ಅತ್ಯಾಚಾರ ಆರೋಪದ ಮೇಲೆ ಕಂಗನಾ ರನೌತ್ ಬಾಡಿಗಾರ್ಡ್ ವಿರುದ್ಧ ದೂರು..!

ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಬಾಡಿಗಾರ್ಡ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 ಮತ್ತು 377 ರ ಅಡಿಯಲ್ಲಿ ಕುಮಾರ್ ಹೆಗ್ಡೆ ಎಂಬ ವ್ಯಕ್ತಿಯ ವಿರುದ್ಧ ಮುಂಬೈ ಪೊಲೀಸರು ನಗರದ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಹೆಗ್ಡೆ ನಟಿ ಕಂಗನಾ ರನೌತ್ ಅವರ ವೈಯಕ್ತಿಕ ಅಂಗರಕ್ಷಕ ಎಂದು ಹೇಳಲಾಗುತ್ತಿದ್ದರೂ ಪೊಲೀಸರು ಆರೋಪಿಯ ಗುರುತು ನೀಡಲು ನಿರಾಕರಿಸುತ್ತಿದ್ದಾರೆ.

“ಕುಮಾರ್ ಹೆಗ್ಡೆ ಎಂಬ ವ್ಯಕ್ತಿಯ ವಿರುದ್ಧ 376 ಮತ್ತು 377 ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ಸ್ 376 ಅತ್ಯಾಚಾರಕ್ಕೆ ಸಂಬಂಧಿಸಿದೆ ಮತ್ತು ಸೆಕ್ಷನ್ 377 ಅಸ್ವಾಭಾವಿಕ ಲೈಂಗಿಕತೆಗೆ ಸಂಬಂಧಿಸಿದೆ. ಪ್ರೈಮಾ ಫೇಸಿ, ಲೈವ್-ಇನ್ ಸಂಬಂಧ ಮತ್ತು ವಿಘಟನೆಯನ್ನು ಹೊಂದಿದ್ದರು” ಎಂದು ಡಿಎನ್ ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಹೆಗಡೆ ಅವರು ಕಂಗನಾ ಅವರ ವೈಯಕ್ತಿಕ ಅಂಗರಕ್ಷಕನಾ ಎಂದು ಕೇಳಿದಾಗ, “ಪೊಲೀಸ್ ಕೊ ಪಾಟಾ ನಹಿನ್ ವೋ ಕ್ಯಾ ಕಾಮ್ ಕರ್ತಾ ಹೈ (ಅವರು ಏನು ಕೆಲಸ ಮಾಡುತ್ತಾರೆಂದು ಪೊಲೀಸರಿಗೆ ತಿಳಿದಿಲ್ಲ).” ಎಂದು ಹಿರಿಯ ಇನ್ಸ್‌ಪೆಕ್ಟರ್ ಗೈಕ್ವಾಡ್ ಹೇಳಿದರು.

ವೆಬ್‌ಸೈಟ್‌ನಲ್ಲಿನ ವರದಿಯ ಪ್ರಕಾರ, ಎಂಟು ವರ್ಷಗಳ ಹಿಂದೆ ತಾನು ಆರೋಪಿಯೊಂದಿಗೆ ಸಂಪರ್ಕಕ್ಕೆ ಬಂದಿರುವುದಾಗಿ ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ ಆರೋಪಿಸಿದ್ದಾಳೆ. ಕಳೆದ ಜೂನ್‌ನಲ್ಲಿ ಹೆಗ್ಡೆ ಅವರು ತಮ್ಮನ್ನು ವಿವಾಹವಾಗುವುದಾಗಿ ಹೇಳಿಕೊಂಡಿದ್ದರಂತೆ. ಆರೋಪಿ ಅನೇಕ ಸಂದರ್ಭಗಳಲ್ಲಿ ಬಲವಂತವಾಗಿ ದೈಹಿಕ ಸಂಬಂಧವನ್ನು  ಪ್ರಾರಂಭಿಸಿದರು. ಏಪ್ರಿಲ್ 27 ರಂದು ಹೆಗ್ಡೆ ತನ್ನ ಫ್ಲ್ಯಾಟ್‌ನಿಂದ 50,000 ರೂ. ನೀಡಿದ್ದರು ಎಂದು ಆರೋಪಿಸಿದ್ದಾಳೆ. ತಾನು ವೈದ್ಯಕೀಯ ಪರೀಕ್ಷೆಗೆ ಒಳಪಡುವುದಾಗಿ ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾಳೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights