ಹೊಸ ಇ-ವೇ ಬಿಲ್ ಹಾಗೂ ಇಂಧನ ಬೆಲೆ ಏರಿಕೆ ಖಂಡಿಸಿ ನಾಳೆ ಭಾರತ್ ಬಂದ್!

ಹೊಸ ಇ-ವೇ ಬಿಲ್ ಹಾಗೂ ಇಂಧನ ಬೆಲೆ ಏರಿಕೆ ಖಂಡಿಸಿ ಫೆಬ್ರವರಿ 26ಕ್ಕೆ ಅಖಿಲ ಭಾರತ ವರ್ತಕರ ಒಕ್ಕೂಟ ಭಾರತ್ ಬಂದ್ ಮಾಡಲು ಕರೆ ಕೊಟ್ಟಿದೆ.

ಎಲ್ಲಾ ಸಾರಿಗೆ ಸಂಘಟನೆಗಳು ತಮ್ಮ ಬೆಂಬಲವನ್ನು ಖಚಿತಪಡಿಸಿದ್ದು, ಅಂದು ಸಾರಿಗೆ ವಾಹನಗಳು ರಸ್ತೆಗಿಳಿಯುವುದಿಲ್ಲ ಎನ್ನಲಾಗಿದೆ. ಸುಮಾರು 40 ಲಕ್ಷ ಟ್ರಕ್ ಗಳು ರಸ್ತೆಗಿಳಿಯುವುದಿಲ್ಲ ಎಂದುಯ ತಿಳಿದುಬಂದಿದೆ. ಅಖಿಲ ಭಾರತ ಸಾರಿಗೆ ಸಂಘ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ಚಕ್ಕಾ ಜಾಮ್ ನಡೆಸುವುದಾಗಿ ತಿಳಿದುಬಂದಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇಂಧನ ಬೆಲೆ ದರ ಏರಿಕೆ, ಸರಕು ಹಾಗೂ ಸೇವಾ ತೆರಿಗೆ –ಜಿಎಸ್ ಟಿ ಹಾಗೂ ಹೊಸ ಇ-ವೇ ಬಿಲ್ ನೀತಿ ವಿರುದ್ಧ ಭಾರತ್ ಬಂದ್ ನಡೆಸಲಾಗುವದು ಎಂದು ಸಾರಿಗೆ ಸಂಘಟನೆ ಮಾಹಿತಿ ನೀಡಿದೆ. ಈ ಹೊಸ ಇ-ವೇ ಬಿಲ್ ನೀತಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಪ್ರತಿಭಟನೆ ಮೂಲಕ ಒತ್ತಾಯಿಸಿಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ. ಎಲ್ಲಾ ಸಾರಿಗೆ ಸಂಸ್ಥೆಗಳು ವಾಹನಗಳನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8ಗಂಟೆವರೆಗೆ ನಿಲ್ಲಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ.

ಅಗತ್ಯ ವಸ್ತುಗಳ ಸರಬರಾಜು ವ್ಯತ್ಯಯವಾಗುತ್ತಿದೆ. ಅಂದು ಬಹುಪಾಲು ಸಾರಿಗೆ ವಾಹನಗಳು ರಸ್ತೆಗಿಳಿಯದ ಕಾರಣ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಂಭವವಿದೆ ಎನ್ನಲಾಗಿದೆ. ಎಲ್ಲಾ ಸಾರಿಗೆ ಗೋಡೌನ್ಗಳ ಬಳಿ ಪ್ರತಿಭಟನಾ ಬ್ಯಾನರ್ ಗಳನ್ನು ಹಾಕಲಿದ್ದು, ಒಂದು ದಿನದ ಬುಕಿಂಗ್ ತಿರಸ್ಕರಿಸುವುದಾಗಿ AITWA ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ಆರ್ಯ ತಿಳಿಸಿದ್ದಾರೆ. ಸುಮಾರು 40 ಲಕ್ಷ ಟ್ರಕ್ ಗಳು ರಸ್ತೆಗಿಳಿಯುವುದಿಲ್ಲ ಎಂದು ತಿಳಿದುಬಂದಿದೆ.

ಮಾತ್ರವಲ್ಲ ಇ-ವೇ ಬಿಲ್ ನೀತಿಯಿಂದ  ನಾನುಕೂಲ ಉಂಟಾಗಿದೆ. ಜೊತೆಗೆ ಇ-ವೇ ಬಿಲ್ ದಂಡದ ಮೊತ್ತವೂ ದುಬಾರಿಯಾಗಿದೆ. ಸಣ್ಣ ಹಾಗೂ ಮಧ್ಯಮ ಸರಕು ಸಾಗಣೆದಾರರು, ಅದರಲ್ಲೂ ಚಿಲ್ಲರೆ ಸಾಗಣೆದಾರರಿಗೆ ಇದು ದುಬಾರಿ ಹೊರೆ ಎನಿಸಿದೆ. ಲಕ್ಷಗಟ್ಟಲೆ ದಂಡದ ಮೊತ್ತವನ್ನು ಪಾವತಿಸಬೇಕಾಗಿದ್ದು, ವಹಿವಾಟಿಗೇ ಧಕ್ಕೆಯಾಗುತ್ತಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಅಖಿಲ ಭಾರತ ಸಾರಿಗೆ ಸಂಘ ಕೇಂದ್ರಕ್ಕೆ ಪತ್ರ ಬರೆಯಲಿದ್ದು, ಸಾರಿಗೆ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳನ್ನು ಉಲ್ಲೇಖಿಸಲಾಗುವುದು. ಅದರಲ್ಲೂ ಜಿಎಸ್ಟಿ ಅಡಿಯಲ್ಲಿನ ಇ-ವೇ ಬಿಲ್ ನೀತಿ ಹಾಗೂ ಇಂಧನ ಬೆಲೆ ಏರಿಕೆ ಕುರಿತು ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದೆ. ಇ-ಇನ್ ವಾಯ್ಸ್ ಉತ್ತಮವಾಗಿದ್ದು, ಫಾಸ್ಟ್ಟ್ಯಾನ್ ಮೂಲಕ ಸರ್ಕಾರ ವಾಹನಗಳ ಟ್ರ್ಯಾಕ್ ಮಾಡಬಹುದಾಗಿದೆ ಎಂದು ಸಂಘಟನೆ ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights