ಟೌಕ್ಟೇ ಚಂಡಮಾರುತ ಎಫೆಕ್ಟ್ : ರಾಖಿ ಸಾವಂತ್ ಹೊಸ ಮನೆಗೆ ಹಾನಿ..!
ಮುಂಬೈ ಚಂಡಮಾರುತದಿಂದಾಗಿ ತಮ್ಮ ಹೊಸ ಮನೆಗೆ ಹಾನಿಯಾಗಿದೆ ಎಂದು ರಾಖಿ ಸಾವಂತ್ ಅಸಮಾಧಾನಗೊಂಡಿದ್ದಾರೆ.
ಟೌಕ್ಟೇ ಚಂಡಮಾರುತದಿಂದಾಗಿ ಅನೇಕ ರಾಜ್ಯಗಳು ಹಾನಿಗೊಳಗಾಗಿದೆ. ಇದು ಮಹಾರಾಷ್ಟ್ರದ ಮುಂಬೈಯಲ್ಲಿ ಅತ್ಯಂತ ಭೀಕರವಾಗಿ ಪರಿಣಾಮ ಬೀರಿದೆ. ನೋಡಿದಲೆಲ್ಲ ಬೇರುಸಹಿತ ಮರಗಳು ನೆಲಕ್ಕಚ್ಚಿವೆ. ಮಾತ್ರವಲ್ಲದೇ ಜನ ಪ್ರಾಣ ಕಳೆದುಕೊಂಡ ಸುದ್ದಿಗಳಿವೆ.
ಸೆಲೆಬ್ರಿಟಿಗಳು ಚಂಡಮಾರುತದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾತನಾಡುತ್ತಲೇ ಇದ್ದಾರೆ. ಇದರಲ್ಲಿ ಬಿಗ್ ಬಾಸ್ 14 ರ ಸ್ಪರ್ಧಿ ರಾಖಿ ಸಾವಂತ್ ಚಂಡಮಾರುತದಿಂದಾಗಿ ವೈಯಕ್ತಿಕ ನಷ್ಟವನ್ನು ಅನುಭವಿಸಿದ್ದಾರಂತೆ.
ಹೌದು… ನಟಿ ತನ್ನ ಹೊಸದಾಗಿ ನಿರ್ಮಿಸಿದ ಮನೆಯ ಬಾಲ್ಕನಿ ಮೇಲ್ಛಾವಣಿಯು ಮುರಿದುಹೋಗಿದೆ ಮತ್ತು ಅದೇ ಕಾರಣದಿಂದಾಗಿ ಅವಳು ತುಂಬಾ ಅಸಮಾಧಾನಗೊಂಡಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.
ಇದಲ್ಲದೆ, ಅಮಿತಾಭ್ ಬಚ್ಚನ್ ತಮ್ಮ ಬ್ಲಾಗ್ ಪೋಸ್ಟ್ನಲ್ಲಿ ಚಂಡಮಾರುತದಿಂದಾಗಿ ತಮ್ಮ ಜನಕ್ ಕಚೇರಿಯಲ್ಲಿ ಹೇಗೆ ಪ್ರವಾಹ ಉಂಟಾಗಿದೆ ಎಂದು ಬರೆದಿದ್ದಾರೆ. ಇದೇ ರೀತಿಯಾಗಿ, ಮುಂಬೈ ಚಂಡಮಾರುತದ ನಂತರ ಸೈಫ್ ಅಲಿ ಖಾನ್, ಅಕ್ಷಯ್ ಕುಮಾರ್, ಹೃತಿಕ್ ರೋಷನ್ ಅವರ ಮನೆಗಳ ಹೊರಗೆ ಅನೇಕ ದೊಡ್ಡ ಮರಗಳು ನೆಲಕ್ಕಚ್ಚಿವೆ.