ಇಂದಿನಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ : ಕ್ಯಾಂಟೀನ್ ಮುಂದೆ ಜನ ಸಾಗರ!

ಕೊರೊನಾ ಲಾಕ್ ಡೌನ್ ನಿಂದಾಗಿ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ಇರುವಾಗ ರಾಜ್ಯ ಸರ್ಕಾರ ಇಂದಿನಿಂದ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟ ನೀಡಲು ನಿರ್ಧರಿಸಿದ್ದು ಕ್ಯಾಂಟೀನ್ ಮುಂದೆ ಜನ ಸಾಗರವೇ ನೆರದಿದೆ.

ಹೌದು… ಕೊರೊನಾ ತಡೆಗೆ ರಾಜ್ಯ ಸರ್ಕಾರ 14 ದಿನಗಳ ಕಾಲ ಸಂಪೂರ್ಣ ಲಾಖ್ ಡೌನ್ ಘೋಷಣೆ ಮಾಡಿದ್ದು, ಪೌರಾಢಳಿತ ಇಲಾಖೆಯಿಂದ ನಿರ್ಗತಿಕರಿಗೆ, ಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಇಂದಿರಾ ಕ್ಯಾಂಟಿನಲ್ಲಿ ಉಚಿತ ಊಟವನ್ನು ನೀಡಲು ಆದೇಶವನ್ನು ನೀಡಿದೆ.ಎಂಟಿಬಿ ನಾಗರಾಜ್ ಪೌರಾಡಳಿತ ಸಚಿವ ಮಾತನಾಡಿ, ” ಬೆಂಗಳೂರು ಹೊರತುಪಡಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಇಂದಿರಾ ಕ್ಯಾಂಟೀನ್ ಮೂಲಕ ಮೂರು ಹೊತ್ತು ಊಟ ನೀಡಲಾಗುತ್ತದೆ. ಜನ ಸಾಮಾನ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು” ಮನವಿ ಮಾಡಿದ್ದರು.

ಪುರಸಭೆ, ನಗರಸಭೆ ಹಾಗೂ ಪಟ್ಟಣ ಪಂಚಾಯ್ತಿ ಸೇರಿದ‌ಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ಗಳಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಉಚಿತವಾಗಿ ನೀಡಲಾಗುತ್ತದೆ. ಈ ಸಂಬಂಧ ಪೌರಾಡಳಿತ ಇಲಾಖೆ ಆದೇಶ ಹೊರಡಿಸಿದೆ. ಉಪಾಹಾರಕ್ಕೆ ಐದು ರೂ., ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಹತ್ತು ರೂ. ನೀಡಬೇಕಾಗಿತ್ತು.

ದುರ್ಬಲ ವರ್ಗದವರು, ಬಡ ವ್ಯಾಪಾರಿಗಳು, ಕಾರ್ಮಿಕರು ಸಂಕಷ್ಟದಲ್ಲಿರುವುದರಿಂದ ಪೌರಾಡಳಿತ ಇಲಾಖೆ ಆಹಾರದ ವೆಚ್ಚ ಭರಿದಲಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ. ಈ ಸೌಲಭ್ಯದ ಸದ್ಬಳಕ್ಕೆ ಮಾಡಿಕೊಂಡು ಕೋವಿಡ್ ಮಾರ್ಗಸೂಚಿ ಪಾಲಿಸಿ, ಕೋವಿಡ್ ತಡೆಗಟ್ಟಲು ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇಂದು ಬೆಳಿಗ್ಗೆಯಿಂದಲೇ ರಾಜ್ಯದೆಲ್ಲೆಡೆ ಜನ ಸಾಗರವೇ ಇಂದಿರಾ ಕ್ಯಾಂಟಿನ್ ಮುಂದೆ ಸದರಿ ಸಾಲಿನಲ್ಲಿ ನಿಂತು ಊಟ ಪಡೆಯುತ್ತಿರುವ ದೃಶ್ಯಗಳು ಕಂಡು ಬಂದಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights