ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿ ಸಾಕ್ಷಿಗೆ ಎಂಎಸ್ ಧೋನಿ ಕೊಟ್ಟ ಗಿಫ್ಟ್ ಏನು ಗೊತ್ತಾ?

ಎಂಎಸ್ ಧೋನಿ ತಮ್ಮ 11 ನೇ ವಿವಾಹ ವಾರ್ಷಿಕೋತ್ಸವನ್ನು ಸಿಂಪಲ್ಲಾಗಿ ಆಚರಿಸಿಕೊಂಡು ಪತ್ನಿ ಸಾಕ್ಷಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ.

ಹೌದು.. ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತು ಅವರ ಪತ್ನಿ ಸಾಕ್ಷಿ ತಮ್ಮ 11 ನೇ ವಿವಾಹ ವಾರ್ಷಿಕೋತ್ಸವವನ್ನು ಈ ತಿಂಗಳ ಆರಂಭದಲ್ಲಿ ಜುಲೈ 4 ರಂದು ಆಚರಿಸಿಕೊಂಡಿದ್ದಾರೆ. ವಾರ್ಷಿಕೋತ್ಸವದ ಉಡುಗೊರೆಯಾಗಿ ಪತ್ನಿಗೆ ಧೋನಿ ವಿಂಟೇಜ್ ವೋಕ್ಸ್‌ವ್ಯಾಗನ್ ಬೀಟಲ್ ಕಾರನ್ನು ನೀಡಿದ್ದಾರೆ ಎಂದು ಸಾಕ್ಷಿ ಬಹಿರಂಗಪಡಿಸಿದ್ದಾರೆ.

ಜೊತೆಗೆ ಕಾರ್ ನ ಫೋಟೋ ಹಂಚಿಕೊಂಡ ಸಾಕ್ಷಿ “ವಾರ್ಷಿಕೋತ್ಸವದ ಉಡುಗೊರೆಗೆ ಧನ್ಯವಾದಗಳು” ಎಂದು ಬರೆದಿದ್ದಾರೆ.

ಧೋನಿ ವಾಹನಗಳ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದಿದೆ. ಅವರು ಕಾರುಗಳು ಮತ್ತು ಬೈಕುಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಅದರಲ್ಲಿ ಈ ಕಾರ್ ಕೂಡ ಸೇರ್ಪಡೆಯಾಗಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.

Spread the love

Leave a Reply

Your email address will not be published. Required fields are marked *