ತಾಯ್ನಾಡಿಗೆ ಮರಳಿದ ಟೋಕಿಯೊ ಒಲಿಂಪಿಕ್ ವಿಜೇತರಿಗೆ ಅದ್ಧೂರಿ ಸ್ವಾಗತ..!

ಟೋಕಿಯೊ ಒಲಿಂಪಿಕ್ ಮುಗಿಸಿ ತಾಯ್ನಾಡಿಗೆ ಮರಳಿದ ವಿಜೇತರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

ಒಲಿಂಪಿಕ್ನಲ್ಲಿ  ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ಸೇರಿದಂತೆ ಇನ್ನುಳಿದ ವಿಜೇತ ಆಟಗಾರರು ತಾಯ್ನಾಡಿಗೆ ಮರಳಿದ್ದಾರೆ. ಟೋಕಿಯೊ ಒಲಂಪಿಕ್ಸ್ ನಲ್ಲಿ ಆಡಿದ ಸುಮಾರು 80 ಇತರ ಭಾರತೀಯ ಕ್ರೀಡಾಪಟುಗಳು ಮನೆಗೆ ಮರಳಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಜಾವೆಲಿನ್ ತಾರೆ ನೀರಜ್ ಚೋಪ್ರಾ ತವರಿಗೆ  ಹಿಂದಿರುಗುತಿದ್ದಂತೆ  ಸಾವಿರಾರು ಅಭಿಮಾನಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಜಮಾಯಿಸಿ ಅದ್ದೂರಿ ಸ್ವಾಗತ ಕೋರಿದ್ದಾರೆ.

ಭಾರತೀಯ ತಂಡ ಮಧ್ಯಾಹ್ನ ದೆಹಲಿಗೆ ಬಂದಿಳಿದ ಕ್ರೀಡಾಪಟುಗಳು ಮತ್ತು ಪದಕ ವಿಜೇತರನ್ನು ಅಶೋಕ ಹೋಟೆಲ್‌ಗೆ ಕರೆದೊಯ್ಯಲಾಗಿದೆ.

“ಮರಳಿ ಮನೆಗೆ ಬಂದಿರುವುದು ತುಂಬಾ ಸಂತೋಷವಾಗಿದೆ, ನಾನು ಇದನ್ನು ನಿರೀಕ್ಷಿಸುತ್ತಿದ್ದೆ” ಎಂದು ನೀರಜ್ ಹೇಳಿದರು. ಭಾರತದ ಹೊಸ ರಾಷ್ಟ್ರೀಯ ನಾಯಕನಾದ ತಮ್ಮ ಮಗನನ್ನು ಸ್ವಾಗತಿಸಲು ನೀರಜ್ ಚೋಪ್ರಾ ಅವರ ಪೋಷಕರು ಸೋಮವಾರ ಬೆಳಿಗ್ಗೆ ಪಾಣಿಪತ್‌ನಿಂದ ದೆಹಲಿಗೆ ತೆರಳಿದರು. ನೀರಜ್  ಸ್ವಾಗತಿಸಲು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು.

“ನಾನು ಅವರೊಂದಿಗೆ ಇನ್ನೂ ಮಾತನಾಡಲು ಸಾಧ್ಯವಾಗಲಿಲ್ಲ. ನಾನು ಅವರೊಂದಿಗೆ ಈ ರೀತಿ ಅವಸರದಲ್ಲಿ ಮಾತನಾಡಲು ಬಯಸುವುದಿಲ್ಲ. ನಾನು ಅವರೊಂದಿಗೆ ಚೆನ್ನಾಗಿ ಕುಳಿತು ಮಾತನಾಡಲು ಬಯಸುತ್ತೇನೆ. ನಾನು ನಿಮ್ಮೆಲ್ಲರೊಂದಿಗೆ ಮಾತನಾಡುವ ರೀತಿಯಲ್ಲಿ ನಾನು ಅವರೊಂದಿಗೆ ಮಾತನಾಡಲು ಸಾಧ್ಯವಿಲ್ಲ, ಸೀಮಿತ ಸಮಯದೊಂದಿಗೆ, ನಾನು ಸಾಧ್ಯವಾದಷ್ಟು ಸಮಯ ಅವರೊಂದಿಗೆ ಮಾತನಾಡುತ್ತೇನೆ, ”ಎಂದು ನೀರಜ್ ಭಾನುವಾರ ಟೋಕಿಯೊದಲ್ಲಿ ಹೇಳಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights