ಫ್ಯಾಕ್ಟ್‌ಚೆಕ್ : ಈ ಮಹಿಳೆ ಒಮ್ಮೆಲೆ 9 ಶಿಶುಗಳಿಗೆ ಜನ್ಮ ನೀಡಿದ್ದಾಳೆ ಎಂಬುದು ಸುಳ್ಳು

ಗರ್ಭಿಣಿಯಂತೆ ಕಾಣುವ ಮಹಿಳೆಯೊಬ್ಬರು ಆಸ್ಪತ್ರೆಯ ಬೆಡ್‌ ಮೇಲೆ ಕುಳಿತಿರುವ ವಿಡಿಯೊವನ್ನು ಒಳಗೊಂಡಿರುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಮಹಿಳೆ ಒಮ್ಮೆಗೆ 9 ಶಿಶುಗಳಿಗೆ ಜನ್ಮ ನೀಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಮತ್ತು ವೈರಲ್ ವಿಡಿಯೋದಲ್ಲಿ ನವಜಾತ ಶಿಶುಗಳ ವಿಡಿಯೋ ಮತ್ತು ಸ್ಟಿಲ್‌ಗಳನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವಿಡಿಯಯೋದಲ್ಲಿರುವ ಗರ್ಭಿಣಿಯಂತೆ ಕಾಣುವ ಮಹಿಳೆ 9 ಮಕ್ಕಳಿಗೆ ಜನ್ಮ ನೀಡಿದ್ದಾರೆಯೇ ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ವಿಡಿಯೊ ಪೋಸ್ಟ್‌ಗೆ ಸಂಬಂಧಿಸಿದಂತೆ ಕೀವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ ದಡೂತಿ ಹೊಟ್ಟೆಯ ಮಹಿಳೆಯ ಕುರಿತು ಕೆಲವು ಸುದ್ದಿ ವರದಿಗಳು ಲಭ್ಯವಾಗಿವೆ. ಡೈಲಿ ಮೇಲ್ 2020 ರ ಅಕ್ಟೋಬರ್‌ನಲ್ಲಿ ಮಹಿಳೆಯ ಹೆಸರು ಹುವಾಂಗ್ ಗುವಾಕ್ಸಿಯಾನ್ ಎಂದು ವರದಿ ಮಾಡಿದೆ, ಟರ್ಮಿನಲ್ ಕ್ಯಾನ್ಸರ್‌ನಿಂದ ಆಕೆಯ ಹೊಟ್ಟೆಯು ಎರಡು ವರ್ಷಗಳವರೆಗೆ ಅಸಹಜವಾಗಿ ಬೆಳೆದಿದ್ದು, ಅಂಡಾಶಯದ ಕ್ಯಾನ್ಸರ್‌ನಿಂದಾಗಿ ಆಕೆಯ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿತ್ತು. ಮಹಿಳೆಯ ಹೊಟ್ಟೆಯಲ್ಲಿ ಬೆಳೆದಿದ್ದ ಗೆಡ್ಡೆ ಮತ್ತು ನೀರು ತುಂಬಿದ್ದ ಕಾರಣ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದಿದ್ದಾರೆ.

ಎರಡು ಮಕ್ಕಳ ತಾಯಿ, ಹುವಾಂಗ್ ಗೌಕ್ಸಿಯಾನ್, ಚೀನಾದ ಅನ್ಶುನ್ ಬಳಿಯ ಸಾಂಗ್ಕಿ ಟೌನ್‌ನ ದಾಝಿ ಗ್ರಾಮದ ನಿವಾಸಿ. ಅವಳು 54.8 ಕಿಲೋಗ್ರಾಂಗಳಷ್ಟು ತೂಗುತ್ತಾಳೆ, ಅದರಲ್ಲಿ, ಅವಳ ಹೊಟ್ಟೆಯಲ್ಲಿ ಸುಮಾರು 19 ಕಿಲೋಗ್ರಾಂಗಳಷ್ಟು ಗೆಡ್ಡೆ ಬೆಳೆದಿದೆ ಎಂದು ಅಗಸ್ಟ್‌ 2020 ರಲ್ಲಿ ಡೆಕ್ಕನ್ ಹೆರಾಲ್ಡ್‌ ವರದಿ ಮಾಡಿತ್ತು.

ಆಕೆಗೆ ಇದ್ದ ಆರೋಗ್ಯ ಸಮಸ್ಯೆಯನ್ನು ಪ್ರಕಟಿಸಿದ್ದ ಕೆಲವು ಇತರ ಸುದ್ದಿ ವರದಿಗಳನ್ನು ಇಲ್ಲಿ , ಇಲ್ಲಿ ಮತ್ತು ಇಲ್ಲಿ ಓದಬಹುದು . ಈ ಹಿಂದೆಯೂ ವೈರಲ್ ಪೋಸ್ಟ್ ಚಿತ್ರಗಳನ್ನು ತಪ್ಪಾಗಿ ಬಳಸಿ ಏಕಕಾಲದಲ್ಲಿ ಒಂಬತ್ತು ಶಿಶುಗಳಿಗೆ ಜನ್ಮ ನೀಡಿದೆ ಎಂದು ಹೇಳಿಕೊಳ್ಳಲಾಗಿದೆ, ಆದರೆ ಈ ಸುದ್ದಿ ಸುಳ್ಳು ಎಂದು ಸ್ಪಷ್ಟವಾಗಿದೆ.

ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಠಾಗ್ರಾಮ್‌ಗಳಲ್ಲಿ ಒಂದಿಲ್ಲೊಂದು ಸುಳ್ಳು ಸುದ್ದಿಗಳನ್ನು ಸಂಬಂಧವಿಲ್ಲದ ವಿಡಿಯೋ ಮತ್ತು ಫೋಟೋಗಳನ್ನ ಬಳಸಿಕೊಂಡು ಹಂಚಿಕೊಳ್ಳುತ್ತಲೇ ಇರುತ್ತಾರೆ,  ಏನ್‌ಸುದ್ದಿ.ಕಾಂ ಈ ಹಿಂದೆ 11 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ಎಂಬ ಇಂತಹದ್ದೆ ಸುದ್ದಿಯೊಂದು ವೈರಲ್ ಆದಾಗ ಅದನ್ನು ಪರಿಶೀಲಿಸಿ ಫ್ಯಾಕ್ಟ್‌ಚೆಕ್ ಮಾಡುವ ಮೂಲಕ ಸುದ್ದಿ ಸುಳ್ಳು ಎಂದು ಲೇಖನವನ್ನು ಪ್ರಕಟಿಸಿತ್ತು, ಇಲ್ಲಿ ಓದಬಹುದು

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಪೋಸ್ಟ್‌ನಿಂದ ಮಹಿಳೆಯ ಹೆಸರು ಹುವಾಂಗ್ ಗುವಾಕ್ಸಿಯಾನ್. ಅಂಡಾಶಯದ ಕ್ಯಾನ್ಸರ್ ನಿಂದಾಗಿ ಆಕೆಯ ಹೊಟ್ಟೆ ಅಸಹಜವಾಗಿ ಬೆಳೆದಾಗ, ವೈದ್ಯರು ಪರೀಕ್ಷಿಸಿ ಕ್ಯಾನ್ಸರ್ ನಿಂದಾಗಿ ಬಳಲುತ್ತಿದ್ದಳು, ಶಸ್ತ್ರ ಚಿಕಿತ್ಸೆಯ ಮೂಲಕ  ಹೊಟ್ಟೆಯಲ್ಲಿದ್ದ 19 ಕೆಜಿಯ ಗಡ್ಡೆ ಮತ್ತು ನೀರನ್ನು ತೆಗೆಯಲಾಗಿದೆ. ಆದರೆ ಈ ಮಹಿಳೆಯ ಫೋಟೋವನ್ನು 9 ಶಿಶುಗಳಿಗೆ ಜನ್ಮ ನೀಡಿದ ತಾಯಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ವ್ಯಕ್ತಿಯ ಮೃತ ದೇಹವನ್ನು ಎಳೆದೊಯ್ಯುತ್ತಿರುವ ಮೊಸಳೆಯ ವಿಡಿಯೊ ಬಿಹಾರದ್ದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights