ಸಾಹುಕಾರ ಸಿಡಿ ಪ್ರಕರಣ : 2+3+4 ಯಾರು? ಗುಟ್ಟು ತೆರೆದಿಟ್ಟ ಹೆಚ್ಡಿಕೆ..!

ಕಳೆದ ವಾರ ಬಿಡುಗಡೆಯಾದ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ನೂರಕ್ಕೆ ನೂರರಷ್ಟು ಸಿಡಿ ನಕಲಿಯಾಗಿದೆ. ಮಹಿಳೆಯ ಹಿಂದೆ 2+3+4 ಜನ ಇದ್ದಾರೆ ಎನ್ನುವ ಮಾತನ್ನು ಹೇಳಿದ್ದಾರೆ.

ಇದೇ ಹೇಳಿಕೆಯನ್ನು ರಮೇಶ್ ಸಹೋದರ ಬಾಲಚಂದ್ರ ಜಾರಕಿಹೊಳಿ ಕೂಡ ಹೇಳಿದ್ದಾರೆ. ಮಹಿಳೆಯ ಹಿಂದೆ ಇಬ್ಬರಿದ್ದಾರೆ. ಆ ಇಬ್ಬರಿ ಹಿಂದೆ ಮೂವರು ಇದ್ದಾರೆ. ಆ ಮೂವರ ಹಿಂದೆ ನಾಲ್ವರು ಇದ್ದಾರೆ ಎನ್ನುವ ಮಾತನ್ನು ರಮೇಶ್ ಇಂದು ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಇದು ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ” 2+3+4 ಯಾರು ಅಂತ ಬಾಲಚಂದ್ರ ಹೇಳಬೇಕು. ಬಹುಶ: ಇಲ್ಲಿಂದ ಬಾಂಬೆಗೆ ಹೋದವರು ಇಬ್ಬರು. ಅಲ್ಲಿ ಇವರನ್ನು ಸ್ವಾಗತಿಸಿ ನೋಡಿದ್ದು ಮೂವರು ನಂತರ ಬರುವಾಗ ಕಳುಹಿಸಿದ್ದು ನಾಲ್ವರು ಇರಬೇಕು ” ಎಂದು ಗುಟ್ಟು ತೆರೆದಿಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್, ” ಸಿಡಿ ವಿಚಾರಕ್ಕೂ ಬಾಂಬೆ ಟ್ರಿಪ್ ಗೂ ಯಾವುದೇ ಸಂಬಂಧವಿಲ್ಲ. ಇದು ಕೇಲವ6-7 ತಿಂಗಳ ಹಿಂದೆ ನಡೆದಿದೆ” ಎಂದು ವಾಗ್ದಾಳಿ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights