ಫ್ಯಾಕ್ಟ್‌ಚೆಕ್ : ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ ಎನ್ನುವ ಕಾರಣಕ್ಕೆ, ಬಸ್ ನಿಲ್ಲಿಸದೆ ಹೋಗುತ್ತಿರುವ ದೃಶ್ಯ ಕರ್ನಾಟಕದಲ್ಲ!

ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲಿ ಒಂದಾಗಿದ್ದ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆಗೆ ಜೂನ್ 11, 2023 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಚಾಲನೆ ನೀಡಿದರು. ಈ ಯೋಜನೆ ಕುರಿತು ಮಹಿಳೆಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗಿತ್ತಿದೆ.

ಬಸ್‌ ನಿಲ್ದಾಣವೊಂದರಲ್ಲಿ ಮಹಿಳೆಯರು ನಿಂತಿದ್ದರೂ, ಬಸ್‌ ನಿಲ್ಲಿಸದೆ ಬೇಕಂತಲೇ ವೇಗವಾಗಿ ಮುಂದಕ್ಕೆ ಹೋಗುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೊಗೆ, ‘ಓಡು.. ಓಡು.. ಓಡು.. ಓಡಲೇ.. ಮಹಿಳೆಯರಿಗೆ ಹೆದರಿ ಓಡಿದ ಬಿಎಂಟಿಸಿ ಎಂಬ ಶೀರ್ಷಿಕೆ ನೀಡಲಾಗಿದೆ. ‘ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವುದರಿಂದ ತಪ್ಪಿಸಿಕೊಳ್ಳಲು ಬಸ್‌ ನಿಲ್ಲಿಸಬೇಡಿ ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ’ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. ಹಾಗಿದ್ದರೆ ಈ ವೈರಲ್ ವಿಡಿಯೋ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋನ್ನು ಪರಿಶೀಲಿಸಿದಾಗ, ಇದು ಬೆಂಗಳೂರಿನ ಬಿಎಂಟಿಸಿ ಬಸ್‌ ಗೆ ಸಂಬಂಧಿಸಿದ ವಿಡಿಯೋ ಅಲ್ಲಎಂಬುದು ತಿಳಿದು ಬಂದಿದೆ. ವಾಸ್ತವವಾಗಿ ಈ ವಿಡಿಯೋ ದೆಹಲಿ ಸರ್ಕಾರಿ ಬಸ್‌ನದ್ದು.

 

ಇದೇ ವಿಡಿಯೊ ಮೂರು ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದ್ದು, ಅದರಿಂದ ತಪ್ಪಿಸಿಕೊಳ್ಳಲು ಚಾಲಕ ಬಸ್‌ ನಿಲ್ಲಿಸದೆ ಹೋಗಿದ್ದಾನೆ ಎಂದು ವಿಡಿಯೊಗೆ ವಿವರಣೆ ನೀಡಲಾಗಿತ್ತು. ವಿಡಿಯೊಗೆ ಪ್ರತಿಕ್ರಿಯೆ ನೀಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಈ ರೀತಿ ಮಾಡಬಾರದು ಎಂದು ಬಸ್‌ ಚಾಲಕರಿಗೆ ಸೂಚನೆ ನೀಡಿದ್ದರು. ಜತೆಗೆ, ವಿಡಿಯೊದಲ್ಲಿ ಇರುವ ಬಸ್‌ನ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದೂ ತಿಳಿಸಿದ್ದರು. ಇದನ್ನು NDTV ವರದಿ ಮಾಡಿದೆ.

ವಾಸ್ತವವಾಗಿ ಈ ವೈರಲ್ ವಿಡಿಯೋಗೂ ಬೆಂಗಳೂರಿನ ಬಿಎಂಟಿಸಿ ಶಕ್ತಿ ಯೋಜನೆಗೂ ಸಂಬಂಧವಿಲ್ಲ ಸಂಬಂಧವಿಲ್ಲ. ಈ ಯೋಜನೆಯನ್ನು ಹೀಯಾಳಿಸುವ ಉದ್ದೇಶದಿಂದ ಕೆಲವರು ಟ್ರೋಲ್ ಮಾಡಲು ದೆಹಲಿ ಘಟನೆಯ ವಿಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಾಂಸ ನೀಡಲು ಹೋದ ಮುಸ್ಲಿಂ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights