ಇಸ್ರೇಲ್- ಹಮಾಸ್ ಹಿಂಸಾಚಾರ : ಗಾಜಾದಲ್ಲಿ 35, ಇಸ್ರೇಲ್‌ನಲ್ಲಿ 5 ಮಂದಿ ಸಾವು!
ರಾತ್ರೋರಾತ್ರಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಹಿಂಸಾಚಾರದಲ್ಲಿ ಗಾಜಾದಲ್ಲಿ ಕನಿಷ್ಠ 35 ಮತ್ತು ಇಸ್ರೇಲ್ನಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ.
ಇಸ್ರೇಲ್ ಗುಂಪು ಮತ್ತು ಇತರ ಪ್ಯಾಲೇಸ್ಟಿನಿಯನ್ ಉಗ್ರರು ಬೀರ್‌ಶೆಬಾದಲ್ಲಿ ಅನೇಕ ರಾಕೆಟ್ ಗಳನ್ನು ಹಾರಿಸಿದ್ದರಿಂದ ಇಸ್ರೇಲ್ ನಲ್ಲಿ ಬುಧವಾರ ಮುಂಜಾನೆ ವಾಯುದಾಳಿಗಳು ನಡೆದಿವೆ.
ಇಸ್ರೇಲಿ ವಾಯುದಾಳಿಯಿಂದ ಪದೇ ಪದೇ ರಾಕೆಟ್ ಗಳು ಅಪ್ಪಳಿಸಿ ಗಾಜಾದ ಒಂದು ಬಹುಮಹಡಿ ವಸತಿ ಕಟ್ಟಡವು ಕುಸಿದಿದ್ದು ಇನ್ನೊಂದು ಹಾನಿಯಾಗಿದೆ. ಬುಧವಾರ ಮುಂಜಾನೆ ತನ್ನ ಜೆಟ್‌ಗಳು ಹಲವಾರು ಹಮಾಸ್ ಗುಪ್ತಚರ ಮುಖಂಡರನ್ನು ಗುರಿಯಾಗಿಸಿ ಕೊಂದಿವೆ ಎಂದು ಇಸ್ರೇಲ್ ಹೇಳಿದೆ.
2014 ರಲ್ಲಿ ನಡೆದ ಯುದ್ಧದ ನಂತರ ಇಸ್ರೇಲ್ ಮತ್ತು ಹಮಾಸ್ ನಡುವಿನ ಭಾರಿ ಆಕ್ರಮಣ ಇದಾಗಿದೆ.