ಫೇಸ್‌ಬುಕ್‌ನಲ್ಲಿ ಕೊನೆಯ ಸಂದೇಶ ಕಳುಹಿಸಿ ಕೋವಿಡ್ ಸೋಂಕಿತ ವೈದ್ಯೆ ಸಾವು…!

ಫೇಸ್‌ಬುಕ್‌ನಲ್ಲಿ ವಿದಾಯ ಹೇಳಿದ ಒಂದು ದಿನದ ನಂತರ ಮುಂಬೈ ವೈದ್ಯೆಯೊಬ್ಬರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.

ಸೆವ್ರಿ ಟಿಬಿ ಆಸ್ಪತ್ರೆಯ 51 ವರ್ಷದ ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಮನಿಷಾ ಜಾಧವ್ ಅವರು ಸೋಮವಾರ ಕೋವಿಡ್ಗೆ ಬಲಿಯಾಗುವ ಮೊದಲು ಅವರ ಕೊನೆಯ ಸಂದೇಶವಿದು.. ” ಬಹುಶಃ ಇದು ನನ್ನ ಕೊನೆಯ ಗುಡ್ ಮಾರ್ನಿಂಗ್ ಆಗಿರಬಹುದು. ಈ ವೇದಿಕೆಯಲ್ಲಿ ನಾನು ನಿಮ್ಮನ್ನು ಮತ್ತೆ  ಭೇಟಿಯಾಗಲಾರೆ ಅನ್ನಿಸುತ್ತೆ. ಎಲ್ಲರು ಆರೋಗ್ಯ ನೋಡಿಕೊಳ್ಳಿ. ದೇಹ ಸಾಯುತ್ತದೆ. ಆತ್ಮ ಸಾಯುವುದಿಲ್ಲ” ಎಂದು ಬರೆದಿದ್ದಾರೆ.

ಡಾ. ಮನೀಷಾ ಜಾಧವ್ ಅವರು ಕ್ಲಿನಿಕಲ್ ಮತ್ತು ಆಡಳಿತಾತ್ಮಕ ಪಾತ್ರಗಳನ್ನು ತ್ವರಿತವಾಗಿ ನಿರ್ವಹಿಸುವುದರಲ್ಲಿ ಹೆಸರುವಾಸಿಯಾಗಿದ್ದರು. ನಾಗರಿಕ ಆರೋಗ್ಯ ಸೆಟಪ್‌ನಿಂದ ಸೋಂಕಿನಿಂದ ಸಾವನ್ನಪ್ಪಿದ ಮೊದಲ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ತಿಳಿಸಿದೆ.

ಮಹಾರಾಷ್ಟ್ರದಲ್ಲಿ 18,000 ವೈದ್ಯರು ಕೋವಿಡ್ ರೋಗಕ್ಕೆ ತುತ್ತಾಗಿದ್ದಾರೆ ಮತ್ತು 168 ಮಂದಿ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.

May be last Good Morning. I may not meet you here on this plateform. Take care all.
Body die. Soul doesnt. Soul is immortal 🙏🙏🙏🙏
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights