ಶ್ವೇತಭವನದ ಹೊರಗೆ ಗುಂಡಿನ ದಾಳಿ; ನನ್ನನ್ನು ಗುರಿಯಾಗಿಸಿದ್ದಲ್ಲ: ಟ್ರಂಪ್‌

ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ಅಮೆರಿಕಾ ರಹಸ್ಯ ಸೇವಾ ಪಡೆ ಸಿಬ್ಬಂದಿ ಗುಂಡು ಹಾರಿಸಿರುವ ಘಟನೆ ಅಮೆರಿಕದ ವಾಷಿಂಗ್ಟನ್ ನಲ್ಲಿರುವ ಶ್ವೇತಭವನದ ಹೊರ ಭಾಗದಲ್ಲಿ ನಡೆದಿದೆ.

ನಿನ್ನೆ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ಶ್ವೇತಭವನದ ಹೊರಗೆ ಗುಂಡಿನ ಶಬ್ದ ಕೇಳಿಸಿತ್ತು. ಕೂಡಲೇ ರಹಸ್ಯ ಸೇವಾ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಸ್ವಯಂಚಾಲಿತ ರೈಫಲ್ ಗಳಿಂದ ಶಸ್ತ್ರಾಸ್ತ್ರ ಹೊಂದಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾರೆ.

ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ಟ್ರಂಪ್‌, “ಶ್ವೇತಭವನ ಹೊರಗೆ ಶೂಟ್‌ಔಟ್‌ ಆಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸೀಕ್ರೆಟ್ ಸರ್ವೀಸ್ ಏಜೆಂಟ್ಸ್​ ದೊಡ್ಡ ಅನಾಹುತವನ್ನು ಕ್ಷಿಪ್ರವಾಗಿ ತಡೆದಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿದೆ. ಈ ಘಟನೆ ಶ್ವೇತಭವನದ ಆವರಣದಿಂದ ಹೊರಗೆ ನಡೆದಿದ್ದು, ಇದು ನನ್ನನ್ನು ಗುರಿಯಾಗಿಸಿದ್ದಲ್ಲ ಎಂದು ಭಾವಿಸಿದ್ದೇನೆ. ಯಾವುದೇ ರೀತಿಯಲ್ಲೂ ವೈಟ್​ಹೌಸ್​ನ ಭದ್ರತಾ ಲೋಪವಾಗಿಲ್ಲ ಎಂದು ನಂಬಿದ್ದೇನೆ” ಎಂದು ಟ್ರಂಪ್​ ಹೇಳಿಕೊಂಡಿದ್ದಾರೆ.

ಶಸ್ತ್ರಾಸ್ತ್ರ ಹೊಂದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಅಮೆರಿಕನ್ ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿರಾಹುಲ್ ಭೇಟಿ ಮಾಡಿದ ಸಚಿನ್ ಪೈಲಟ್; ಕಾಂಗ್ರೆಸ್‌ ಸರ್ಕಾರಕ್ಕಿಲ್ಲ ಪತನ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights