Fact Check: ಆನ್‌ಲೈನ್ ಡೆತ್ ಸರ್ಟಿಫಿಕೇಟ್‌ನಲ್ಲಿ ಪ್ರಧಾನಿ ಮೋದಿಯವರ ಫೋಟೋ ಇರುವುದು ಸುಳ್ಳು!

ಒಬ್ಬ ವ್ಯಕ್ತಿಯು ತಮ್ಮ COVID-19 ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹಿಡಿದರುವ ಚಿತ್ರವನ್ನು ಆನ್‌ಲೈನ್‌ ಡೆತ್‌ ಸರ್ಟಿಫಿಕೇಟ್‌ನಲ್ಲಿಯೂ ಮೋದಿ ತಮ್ಮ ಫೋಟೋವನ್ನು ಹಾಕಿಸಿಕೊಂಡಿದ್ದಾರೆ ಎಂದು ತಪ್ಪು ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನ ಸತ್ಯವೇನು ಎಂದು ತಿಳಿಯೋಣ.

ಆರ್ಕೈವ್‌ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಹಂಚಿಕೊಳ್ಳಲಾಗಿರುವ ಚಿತ್ರದೊಂದಿಗೆ ‘ಆನ್‌ಲೈನ್‌ ಮರಣ ಪ್ರಮಾಣಪತ್ರದಲ್ಲಿಯೂ ಮೋದಿಯವರ ಚಿತ್ರವನ್ನು ಹೊಂದಿದೆ ಎಂದು ಹೇಳಲಾಗಿದೆ.

ಸತ್ಯ: ಆನ್‌ಲೈನ್‌ನಲ್ಲಿ ದೊರೆಯುವ ಮರಣ ಪ್ರಮಾಣ ಪತ್ರದಲ್ಲಿ ಮೋದಿಯವರ ಚಿತ್ರವನ್ನು ಹಾಕಲಾಗಿಲ್ಲ. ಮೋದಿಯವರ ಚಿತ್ರವಿರುವ ಪ್ರಮಾಣ ಪತ್ರವು ಲಸಿಕೆ ಪಡೆದಿದ್ದಕ್ಕಾಗಿ ನೀಡುವ ಪ್ರಮಾಣಪತ್ರವಾಗಿದೆ. ಹಾಗಾಗಿ ಪೋಸ್ಟ್‌ಗಳಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪಾಗಿದೆ.

An archived version of the tweet can be accessed <a href="https://archive.st/7ee6">here</a>.&nbsp;

ವೈರಲ್ ಚಿತ್ರದಲ್ಲಿ ಕಂಡುವರುವ ಪ್ರಮಾಣಪತ್ರವು ಭಾರತದಲ್ಲಿ ಲಸಿಕೆ ಪಡೆದಿದ್ದಕ್ಕಾಗಿ ನೀಡಲಾಗಿರುವ ಪ್ರಮಾಣಪತ್ರವನ್ನು ಹೋಲುತ್ತದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಹೆಚ್ಚಿನ ದೃಢೀಕರಣಕ್ಕಾಗಿ ‘ ಭಾರತದ COVID-19 ಲಸಿಕೆ ಪ್ರಮಾಣಪತ್ರ’ವನ್ನು ಗೂಗಲ್‌ನಲ್ಲಿ ಹುಡುಕಿದಾಗ ಲಸಿಕೆಯ ಮಾದರಿ ಪ್ರಮಾಣಪತ್ರಗಳನ್ನು ಹೊಂದಿರುವ ಹಲವಾರು ಸುದ್ದಿ ವರದಿಗಳು ದೊರೆತಿವೆ.

ವೈರಲ್ ಆಗುತ್ತಿರುವ ಚಿತ್ರದಲ್ಲಿನ ಪ್ರಮಾಣಪತ್ರ ಮತ್ತು COVID-19 ಲಸಿಕೆ ಪ್ರಮಾಣಪತ್ರಗಳು ಕೆಲವು ಸಾಮತ್ಯಗಳನ್ನು ಹೊಂದಿವೆ. ಪರಿಷ್ಕರಿಸಿ ನೋಡಿದಾಗ ಅವು ನಿಜಕ್ಕೂ ಒಂದೇ ಎಂದು ತಿಳಿದುಬಂದಿದೆ.

Coronavirus Fact Check | No, Online Death Certificate Does Not Come With PM Modi's Image

ಒಟ್ಟಾರೆಯಾಗಿ ಸ್ಪಷ್ಟವಾಗಿ ಹೇಳುವುದಾದರೆ, ಪ್ರಧಾನ ಮಂತ್ರಿ ಮೋದಿಯವರ ಚಿತ್ರವಿರುವ ಲಸಿಕೆಗಾಗಿ ನೀಡುವ ಪ್ರಮಾಣಪತ್ರವನ್ನು ಆನ್‌ಲೈನ್‌ ಮರಣ ಪ್ರಮಾಣಪತ್ರವೆಂದು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಕೃಪೆ: ದಿ ಕ್ವಿಂಟ್‌


ಇದನ್ನೂ ಓದಿ: ಬಯಲಾಯ್ತು ಸಿಎಂ ಯೋಗಿ ಬಗ್ಗೆ ಪೋಸ್ಟ್‌ಕಾರ್ಡ್‌ ಹರಿಬಿಟ್ಟ ಸುಳ್ಳು; ಆಕ್ಸಿಜನ್‌ಗೂ ಯೋಗಿಗೂ ಎಲ್ಲಿದೆ ನಂಟು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights