ಚುನಾವಣಾ ಆಯೋಗದ ವರದಿಯಲ್ಲಿ ವಿಶ್ವಾಸವಿಲ್ಲ; ಉನ್ನತ ಮಟ್ಟದ ತನಿಖೆಯಾಗಬೇಕು: TMC ಒತ್ತಾಯ
ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ದಾಳಿ ನಡೆದಿಲ್ಲ ಎಂದು ಹೇಳಿರುವ ಚುನಾವಣಾ ಆಯೋಗದ ಅಭಿಪ್ರಾಯವನ್ನು ನಾವು ಒಪ್ಪುವುದಿಲ್ಲ ಎಂದು ಟಿಎಂಸಿ ಹೇಳಿದೆ. ಅಲ್ಲದೆ, ಚುನಾವಣಾ ವೀಕ್ಷಕರ ವಿಚಾರಣೆಯ ಬಗ್ಗೆ ವಿಶ್ವಾಸಾರ್ಹತೆ ಇಲ್ಲ. ಹಾಗಾಗಿ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಆದರೆ, ಭದ್ರತಾ ಕೊರತೆಗಳಿವೆ ಎಂದು ಇಸಿ ಒಪ್ಪಿಕೊಂಡಿದೆ ಮತ್ತು ಕೆಲವು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಪಕ್ಷದ ವಕ್ತಾರ ಸೌಗತಾ ರಾಯ್ ಹೇಳಿದ್ದಾರೆ.
ಇಬ್ಬರು ವಿಶೇಷ ಚುನಾವಣಾ ವೀಕ್ಷಕರು, ಟಿಎಂಸಿ ಮುಖ್ಯಸ್ಥೆಯ ಮೇಲೆ ಯಾವುದೇ ದಾಲಿ ನಡೆದಿಲ್ಲ. ಭದ್ರತೆಯ ಕೊರತೆಯಿಂದಾಗಿ ಅವರಿಗೆ ಗಾಯವಾಗಿದೆ ಎಂದು ವರದಿ ಕಳಿಸಿದ್ದು, ಅದನ್ನು ಚುನಾವಣಾ ಆಯೋಗವು ಸಮ್ಮತಿಸಿದೆ.
ಭದ್ರಾತಾ ನಿರ್ದೇಶಕ ಐಪಿಎಸ್ ಅಧಿಕಾರಿ ವಿವೇಕ್ ಸಹಯ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಿ ತಕ್ಷಣವೇ ಅಮಾನತುಗೊಳಿಸಬೇಕು ಎಂದು ವರದಿಯಲ್ಲಿ ಮತದಾನ ಸಮಿತಿ ಆದೇಶಿಸಿದೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿ ಕಾಲಿಗೆ ಪೆಟ್ಟು: ಭದ್ರತಾ ನಿರ್ದೇಶಕ-ಪೊಲೀಸ್ ವರಿಷ್ಠಾಧಿಕಾರಿ ಅಮಾನತು; ಜಿಲ್ಲಾಧಿಕಾರಿ ವರ್ಗಾ!
ವರದಿ ಬಂದ ನಂತರ, ಪುರ್ಬಾ ಮೇದಿನಿಪುರದ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಪ್ರಕಾಶ್ ಅವರನ್ನು ಅಮಾನತುಗೊಳಿಸಲಾಗಿದ್ದು, ಜಿಲ್ಲಾಧಿಕಾರಿ ವಿಭು ಗೋಯೆಲ್ ಅವರನ್ನು ವರ್ಗಾಯಿಸಲಾಗಿದೆ.
“ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂಬ ವಿಶೇಷ ಚುನಾವಣಾ ವೀಕ್ಷಕರ ವರದಿಯನ್ನು ಆಧಾರದ ಮೇಲೆ ನಾವು ‘ಇಸಿ’ಯ ವೀಕ್ಷಣೆಯನ್ನು ಒಪ್ಪುವುದಿಲ್ಲ. ಚುನಾವಣಾ ವೀಕ್ಷಕರ ವರದಿಯಲ್ಲಿ ವಿಶ್ವಾಸಾರ್ಹತೆ ಇಲ್ಲ ಮತ್ತು ವಿಶ್ವಾಸವನ್ನು ಗಳಿಸುವಲ್ಲಿ ವರದಿಯು ವಿಫಲವಾಗಿದೆ. ಹಾಗಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬ ನಮ್ಮ ಬೇಡಿಕೆಯನ್ನು ನಾವು ಪುನರುಚ್ಚರಿಸುತ್ತೇವೆ” ಎಂದು ಸೌಗತ್ ರಾಯ್ ಹೇಳಿದರು.
“ಭದ್ರತಾ ಕೊರತೆಗಳ ಬಗ್ಗೆ ಇಸಿ ಅಧಿಕಾರಿಗಳನ್ನು ತೆಗೆದುಹಾಕಿದ್ದು ಸ್ವಾಗತಾರ್ಹ ಕ್ರಮವಾಗಿದೆ. ಕನಿಷ್ಠ ಅವರು ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಮುಖ್ಯಮಂತ್ರಿಯ ಭದ್ರತೆಯಲ್ಲಿ ಹೇಗೆ ದೋಷಗಳು ಉಂಟಾಗಿವೆ ಎಂಬುದರ ಬಗ್ಗೆ ನಾವು ಪ್ರಶ್ನೆಯನ್ನು ಎತ್ತಿದ್ದೇವೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಪೆಟ್ಟು ತಿಂದ ಹುಲಿ ಹೆಚ್ಚು ಅಪಾಯಕಾರಿ; ಎಂದಿಗೂ ತಲೆಬಾಗುವುದಿಲ್ಲ: ಮಮತಾ ಬ್ಯಾನರ್ಜಿ

