ಸೆ ಅಚ್ಛಾ’ ಎಂದು ಘೋಷಣೆ ಕೂಗುತ್ತಿರುವುದನ್ನು ತೋರಿಸುವ ಯಾವುದೇ ಅಧಿಕೃತ ಸುದ್ದಿ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಲಭ್ಯವಾಗಿಲ್ಲ.

ವೈರಲ್ ವಿಡಿಯೋದಲ್ಲಿ, ಬ್ಯಾಂಡ್ನ ವಾದ್ಯಗಳ ಮೇಲೆ ‘ಸೈಫಿ ಸ್ಕೌಟ್ಸ್ ಸೂರತ್’ ಎಂದು ಬರೆದಿರುವುದನ್ನು ಕಾಣಬಹುದು. ಬ್ಯಾಂಡ್ ಭಾರಿಸುತ್ತಿರುವ ಸದಸ್ಯರು ಖಾಕಿ ಪ್ಯಾಂಟ್ನೊಂದಿಗೆ ಬಿಳಿ ಶರ್ಟ್ ಸಮವಸ್ತ್ರವನ್ನು ಧರಿಸಿದ್ದು, ಶರ್ಟ್ ಮೇಲೆ ಹಸಿರು ಚಿಹ್ನೆ ಕಾಣಬಹುದು.
View this post on Instagram
ಇದನ್ನು ಕ್ಲೂ ರೀತಿ ತೆಗೆದುಕೊಂಡು ಕೀವರ್ಡ್ ಬಳಸಿ ಸರ್ಚ್ ಮಾಡಿದಾಗ, ‘ಸೈಫಿ ಸ್ಕೌಟ್ಸ್ ಸೂರತ್’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಬ್ಯಾಂಡ್ ಭಾರಿಸುವ ಸದಸ್ಯರು ಹಸಿರು ಲಾಂಛನವಿರುವ ಸಮವಸ್ತ್ರಗಳನ್ನು ಧರಿಸಿರುವುದನ್ನು ಸಹ ತೋರಿಸಲಾಗಿದೆ. ಈ ವೀಡಿಯೊವನ್ನು ಮೇ 15 ರಂದು ಅಪ್ಲೋಡ್ ಮಾಡಲಾಗಿದ್ದು, “ತಿರಂಗ ಯಾತ್ರಾ ಸೂರತ್ 2025 ರಲ್ಲಿ @saifeescoutsurat ಅವರಿಂದ ಬ್ಯಾಂಡ್ ಪ್ರದರ್ಶನ” ಎಂದು ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋದಲ್ಲಿ ಹಲವಾರು ಸ್ಥಳಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವಿರುವ ಬ್ಯಾನರ್ ಕೂಡ ಇದೆ. ಇಂಗ್ಲಿಷ್ನಲ್ಲಿ ‘ಆಪರೇಷನ್ ಸಿಂಧೂರ್’ ಮತ್ತು ಗುಜರಾತಿಯಲ್ಲಿ ‘ತಿರಂಗ ಯಾತ್ರಾ’ ಎಂದು ಬರೆಯಲಾಗಿದೆ.
ಗಾಂಧಿನಗರ, ಸೂರತ್ ಮತ್ತು ರಾಜ್ಕೋಟ್ನಲ್ಲಿ ಭಾರಿ ಜನಸಂದಣಿಯೊಂದಿಗೆ ಭವ್ಯವಾದ ತಿರಂಗ ಯಾತ್ರೆ ನಡೆಯಿತು” ಎಂಬ ಶೀರ್ಷಿಕೆಯೊಂದಿಗೆ ಗುಜರಾತ್ ಫಸ್ಟ್ ನ್ಯೂಸ್ ಮೇ 14 ರಂದು ಲೇಖನವನ್ನು ಪ್ರಕಟಿಸಿತು. ಆಪರೇಷನ್ ಸಿಂಧೂರ್ ಯಶಸ್ಸಿನ ನಂತರ, ಬಿಜೆಪಿ ಗುಜರಾತ್ ಸೇರಿದಂತೆ ದೇಶಾದ್ಯಂತ ತಿರಂಗ ಯಾತ್ರೆ ನಡೆಸಿತು ಎಂದು ಅವರು ಬರೆದಿದ್ದಾರೆ. ಮೇ 14 ರಂದು ಸೂರತ್ನಲ್ಲಿ ತಿರಂಗ ಯಾತ್ರೆಯೂ ನಡೆಯಿತು.
“ತಿರಂಗ ಯಾತ್ರೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಭಾಗಲ್ ಪ್ರದೇಶದಿಂದ ಪ್ರಾರಂಭಿಸಿ, ಚೌಕ್ ಬಜಾರ್ ನಲ್ಲಿಸಮಾರೋಪಗೊಳಿಸಲಾಗಿತ್ತು” ಎಂದು ಹೇಳಲಾಗಿದೆ.
ಮೇ 15 ರಂದು ಇಂಡಿಯನ್ ಎಕ್ಸ್ಪ್ರೆಸ್ “ತಿರಂಗ ಯಾತ್ರೆಯ ಸಮಯದಲ್ಲಿ ಸೂರತ್ನಲ್ಲಿ ಭಾರತೀಯ ಸೇನೆಯನ್ನು ಶ್ಲಾಘಿಸುವ ಘೋಷಣೆಗಳು” ಎಂಬ ಶೀರ್ಷಿಕೆಯ ಲೇಖನವನ್ನು ಪ್ರಕಟಿಸಿತು. ದಾವೂದಿ ಬೋಹ್ರಾ ಸಮುದಾಯದ ಸೈಫಿ ಸ್ಕೌಟ್ಸ್ ಸೂರತ್ ಸಂಗೀತ ತಂಡವು ಭಾಗಲ್ ಕೌದಲಿಯಿಂದ ಮೆರವಣಿಗೆಯನ್ನು ಮುನ್ನಡೆಸಿದ್ದು ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು ಎಂದು ಲೇಖನ ತಿಳಿಸಿದೆ.
ವೈರಲ್ ವೀಡಿಯೊವನ್ನು ಚಿತ್ರೀಕರಿಸಿದ ಸ್ಥಳವನ್ನು ಹುಡುಕಲು ನಾವು Google ನಕ್ಷೆಗಳನ್ನು ಬಳಸಿದ್ದೇವೆ. ವೀಡಿಯೊ ಸೂರತ್ನ ಚೌಕ್ ಬಜಾರ್ ರಸ್ತೆಯಲ್ಲಿರುವ ಮಿನಾರಾ ಮಜೀದ್ ಜಂಕ್ಷನ್ ಅನ್ನು ತೋರಿಸುತ್ತದೆ ಎಂದು ತಿಳಿದುಬಂದಿದೆ.
ಸೈಫಿ ಸ್ಕೌಟ್ಸ್ ಸೂರತ್ನ ಸದಸ್ಯ ಅಲಿ ಅಸ್ಗರ್, ವೈರಲ್ ಆಗಿರುವ ವಿಡಿಯೋವನ್ನು ಇತ್ತೀಚೆಗೆ ಸೂರತ್ನಲ್ಲಿ ನಡೆದ ತಿರಂಗ ಯಾತ್ರೆಯ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ನ್ಯೂಸ್ಮೀಟರ್ಗೆ ತಿಳಿಸಿದ್ದಾರೆ. “ಆಪರೇಷನ್ ಸಿಂಧೂರ್ನಲ್ಲಿ ಧೈರ್ಯದಿಂದ ಹೋರಾಡಿದ ನಮ್ಮ ಸೈನಿಕರ ಗೌರವಾರ್ಥವಾಗಿ ತಿರಂಗ ಯಾತ್ರೆಯನ್ನು ಆಯೋಜಿಸಲಾಗಿದೆ. ಕೇಂದ್ರ ಸಚಿವ ಸಿಆರ್ ಪಾಟೀಲ್ ಕೂಡ ಯಾತ್ರೆಯಲ್ಲಿ ಭಾಗವಹಿಸಿದ್ದರು” ಎಂದು ಅವರು ಹೇಳಿದರು.
ಹಾಗಾಗಿ ಈ ವೈರಲ್ ವಿಡಿಯೋ ಇತ್ತೀಚೆಗೆ ಗುಜರಾತ್ನ ಸೂರತ್ನಲ್ಲಿ ನಡೆದ ತಿರಂಗ ಯಾತ್ರೆಗೆ ಸಂಬಂಧಿಸಿದ್ದಾಗಿದೆ. ವೈರಲ್ ವಿಡಿಯೋಗೂ ಬಲೂಚಿಸ್ತಾನಕ್ಕೂ ಯಾವುದೆ ಸಂಬಂಧಿಸಿಲ್ಲ. ಹಾಗಾಗಿ ಸಾಮಾಜಿಕ ಮಾಧ್ಯಮಗಳ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಾರತದ ಯುದ್ದ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸ್ತಾ? ವೈರಲ್ ವಿಡಿಯೋದ ಅಸಲೀಯತ್ತೇನು?

