ಹಲೋ.. ಹಲೋ.. ಕೌರವ.. ಇದೇನಿದು ಹೊಸ ವೇಶಾ..? ಮನೆಯಲ್ಲೇ ಲಸಿಕೆ ಹಾಕಿಸಿಕೊಂಡ ಬಿಸಿ ಪಾಟೀಲ್!

ಮನೆಯಲ್ಲೇ ಲಸಿಕೆ ಪಡೆದ ಸಚಿವ ಬಿ.ಸಿ ಪಾಟೀಲ್ ವಿರುದ್ಧ ಜನ ಆಕ್ರೊಶಗೊಂಡಿದ್ದಾರೆ. ಖುದ್ದು ಪ್ರಧಾನಿಗಳೇ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಿರುವಾಗ ಸಚಿವ ಬಿಸಿ ಪಾಟೀಲ್ ಅದು ಹೇಗೆ ಮನೆಯಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನ ಮಂತ್ರಿಗಳಿಗಿಂತ, ಮುಖ್ಯಮಂತ್ರಿಗಳಿಗಿಂತ, ಸಚಿವ ಬಿಸಿ ಪಾಟೀಲ್ ಬ್ಯೂಸಿನಾ ಎಂದು ಜನ ಪ್ರಶ್ನೆ ಎತ್ತಿದ್ದಾರೆ. ಅದ್ರಲ್ಲೂ 60 ವರ್ಷ ಮೇಲ್ಪಟ್ಟ ಹಿರಿಯರು ಆಸ್ಪತ್ರೆಗೆ ತೆರಳಿ ಗಂಟೆಗಟ್ಟಲೆ ಕಾದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಕೊರೊನಾ ಲಸಿಕೆ ಗೈಡ್ ಲೈನ್ ಪ್ರಕಾರ ಲಸಿಕೆ ಪಡೆದ ಕೆಲ ಹೊತ್ತು ವ್ಯಕ್ತಿ ಮೇಲ್ವೆಚಾರಣೆ ಮಾಡಲಾಗುತ್ತದೆ. ಒಂದು ವೇಳೆ ಅಡ್ಡ ಪರಿಣಾಮಗಳು ಕಂಡು ಬಂದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಇದೆಲ್ಲವನ್ನು ಕಡೆಗಣಿಸಿ ಸಚಿವರು ಮನೆಯಲ್ಲೇ ಲಸಿಕೆ ಪಡೆದುಕೊಡಿದ್ದಾರೆ. ಇದು ಸದ್ಯ ಜನಸಾಮಾನ್ಯರಿಗೆ ಒಂದು ನಿಯಮ ಹಾಗೂ ಮಂತ್ರಿಗಳಿಗೆ ಒಂದು ನಿಯಮನಾ ಎನ್ನುವ ಪ್ರಶ್ನೆ ಹುಟ್ಟಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ” ಯಾವುದೇ ವಿವಿಐಪಿಗಳು ಆದರೂ ಮನೆಗೆ ಹೋಗಿ ಲಸಿಕೆ ನೀಡಬಾರದು ಎಂದು ಸುತ್ತೋಲೆ ಹೊರಡಿಸುತ್ತೇನೆ. ಇದರ ವಿರುದ್ಧ ಇಂದೇ ಕ್ರಮ ಕೈಗೊಳ್ಳುತ್ತೇನೆ. ಈ ಬಗ್ಗೆ ಮಾಹಿತಿ ನೀಡಲು ಬಿಸಿ ಪಾಟೀಲ್ ಅವರಿಗೆ ಹೇಳಿದ್ದೇನೆ” ಎಂದಿರು.

ಜೊತೆಗೆ ವಿಪಕ್ಷ ನಾಯಕರು ಇದನ್ನ ಟೀಕಿಸಲು ಶುರು ಮಾಡಿದ್ದಾರೆ. ಈ ಬಗ್ಗೆ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ  ಹೆಚ್.ಡಿ ಕುಮಾರಸ್ವಾಮಿ,“ ಈ ಸರ್ಕಾರದಲ್ಲಿ ಯಾರು ಏನ್ ಬೇಕಾದರು ಮಾಡಬಹುದು” ಎಂದು ಟೀಕಿಸಿದ್ದಾರೆ.

ಮತ್ತೊಂದು ದುರಾದೃಷ್ಟ ಅಂದರೆ ಯಾಕ್ ಸರ್ ನೀವು ಮನೆಯಲ್ಲಿ ಲಸಿಕೆ ಹಾಕಿಸಿಕೊಂಡ್ರಿ ಎನ್ನುವ ಪ್ರಶ್ನೆಗೆ ಸಚಿವ ಬಿಸಿ ಪಾಟೀಲ್ ಉಡಾಫೆ ಉತ್ತರ ಕೊಟ್ಟಿದ್ದಾರೆ. ” ಇದೇನು ದೊಡ್ಡ ಅಪರಾದನಾ?” ಎಂದು ಪ್ರಶ್ನೆ ಮಾಡಿದ್ದಾರೆ. 60 ವರ್ಷದ ಒಳಗಿನವರಿಗೆ ಲಸಿಕೆ ಹಾಕುತ್ತಾರೆ ಎಂದು ಗೊತ್ತು. ಆದರೆ ಅದರ ಗೈಡ್ ಲೈನ್ ಗೊತ್ತಿರಲಿಲ್ಲ. ನಿನ್ನೆ ಮನೆಗೆ ಬರೋದು ಲೇಟ್ ಆಗಿತ್ತು. ಜೊತೆಗೆ ಇಂದು ಮನೆ ಮುಂದೆ ಜನ ಕಾಯುತ್ತಿದ್ದರು. ಬೇರೆ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಹೀಗಾಗಿ ಲಸಿಕೆ ಹಾಕಿಸಿಕೊಂಡು ಕಾಯಿಬಹುದು ಎಂದು ಇಲ್ಲೇ ಹಾಕಿಸಿಕೊಂಡೆ” ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights