ಫ್ಯಾಕ್ಟ್‌ಚೆಕ್ : ಮಾಂಸ ನೀಡಲು ಹೋದ ಮುಸ್ಲಿಂ ವ್ಯಕ್ತಿಯ ಮೇಲೆ ಆನೆ ದಾಳಿ ನಡೆಸಿದ್ದು ನಿಜವೇ?

ಕೇರಳದಲ್ಲಿ ಆನೆಗೆ ಮಾಂಸ ತಿನ್ನಿಸಲು ಯತ್ನಿಸಿದ ಮುಸ್ಲಿಂ ವ್ಯಕ್ತಿ ಹಾಗೂ ಬಾಲಕನ ಮೇಲೆ ಆನೆಯೊಂದು ದಾಳಿ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  “ಏನು ಹೇಳಬೇಕು ಇವರ ಮೂರ್ಖತನಕ್ಕೆ, ಅವರು ಪ್ರಾಣಿಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು  ಯತ್ನಿಸುತ್ತಿದ್ದಾರೆ” ಎಂದು ರವೀಂದ್ರ ತಿವಾರಿ ಎನ್ನುವ ವ್ಯಕ್ತಿಯು ಬರೆದಿದ್ದಾರೆ.

ಅನೇಕರು ಇದೇ ರೀತಿಯ ಪ್ರತಿಪಾದನೆಯೊಂದಿಗೆ ವೀಡಿಯೊವನ್ನು ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ( Yogi Bhakt, Kirti Mishra, Jago BharatJago, Ritesh Kumar Mishra) ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾನೆಯನ್ನು ಪರಿಶೀಲಿಸೋಣ.

https://twitter.com/INDUttam/status/1514232790920822784?ref_src=twsrc%5Etfw%7Ctwcamp%5Etweetembed%7Ctwterm%5E1514232790920822784%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fno-this-kerala-man-is-not-feeding-meat-to-an-elephant%2F

ಫ್ಯಾಕ್ಟ್‌ಚೆಕ್:

ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ಆದ ವಿಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೊದ ಕುರಿತು ಕೆಲವು ಸುದ್ದಿವಾಹಿನಿಗಳು ವರದಿ ಮಾಡಿರುವುದು ಕಂಡುಬಂದಿದೆ. 8 ಏಪ್ರಿಲ್ 2022ರಂದು ಆನೆ ದಾಳಿಯಿಂದ ನಾಲ್ಕು ವರ್ಷದ ಮಗವನ್ನು ಧೈರ್ಯದಿಂದ  ರಕ್ಷಿಸಿದ ತಂದೆ ಎಂದು ಈಟಿವಿ ಭಾರತ್ ವರದಿ ಮಾಡಿದೆ. ಮಲಪ್ಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಮಾತೃಭೂಮಿ ವರದಿ ಮಾಡಿದೆ.

ತ್ರಿಕ್ಕಲಿಯೂರು ದೇವಸ್ಥಾನದ ಬಳಿ ಕೊಳಕ್ಕಡನ್ ಮಿನಿ ಎಂಬ ಹೆಣ್ಣು ಆನೆಯನ್ನು ಕಟ್ಟಲಾಗಿದೆ. ಆನೆಗೆ ಸ್ವಲ್ಪ ಆಹಾರ ನೀಡಲು ತಂದೆ ನಿರ್ಧರಿಸಿದ್ದಾರೆ. ತಂದೆ ಜೊತೆ ಮಗನೂ ತೆರಳಿದ್ದಾನೆ. ಆಹಾರ ನೀಡುತ್ತಿರುವಾಗ ಆನೆ ತನ್ನ ಸೊಂಡಿಲಿನಿಂದ ಮಗುವನ್ನು ಸುತ್ತಲು ಯತ್ನಿಸಿದೆ. ಇದನ್ನು ನೋಡಿದ ತಂದೆ ಧೈರ್ಯದಿಂದಲೇ ಆನೆ ಎದುರಿಗೆ ಹೋಗಿ ತನ್ನ ಮಗನನ್ನು ಸೊಂಡಿಲಿನಿಂದ ಬಿಡಿಸಿ ಕಾಪಾಡಿದ್ದಾರೆ.

ಆಲ್ಟ್ ನ್ಯೂಸ್ ಜೊತೆಗೆ ಅಬ್ದುಲ್ ನಾಸರ್ ಅವರು ಮಾತನಾಡಿದ್ದು. ಸ್ಕರ್ವಿ ಎಂಬ ಉಬ್ಬು ಖಾಯಿಲೆಯನ್ನು ಗುಣಪಡಿಸಲು ಕೇರಳದಲ್ಲಿ ಆನೆಗಳಿಗೆ ತೆಂಗಿನಕಾಯಿ ತಿನ್ನಿಸುವ ಪದ್ಧತಿ ಇದೆ. 4 ವರ್ಷದ ಮಗು ತನ್ನ ತಂದೆಯೊಂದಿಗೆ ಮಿನಿಗೆ (ಆನೆಗೆ) ತೆಂಗಿನಕಾಯಿ ತಿನ್ನಿಸಲು ಹೋದಾಗ ಈ ಘಟನೆ ನಡೆದಿದೆ ಎಂದಿದ್ದಾರೆ “. ನಬೀಲ್ ಕುನ್ಹಪ್ಪು ನಮ್ಮ ಪಕ್ಕದ ಮನೆಯವರು ಅವರ ಕುಟುಂಬ ಸೌದಿ ಅರೇಬಿಯಾದಲ್ಲಿದೆ, ಕಳೆದ 6 ತಿಂಗಳ ಹಿಂದೆ ರಜೆಯ ಸಮಯದಲ್ಲಿ ಮನೆಗೆ ಬಂದಿದ್ದರು ಅವರ ಮಗುವಿನೊಂದಿಗೆ ಆನೆಗೆ ತೆಂಗಿನಕಾಯಿ ನೀಡುವ ವೇಳೆ ಈ ಘಟನೆ ನಡೆದಿದೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ಅಂದರೆ ಇದು 2022ರ ಹಳೆಯ ಘಟನೆ ಎಂದು ಆಲ್ಟ್‌ನ್ಯೂಸ್ ಉಲ್ಲೇಖಿಸಿದೆ.

ಕುನ್ಹಪ್ಪು ಕುಟುಂಬ ಸದಸ್ಯರೊಂದಿಗೆ ಆನೆಗೆ ಆಹಾರ ನೀಡಲು ಬಯಸಿದ್ದರು, ಕುನ್ಹಪ್ಪು ಆನೆಗೆ ತೆಂಗಿನಕಾಯಿ ನೀಡಿದರು. ತೆಂಗಿನಕಾಯಿ ಗಟ್ಟಿಯಾಗಿದ್ದು ಆನೆಗೆ ಇಷ್ಟವಾಗಲಿಲ್ಲ ಎಂದು ನಾಸರ್ ಹೇಳಿದರು. ಕುನ್ಹಪ್ಪು ಮಿನಿಗೆ ಆಹಾರ ನೀಡುತ್ತಿರುವ ವಿಡಿಯೋವನ್ನು ಕೆಳಗೆ ನೋಡಬಹುದು  ನಂತರ ಕುನ್ಹಪ್ಪು ಅವರ ಮಗ ಆನೆಗೆ ತಾನು ಆಹಾರ ನೀಡಬೇಕೆಂದು ಹಠಹಿಡಿದ,  ಆನೆಗೆ ತೆಂಗಿನಕಾಯಿ ನೀಡಲು ಬಾಲಕ ಕೈ ಎತ್ತಿದಾಗ ಆನೆ ಅತನನ್ನು ತನ್ನ ಸೊಂಡಿಲಿನಿಂದ ತಳ್ಳಿತ್ತು. ಕುನ್ಹಪ್ಪು ಹುಡುಗನನ್ನು ಎಳೆದುಕೊಂಡು ಹೋದರು,” ಎಂದು ನಾಸರ್ ಹೇಳಿದ್ದಾರೆ.

ವಾಸ್ತವವಾಗಿ ಘಟನೆ ನಡೆದು ಕೆಲವು ತಿಂಗಳ ನಂತರ ಈ ವಿಡಿಯೋವನ್ನು ಸೌದಿ ಅರೇಬಿಯಾಕ್ಕೆ ವಾಪಸಾದ ಕುನ್ಹಪ್ಪು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು ನಂತರ ವೈರಲ್ ಆಗಿತ್ತು. ಆಂದರೆ ಈ ಘಟನೆ 2022 ಫೆಬ್ರವರಿಯಲ್ಲಿ ನಡೆದಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ ಕುನ್ಹಪ್ಪು ಅವರು ತಮ್ಮ 4ವರ್ಷದ ಮಗನೊಂದಿಗೆ ಆನೆಗೆ ತೆಂಗಿನ ಕಾಯಿ ನೀಡಲು ಹೋದಾಗ ನಡೆದ ಹಳೆಯ ಘಟನೆಯನ್ನ, ತಿರುಚಿ ಸುಳ್ಳು ಹೇಳಿಕೆಯೊಂದಿಗೆ ಮುಸ್ಲಿಂ ವ್ಯಕ್ತಿ ಮಾಂಸ ನೀಡಲು ಹೋದಾಗ ನಡೆದ ಘಟನೆ ಎಂದು ಕೋಮು ವೈಷಮ್ಯದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್‌

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಮುಸ್ಲಿಮರು ಚಲಿಸುತ್ತಿದ್ದ ರೈಲಿನ ಕೆಳಗೆ ಗ್ಯಾಸ್ ಸಿಲಿಂಡರ್‌ ಎಸೆದು ಓಡಿ ಹೋಗಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights