ಫ್ಯಾಕ್ಟ್‌ಚೆಕ್: ಭಿಕ್ಷೆ ಬೇಡುತ್ತಿದ್ದ ಸಾಧುಗಳನ್ನು, ಮಕ್ಕಳ ಕಿಡ್ನಿ ಕಳ್ಳರು ಎಂದು ತಪ್ಪಾಗಿ ಹಂಚಿಕೆ

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳ ಅಪಹರಣ ಪ್ರಕರಣ ಎಂದು ಹೇಳಿಕೊಂಡು ಹಲವು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈಗ ಮತ್ತೆ ಅಂತಹದ್ದೆ ವಿಡಿಯೊವೊಂದು ಹರಿದಾಡುತ್ತಿದ್ದು, ಮೂರು ಮಕ್ಕಳ ಮೃತದೇಹಗಳ ಮುಂದೆ ಪೋಷಕರು ರೋದಿಸುತ್ತಿರುವ ಹಾಗೂ ಮತ್ತೊಂದು ವಿಡಿಯೋದಲ್ಲಿ ಕೆಲವು ಸಾಧುಗಳು ಪೊಲೀಸರ ವಶದಲ್ಲಿ ಇರುವ ದೃಶ್ಯಗಳನ್ನು ವೈರಲ್ ಮಾಡಲಾಗುತ್ತಿದೆ.

ಮಕ್ಕಳ ಕಿಡ್ನಿ ಮಾರುತ್ತಿದ್ದ 28 ಸಾಧುಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.  ಉತ್ತರ ಪ್ರದೇಶದಲ್ಲಿ ಪೊಲೀಸರು ಏನು ಮಾಡುತ್ತಿದ್ದಾರೆ, ಇಲ್ಲಿ ಏನು ನಡೆಯುತ್ತಿದೆ ಎಂದು ಉತ್ತರಿಸುವವರಾರು? ಬಾರಾಬಂಕಿ ಮತ್ತು ವಾರಣಾಸಿಯಲ್ಲಿ ಎಲ್ಲೆಂದರಲ್ಲಿ ಮಕ್ಕಳನ್ನು ಕದ್ದು, ಕಿಡ್ನಿ ತೆಗೆದು, ಅವರ ದೇಹಗಳನ್ನು ಕಾಡಿಗೆ ಎಸೆಯಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

https://twitter.com/MrKhan1A/status/1567350143921291265?ref_src=twsrc%5Etfw%7Ctwcamp%5Etweetembed%7Ctwterm%5E1567350143921291265%7Ctwgr%5Ec8c21d796d5d52710e5908b09fac78ab38b28c5d%7Ctwcon%5Es1_&ref_url=https%3A%2F%2Fthelogicalindian.com%2Ffact-check%2Fsadhus-being-arrested-for-stealing-childrens-kidneys-no-viral-claim-is-false-37357

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ, ಸಾಧು ವೇಷದಲ್ಲಿದ್ದ 28ಜನರ ಗುಂಪು ಮಕ್ಕಳನ್ನು ಕದ್ದು ಕಿಡ್ನಿ ಮಾರಾಟ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಹಂಚಿಕೊಂಡಿರು ವಿಡಿಯೋ ಸುಳ್ಳು ಎಂದು ದಿ ಲಾಜಿಕಲ್ ಇಂಡಿಯಾ ಫ್ಯಾಕ್ಟ್‌ಚೆಕ್  ತಂಡ ಪರಿಶೀಲಿಸಿದೆ. ವೈರಲ್ ಆಗಿರುವ ವಿಡಿಯೊಗಳಿಗೂ, ಅಲ್ಲಿ ನಡೆದಿರುವ ಘಟನೆಗೂ ಒಂದಕ್ಕೊಂದು ಸಂಬಂಧವಿಲ್ಲ ಎಂದು ವರದಿಯನ್ನು ಪ್ರಕಟಿಸಿದೆ.

ಘಟನೆ ನಡೆದಿರುವುದು ವಾರಣಾಸಿಯಲ್ಲಿ ಅಲ್ಲ :

6 ಸೆಪ್ಟೆಂಬರ್ 2022 ರ ವಾರಣಾಸಿ ಗ್ರಾಮಾಂತರ ಪೊಲೀಸ್‌ ಠಾಣೆ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ  ಮಾಡಿದ ಟ್ವೀಟ್‌ನಲ್ಲಿ ವೈರಲ್ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆಯನ್ನು ನಿರಾಕರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ವಾರಣಾಸಿ ಗ್ರಾಮಾಂತರದ್ದಲ್ಲ ಎಂದು ವಾರಣಾಸಿ ಪೊಲೀಸರು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಟ್ವೀಟ್‌ನ ಶೀರ್ಷಿಕೆಯು, “ಸಾಧುಗಳು ಮಕ್ಕಳಿಂದ ಮೂತ್ರಪಿಂಡಗಳನ್ನು ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾರೆ ಎಂಬ ತಪ್ಪುದಾರಿಗೆಳೆಯುವ ಹೇಳಿಕೆಯೊಂದಿಗೆ ವಾರಣಾಸಿ ಗ್ರಾಮಾಂತರ ಪೊಲೀಸರು ವೈರಲ್ ವೀಡಿಯೊವನ್ನು ನಿರಾಕರಿಸಿದ್ದಾರೆ.”

“ಕೆಲವು ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ವೀಡಿಯೊ ವೈರಲ್ ಆಗುತ್ತಿದೆ. ಮಕ್ಕಳ ಕಿಡ್ನಿ ಕದ್ದ ಆರೋಪದ ಮೇಲೆ ಕೆಲವು ಸಾಧುಗಳನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಬರಗಾಂವ್ ಪ್ರದೇಶದ ಇಂದ್ರಾವರ್ ಗ್ರಾಮದಲ್ಲಿ ಭಿಕ್ಷೆಗಾಗಿ ತಿರುಗುತ್ತಿದ್ದ ಸಾಧುಗಳನ್ನು ಅನುಮಾನಿಸಿದ ಗ್ರಾಮಸ್ಥರು, ಅವರ ಹೆರು ಮತ್ತು ವಿಳಾಸವನ್ನು ಕೇಳಲಾರಂಭಿಸಿದ್ದಾರೆ, ತಕ್ಷಣ ವಿಚಲಿತರಾದ ಸಾಧುಗಳು ಪ್ರತಿಕ್ರಿಯೆ ಕೊಡಲು ತಡವರಿಸಿದಾಗ ಅವರನ್ನು ಗ್ರಾಮಸ್ಥರು ಸುತ್ತುವರೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾಧುಗಳನ್ನು ವಿಚಾರಣೆ ನಡಿಸಿರು ಪೊಲೀಸರು ಅವರ ಹೆಸರು ಮತ್ತು ವಿಳಾಸಗಳನ್ನು ವಿಚಾರಣೆಯ ಸಮಯದಲ್ಲಿ ಅವರ ವಾಸಸ್ಥಳದಿಂದ ಪರಿಶೀಲಿಸಲಾಗಿದೆ ಮತ್ತು ಅವರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Image Credit: Dainik Bhaskar

ವೈರಲ್ ವಿಡಿಯೊ ವಾರಣಾಸಿ ಗ್ರಾಮಾಂತರದಲ್ಲ. ವಾರಣಾಸಿ ಗ್ರಾಮಾಂತರ ಪೊಲೀಸರು, ವೈರಲ್ ವಿಡಿಯೋ ಕುರಿತು ಮಾತನಾಡಿದ್ದು, ದಯವಿಟ್ಟು ತಪ್ಪುದಾರಿಗೆಳೆಯುವ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ವದಂತಿಗಳನ್ನು ಹರಡಬೇಡಿ ಇಲ್ಲದಿದ್ದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೆ ದೈನಿಕ್ ಭಾಸ್ಕರ್ ಕೂಡ ವರದಿ ಮಾಡಿದ್ದಾರೆ

ವೈರಲ್ ವಿಡಿಯೋದಲ್ಲಿ ನಡೆದಿರುವ ಘಟನೆ ಬರಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು,  ಕೆಲ ಸಾಧುಗಳು ಭಿಕ್ಷೆ ಬೇಡಲು ಇಲ್ಲಿಗೆ ಬಂದಿದ್ದಾರೆ. 6 ಜನರು ಭಿಕ್ಷೆ ಕೇಳಲು ಬೀರಪಟ್ಟಿ ಗ್ರಾಮಕ್ಕೆ ತಲುಪಿದ್ದರು, ಅಲ್ಲಿ ಗ್ರಾಮಸ್ಥರು ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಾಧುಗಳ ಮೇಲೆ ಹಲ್ಲೆ ನಡೆಸಿದ್ದಾರೆ.  ಅದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆ ಸಾಧುಗಳನ್ನು ಗುಂಪಿನಿಂದ ರಕ್ಷಿಸಿದ್ದಾರೆ,  ಕೂಲಂಕಷವಾಗಿ ತನಿಖೆ ಮಾಡಿದ ನಂತರ ಅವರನ್ನು ಬಿಡುಗಡೆ ಮಾಡಿದ್ದೇವೆ, ಕೆಲವು ಸಮಾಜ ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ, ಹೀಗೆ ಸುಳ್ಳು ಸುದ್ದಿ  ಹರಡುವವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾರೆ, ವಾರಣಾಸಿಯ ಬೀರಪಟ್ಟಿ ಗ್ರಾಮದಲ್ಲಿ ಭಿಕ್ಷೆ ಬೇಡಲು ಹೋದ ಸಾಧುಗಳನ್ನು, ಮಕ್ಕಳ ಕಳ್ಳರು ಎಂದು ಅನುಮಾನಿಸಿದ ಸ್ಥಳೀಯರು ಅವರನ್ನು ಥಳಿಸಿದ್ದಾರೆ. ಆದರೆ ವಾಸ್ತವವಾಗಿ ಅವರು ಮಕ್ಕಳ ಕಳ್ಳರಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ವ್ಯಕ್ತಿಯ ಮೃತ ದೇಹವನ್ನು ಎಳೆದೊಯ್ಯುತ್ತಿರುವ ಮೊಸಳೆಯ ವಿಡಿಯೊ ಬಿಹಾರದ್ದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights