Bigg Boss: ಭುಜಬಲ ಆಟದಲ್ಲಿ ನಿಜವಾಗಲೂ ಅರವಿಂದ್ ಏಕಾಗ್ರತೆ ಭಂಗಗೊಳಿಸಿದ್ರಾ ದಿವ್ಯ..?
ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಇಬ್ಬರು ಫೇವರ್ ಗೇಮ್ ಆಡುತ್ತಾರೆನ್ನುವುದು ಬಿಗ್ ಬಾಸ್ ನೋಡುವ ಕೆಲ ಅಭಿಮಾನಿಗಳ ಅನಿಸಿಕೆ. ಇದಕ್ಕೆ ಪುಷ್ಠಿ ನೀಡುವಂತಹ ಘಟನೆಗಳಲ್ಲಿ ಇವರಿಬ್ಬರೂ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಿಚ್ಚ ಬುದ್ಧಿಮಾತು ಕೂಡ ದಿವ್ಯಾ ಉರುಡುಗಾ ಅವರಿಗೆ ಮೊನ್ನೆಯಷ್ಟೇ ಹೇಳಿದ್ದಿದೆ. ಆದರೆ ನಿನ್ನೆಯ ಎಪಿಸೋಡ್ ನಲ್ಲೂ ದಿವ್ಯ ಮತ್ತೆ ಅರವಿಂದ್ ಫೇವರ್ ಆದ್ರಾ ಅನ್ನೋ ಅನುಮಾನ ಮೂಡಿದೆ.
ಹೌದು… ನಿನ್ನೆ ಬಿಗ್ ಬಾಸ್ ಮನೆಯ ಸದಸ್ಯರನ್ನು ಎರಡು ಗುಂಪುಗಳಾಗಿ ಬೇರ್ಪಡಿಸಿ ಟಾಸ್ಕ್ ಗಳನ್ನ ನೀಡಲಾಗಿತ್ತು. ಅರವಿಂದ್ ಹಾಗೂ ದಿವ್ಯಾ ಯು ಬೇರೆ ಬೇರೆ ಗುಂಪಿನ ಸದಸ್ಯರಾಗಿದ್ದರು. ಬಿಗ್ ಬಾಸ್ ನೀಡಿದ ಭುಜಬಲದ ಆಟದಲ್ಲಿ ಕೊನೆಗೆ ಉಳಿದ ಆಟಗಾರರಾದ ಅರವಿಂದ್ ಹಾಗೂ ದಿವ್ಯಾ ಸುರೇಶ್ ಅವರ ಏಕಾಗ್ರತೆಯನ್ನು ಎದುರಾಳಿಗಳು ಭಂಗಗೊಳಿಸಬೇಕಿತ್ತು. ಈ ವೇಳೆ ಅರವಿಂದ್ ಏಕಾಗ್ರತೆಯನ್ನು ಭಂಗಗೊಳಿಸಲು ಮುಂದಾದ ಎದುರಾಳಿ ತಂಡದ ದಿವ್ಯಾ ಉರುಡುಗಾ ಏಕಾಗ್ರತೆ ಭಂಗಗೊಳಿಸುವಲ್ಲಿ ಸಂಪೂರ್ಣ ಪ್ರಯತ್ನ ಮಾಡಲಿಲ್ಲ ಅನ್ನೋದು ಬಿಗ್ ಬಾಸ್ ಅಭಿಮಾನಿಗಳ ಅನಿಸಿಕೆ.
ದಿವ್ಯಾ ಸುರೇಶ್ ಅವರನ್ನು ಎದುರಾಳಿ ತಂಡದ ಶುಭಾ ಪೂಂಜಾ ಬಹುಬೇಗನೇ ಏಕಾಗ್ರತೆ ಭಂಗಗೊಳಿಸಿ ಸೋಲಿಸಿದರು. ಆದರೆ ಅರವಿಂದ್ ಎದುರಾಳಿ ತಂಡದಲ್ಲಿ ಮಂಜು ಪಾವಗಡ, ದಿವ್ಯಾ ಉರುಡುಗ ಇದ್ದರೂ ಅರವಿಂದ್ ಏಕಾಗ್ರತೆಯನ್ನು ಭಂಗಗೊಳಿಸಲು ಸಾಧ್ಯವಾಗಲಿಲ್ಲ. ಮಂಜು ಹೋಗುವ ಮೊದಲೇ ಅರವಿಂದ್ ಬಳಿ ಹೋಗಿ ನಿಂತ ದಿವ್ಯಾ ಹೆಚ್ಚೇನು ಏಕಾಗ್ರತೆ ಭಂಗಗೊಳಿಸುವ ಮಾತುಗಳನ್ನೂ ಆಡಲಿಲ್ಲ.
ಒಂದು ವೇಳೆ ಅರವಿಂದ್ ಬದಲಿಗೆ ಆ ಸ್ಥಳದಲ್ಲಿ ಬೇರೆ ಎದುರಾಳಿಗಳು ಇದ್ದರೆ ದಿವ್ಯಾ ಹೀಗೇ ನಡೆದುಕೊಳ್ಳುತ್ತಿದ್ರಾ? ಅನ್ನೋ ಪ್ರಶ್ನೆ ಮೂಡಿದೆ. ಮತ್ತೆ ದಿವ್ಯಾ ಅರವಿಂದ್ ಫೇವರ್ ಆಡಿದ್ರಾ ಅನ್ನೋ ಪ್ರಶ್ನೆ ಬಿಗ್ ಬಾಸ್ ನೋಡುಗರಿಗೆ ಹುಟ್ಟುಕೊಂಡಿದೆ.