ಸಿಕ್ಕ ಸಿಕ್ಕ ಜಾಗದಲ್ಲಿ ಮೂತ್ರ ಮಾಡಿದ್ರೆ ಹುಷಾರ್ ! : ಬಯಲಿನಲ್ಲಿ ಮೂತ್ರ ಮಾಡಿದ ವ್ಯಕ್ತಿಗೆ ಭಾರಿ ದಂಡ….!

ಬಯಲಿನಲ್ಲಿ ಮೂತ್ರ ಮಾಡಿದ ವ್ಯಕ್ತಿಗೆ ಭಾರಿ ದಂಡ ವಿಧಿಸಿ  ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳ ಕಠಿಣ ಕ್ರಮ ಕೈಗೊಂಡಿದ್ದಾರೆ.

ಹೌದು… ಆಟೋ ಚಾಲಕ ಚೇತನ್ ಎಂಬಾತ ರಸ್ತೆ ಬದಿ ಮೂತ್ರ ಮಾಡಿದ್ದಕ್ಕೆ 1000 ದಂಡ ವಿಧಿಸಿ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ತಿಲಕ್ ನಗರದ ವಲಯ ಕಚೇರಿ 6ರ ಬಳಿ ಬುದ್ದಿವಾದ ಹೇಳಿದ್ರೂ ಕ್ಯಾರೆ ಎನ್ನದ ಚೇತನ್ ಮೂತ್ರ ವಿಸರ್ಜನೆ ಮಾಡಿದ್ದನು.

ಜೊತೆಗೆ ಮಹಿಳಾ ಅರೋಗ್ಯ ನಿರೀಕ್ಷಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ದಂಡ ವಿಧಿಸಿದ ಪಾಲಿಕೆ ಅಧಿಕಾರಿಗಳು ಘಟನೆ ಬಗ್ಗೆ ಮಂಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಡಿದ ಮತ್ತಿನಲ್ಲಿ ನಡೆಸಿದ ಅಚಾತುರ್ಯಕ್ಕೆ 1000 ದಂಡ ವಿಧಿಸಿದ ಚೇತನ್ ಗೆ ಅಧಿಕಾರಿಗಳು ಹಾಗೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights