ಒಂದೇ ಕುಟುಂಬದ 16 ಜನ ಕೊರೊನಾದಿಂದ ಗುಣಮುಖ : ಕೋವಿಡ್ ಎದುರಿಸಿದ ಕುಟುಂಬಸ್ಥರು ಹೇಳಿದ್ದೇನು?

ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಆದರೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಒಂದೇ ಕುಟುಂಬದ 16 ಜನ ಕೊರೋನಾ ಮಹಾಮಾರಿ ಯಿಂದ ಗುಣಮುಖರಾಗಿದ್ದಾರೆ.

ಗ್ರಾಮದ ಶಿವಳ್ಳಿ ಮಠ ಕುಟುಂಬದವರು ಇದೇ ತಿಂಗಳು 3ನೇ ತಾರೀಖಿನಂದು 16 ಜನಕೊರೋನಾ ಪಾಸಿಟಿವ್ ಆಗಿದ್ದರು, ಹೋಮ್ ಐಸೋಲೇಷನ್ ಇದ್ದುಕೊಂಡು ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದರಲ್ಲಿ ಮೂರು ವರ್ಷದ ಒಳಗಿನ ನಾಲ್ಕು ಮಕ್ಕಳು ಸಹ ಗುಣಮುಖರಾಗಿದ್ದಾರೆ. ಇದರಲ್ಲಿ 45 ವರ್ಷ ಮೇಲ್ಪಟ್ಟ 4 ಜನರು ಈ ಮೊದಲೇ ಎರಡನೆ ಡೊಸ್ಸ್ ವ್ಯಾಕ್ಸಿನೇಷನ್ ಮಾಡಿಸಿಕೊಂಡಿದರು ಹಾಗೂ ಇತರ 3ಜನರಿಗೆ ನೆಗೆಟಿವ್ ರಿಪೋರ್ಟ್ ಬಂದಿದೆ.

‘ಕಳೆದ ತಿಂಗಳು 29ರಂದು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಮನೆಯಲ್ಲಿಯೇ ಹೋಮ್ ಐಸೋಲೇಷನ್ ಆಗಿದ್ದೆವು ಹಾಗೂ ಪಾಸಿಟಿವ್ ರಿಪೋರ್ಟ್ ಬಂದಾಗ ಯಾವುದೇ ರೀತಿಯಲ್ಲೂ ಭಯಪಡದೆ ಆತ್ಮಸ್ಥೈರ್ಯದಿಂದ ಹಾಗೂ ಮನೆಯಲ್ಲಿನ ಸದಸ್ಯರಿಗೂ ಧೈರ್ಯ ತುಂಬಿ ವೈದ್ಯರ ಸಲಹೇ ಸೂಚನೆಗಳನ್ನು ತಪ್ಪದೆ ಪಾಲಿಸಿದೆವು’ ಎಂದು ಮನೆಯ ಮುಖ್ಯಸ್ಥ ಮಲ್ಲಯ್ಯ ಶಿವಳ್ಳಿಮಠ ಹೇಳಿದರು.

ಗುಣಮುಖರಾದವರು ರಾಜು(34), ಶ್ರೇಯಾ (10ತಿಂಗಳು), ಲಕ್ಷ್ಮಿ(25), ವೈಭವಿ(1), ಶಶಿಕಲಾ(24), ಸಮರ್ಥ (2), ಸಹನಾ(16),ವೈಷ್ಣವಿ(2),ಗಿರಿಜಮ್ಮ(60),ಶರಣಯ್ಯಾ(9), ಮಲ್ಲಯ್ಯ (63),ಮಹಾಂತಯ್ಯ(60), ಸಿದ್ದರಾಮಯ್ಯ(59) ಮಲ್ಲಿಕಾರ್ಜುನ (25), ಮಲ್ಲಿಕಾರ್ಜುನಯ್ಯಾ(28), ಮೃತ್ಯುಂಜಯ(27).

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights