ಅಪಘಾತ: ಒಂದು ಮಗು ಮತ್ತು ಇಬ್ಬರು ಕಾರ್ಮಿಕರು ದಾರುಣ ಸಾವು!
ಚಾಲಕನ ನಿಯಂತ್ರಣ ಕಳೆದುಕೊಂಡ ಟೆಂಪೊ ಒಂದು ಸೋಮವಾರ ಬೆಳಗ್ಗೆಯೇ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಒಂದು ಮಗು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದಿದೆ.
ಕಾರ್ಮಿಕರನ್ನು ಕರೆದೊಯ್ಯತ್ತಿದ್ದ ಟೆಂಪೊ ಪಲ್ಟಿಯಾಗಿದ್ದು, ಹಿರಿಯೂರು ನಿವಾಸಿಗಳಾದ ಸೆಲ್ವಿ (35 ), ದೀಪಿಕಾ (06 ), ನೀಲಮ್ಮ (29) ಎಂಬುಯವವರು ಸಾವನ್ನಪ್ಪಿದ್ದಾರೆ.
ಕೂಲಿ ಕಾರ್ಮಿಕರು ಹಿರಿಯೂರಿನಿಂದ ಚಳ್ಳಕೆರೆ ಕಾಂಕ್ರೀಟ್ ಕೆಲಸಕ್ಕೆಂದು ಟೆಂಪೋದಲ್ಲಿ ಹೋಗುತ್ತಿದ್ದರು. ಈ ವೇಳೆ ಹಿರಿಯೂರು ಪಟ್ಟಣದ ಹೊರ ವಲಯದಲ್ಲಿ ಅಪಘಾತ ನಡೆದಿದೆ.
ಸ್ಥಳಕ್ಕೆ ಹಿರಿಯೂರು ಸಿಪಿಐ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ವಿಕ್ಟೋರಿಯಾ ಆವರಣದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್