ಫ್ಯಾಕ್ಟ್‌ಚೆಕ್ : ಕೇಜ್ರಿವಾಲ್ ಊಟಕ್ಕೆ ತೆರಳಿದ್ದ ಆಟೋ ಚಾಲಕನ ಮನೆಯಲ್ಲಿ ಮೋದಿ ಫೋಟೊ ಇರಲಿಲ್ಲ

AAPಯ ಚುನಾವಣಾ ಪ್ರಚಾರದ ಭಾಗವಾಗಿ ಎರಡು ದಿನಗಳ ಹಿಂದೆ ಗುಜರಾತ್ ಪ್ರವಾಸದಲ್ಲಿದ್ದ ಅರವಿಂದ ಕೇಜ್ರಿವಾಲ್ ಅಗಸ್ಟ್‌ 13ರ ಸೋಮವಾರದಂದು ಅಹಮದಾಬಾದ್‌ನಲ್ಲಿ ಆಟೋರಿಕ್ಷಾ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಜ್ರಿವಾಲ್  ಭಾಷಣದ ನಂತರ ನಗರದ ಘಟ್ಲೋಡಿಯಾ ಪ್ರದೇಶದ ನಿವಾಸಿ ವಿಕ್ರಮ್ ದಾಂತನಿ ಎಂಬ ಆಟೋ-ರಿಕ್ಷಾ ಚಾಲಕ  ಕೇಜ್ರಿವಾಲ್ ಅವರನ್ನು ತನ್ನ ಮನೆಯಲ್ಲಿ ರಾತ್ರಿ ಊಟ ಮಾಡುವಂತೆ ವಿನಂತಿಸಿದ್ದ.

“ನಾನು ನಿಮ್ಮ ಅಭಿಮಾನಿ. ಸೋಷಿಯಲ್ ಮೀಡಿಯಾದಲ್ಲಿ ನಾನು ನೋಡಿದ ವೀಡಿಯೊದಲ್ಲಿ, ನೀವು ಪಂಜಾಬ್‌ನ ಆಟೋ ಡ್ರೈವರ್‌ನ ಮನೆಗೆ ಊಟಕ್ಕೆ ಹೋಗಿದ್ದೀರಿ. ಹಾಗಾದರೆ, ನೀವು ನನ್ನ ಮನೆಗೆ ಊಟಕ್ಕೆ ಬರುತ್ತೀರಾ?” ಎಂದು ದಾಂತನಿ ಕೇಳಿದ್ದ. ರಿಕ್ಷಾ ಚಾಲಕನ ಆಮಂತ್ರಣಕ್ಕೆ ದಿಲ್ಲಿ ಮುಖ್ಯಮಂತ್ರಿ ತಕ್ಷಣವೇ ಸಕಾರಾತ್ಮಕವಾಗಿ ಉತ್ತರಿಸಿದರು.

“ಪಂಜಾಬ್ ಮತ್ತು ಗುಜರಾತ್‌ನ ಆಟೋವಾಲಾಗಳು ನನ್ನನ್ನು ಪ್ರೀತಿಸುತ್ತಾರೆ. ನಾನು ಇಂದು ಸಂಜೆ ಬರಬೇಕೇ? ಎಷ್ಟು ಗಂಟೆಗೆ ಬರಬೇಕು. ನನ್ನನ್ನು ಹೊಟೇಲ್ ನಿಂದ ಕರೆದುಕೊಂಡು ಹೋಗಲು ಬರುವಿರಾ, ನಾವು ಮೂವರು ಊಟಕ್ಕೆ ಬರುತ್ತೇವೆ ” ಎಂದು ಎಎಪಿ ನಾಯಕ ಕೇಜ್ರಿವಾಲ್ ಹೇಳಿದ್ದರು.

ಪಂಜಾಬ್‌ನ ಆಟೋ ಡ್ರೈವರ್‌ನ ಮನೆಗೆ ಊಟಕ್ಕೆ ತೆರಳಿದ್ದ ಅರವಿಂದ ಕೇಜ್ರಿವಾಲ್, ರಿಕ್ಷಾ ಚಾಲಕನ ಮನೆಯ ಊಟವನ್ನು ಮೆಚ್ಚಿಕೊಂಡು, ಇಡೀ ಕುಟುಂಬವನ್ನು ದೆಹಲಿಗೆ ಆಹ್ವಾನಿಸಿದ್ದೇನೆ ಎಂದಿದ್ದರು,

ಈ ಹೇಳಿಕೆಯ ನಂತರ ಹಲವರು ಟ್ವೀಟ್ ಮಾಡಿದ್ದು ಅರವಿಂದ್ ಕೇಜ್ರಿವಾಲ್ ಮೂರ್ಖರಾಗಿದ್ದಾರೆ, ಈ ರಿಕ್ಷಾ ಡ್ರೈವರ್‌ನ ಕುಟುಂಬವು ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರಾಗಿದ್ದಾರೆ ಎಂದು ರಿಕ್ಷಾ ಡ್ರೈವರ್ ಮನೆಯ ಗೋಡೆಯ ಮೇಲೆ ಮೋದಿ ಫೋಟೊ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಕೇಜ್ರಿವಾಲ್ ಸೇರಿದಂತೆ ಆಪ್ ಮುಖ್ಯಸ್ಥರು ಕುಟುಂಬದೊಂದಿಗೆ ಮಾತುಕತೆ ನಡೆಸುತ್ತಿರುವ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಇದನ್ನು ಹಂಚಿಕೊಂಡ ಅನೇಕರು, ಮನೆಯ ಗೋಡೆಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಮಾರ್ಕ್ ಮಾಡಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಕೇಜ್ರಿವಾಲ್ ಊಟಕ್ಕೆ ಹೋಗಿದ್ದ ರಿಕ್ಷಾ ಚಾಲಕನ ಮನೆ ಮೋದಿಯನ್ನು ಬೆಂಬಲಿಸುವ ಕುಟುಂಬ ಎಂಬುದು ನಿಜವೇ ? ಅರವಿಂದ್ ಕೇಜ್ರಿವಾಲ್ ಅವರನ್ನು ಲೇವಡಿ ಮಾಡಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಸ್ವತಃ ಅರವಿಂದ್ ಕೇಜ್ರೀವಾಲ್ ಅವರೇ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡ ರಿಕ್ಷಾ ಚಾಲಕನ ಮನೆಯಲ್ಲಿ ಊಟ ಮಾಡಿದ ಫೋಟೋಗಳು ಲಭ್ಯವಾಗಿವೆ.

 

ವೈರಲ್ ಫೋಟೋದೊಂದಿಗೆ ಈ ಫೋಟೋಗಳನ್ನು ಹೋಲಿಕೆ ಮಾಡಿ ನೋಡಿದಾಗ ಮೋದಿ ಫೋಟೋ ಇರುವ ಜಾಗದಲ್ಲಿ ಆಟೋ ಡ್ರೈವರ್ ಕುಟುಂಬದ ಸದಸ್ಯರ ಯಾರದೋ ಫೋಟೋ ಇರುವುದು ಖಚಿತವಾಗಿದೆ.

ಮೂಲ ಪೋಟೋವನ್ನು ಗ್ರಾಫಿಕ್ಸ್ ಮೂಲಕ ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ ಎನ್ನುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅರವಿಂದ್ ಕೇಜ್ರಿವಾಲ್, ಗುಜರಾತಿನ ಆಟೋ ರಿಕ್ಷಾ ಡ್ರೈವರ್ ಮನೆಯಲ್ಲಿ ಊಟಕ್ಕೆ ತೆರಳಿದ್ದ ವೇಳೆ ಮೋದಿ ಪೋಟೋ ಇತ್ತು ಎಂದು ಎಡಿಟ್ ಮಾಡಲಾದ ಫೋಟೋವನ್ನು ಹಂಚಿಕೊಳ್ಳಲಾಗಿದೆ, ವಾಸ್ತವವಾಗಿ ಅಲ್ಲಿ ಇರುವುದು ಡ್ರೈವರ್‌ ಕುಟುಂಬದ ಸದಸ್ಯನ ಫೋಟೋ , ಅದು ಮೋದಿ ಫೊಟೋ ಅಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಈ ಮಹಿಳೆ ಒಮ್ಮೆಲೆ 9 ಶಿಶುಗಳಿಗೆ ಜನ್ಮ ನೀಡಿದ್ದಾಳೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights