ವಿಡಿಯೋ ನೋಡಿ: ರಸ್ತೆ ದಾಟುತ್ತಿರುವ ನೂರಾರು ಕೃಷ್ಣಮೃಗಗಳ ಅದ್ಭುತ ವಿಡಿಯೋ ವೈರಲ್‌!

ಗುಜರಾತ್‌ನ ಭಾವನಗರ ಜಿಲ್ಲೆಯ ಬ್ಲ್ಯಾಕ್‌ಬಕ್ ರಾಷ್ಟ್ರೀಯ ಉದ್ಯಾನವನದ ಬಳಿ ನೂರಾರು ಕೃಷ್ಣಮೃಗಗಳು ರಸ್ತೆ ದಾಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ವೈರಲ್ ವಿಡಿಯೋವನ್ನು ಗುಜರಾತ್ ಮಾಹಿತಿ ಇಲಾಖೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಬುಧವಾರ ಹಂಚಿಕೊಂಡಿದ್ದು, “ಭಾವನಗರದ ಕೃಷ್ಣಮೃಗ ರಾಷ್ಟ್ರೀಯ ಉದ್ಯಾನವನದಲ್ಲಿ 3,000 ಕ್ಕೂ ಹೆಚ್ಚು ಕೃಷ್ಣಮೃಗಗಳು ರಸ್ತೆ ದಾಟುತ್ತಿರುವುದು ಕಂಡುಬಂದಿದೆ” ಎಂದು ಇಲಾಖೆ ಟ್ವೀಟ್ ಮಾಡಿದೆ.

ಮಾಹಿತಿ ಇಲಾಖೆ ಹಂಚಿಕೊಂಡಿರುವ ಒಂದು ನಿಮಿಷದ ವಿಡಿಯೋವನ್ನು ಪ್ರಧಾನಿ ಮೋದಿ ರಿ-ಟ್ವೀಟ್‌ ಮಾಡಿದ್ದಾರೆ. ಆ ದೃತ್ಯವನ್ನು ಅದ್ಭುತ ಎಂದು ಕರೆದಿದ್ದರೆ.

ಕೃಷ್ಣಮೃಗಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದೆ ಧೋಲೆರಾ-ಭಾವನಗರ ಹೆದ್ದಾರಿಯಲ್ಲಿರುವ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಬೀಡುಬಿಟ್ಟಿರುವ ಗ್ರಾಮ ರಕ್ಷಕ ದಳ (ಜಿಆರ್‌ಡಿ)ದ ನೌಕರ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂದು ಅರಣ್ಯ ಅಧಿಕಾರಿ ಅಂಕುರ್ ಪಟೇಲ್ ತಿಳಿಸಿದ್ದಾರೆ.

ವಿಡಿಯೋದಲ್ಲಿ ಕಂಡುಬರುವ ರಸ್ತೆ ಹೆದ್ದಾರಿಯನ್ನು ವೇಲಾವದರ್ ಗ್ರಾಮ ಮತ್ತು ರಾಷ್ಟ್ರೀಯ ಉದ್ಯಾನವನಕ್ಕೆ ಸಂಪರ್ಕಿಸುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ಕಂಡುಬರುವ ಭೂಮಿಯು ಅರಣ್ಯ ಇಲಾಖೆಗೆ ಸೇರಿದೆ ಎಂದು ಪಟೇಲ್ ತಿಳಿಸಿದ್ದಾರೆ.

ಅಂದಾಜಿನ ಪ್ರಕಾರ, ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 3,000 ಕೃಷ್ಣಮೃಗಗಳಿದ್ದು, 4,000 ಮೀಸಲು ಅರಣ್ಯ ಪ್ರದೇಶಗಳು ಮತ್ತು ಹತ್ತಿರದ ಬಂಜರು ಪ್ರದೇಶಗಳಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

“ವೈರಲ್ ವೀಡಿಯೊದಲ್ಲಿ, 700 ರಿಂದ 800 ಕೃಷ್ಣಮೃಗಗಳನ್ನು ಕಾಣಬಹುದು.

ಇದನ್ನೂ ಓದಿ: ಜಾಗತಿಕ ಹುಲಿ ದಿನ: ವಿಶ್ವದಲ್ಲಿವೆ ಬೆರಳೆಣಿಕೆಯಷ್ಟು ಹುಲಿಗಳು; ಆದರೂ ಭಾರತವೇ ನಂ.1

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights