ದೆಹಲಿ ಗಲಬೆ: ಗಾಯಗೊಂಡವರಿಗೆ ರಾಷ್ಟ್ರಗೀತೆ ಹಾಡಲು ಒತ್ತಾಯ; ಪ್ರಕರಣದಲ್ಲಿ 3 ಪೊಲೀಸರು ಭಾಗಿ!
2019ರ ಕೊನೆಯಲ್ಲಿ ನಡೆದ ಈಶಾನ್ಯ ದೆಹಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡ ಐವರಿಗೆ ರಾಷ್ಟ್ರಗೀತೆ ಹಾಡಲು ಒತ್ತಾಯಿಸಲಾಗಿತ್ತು. ಈ ಪ್ರಕರಣದಲ್ಲಿ ಮೂವರು ಪೊಲೀಸರು ಭಾಗಿಯಾಗಿದ್ದಾರೆ ಎಂದು ದೆಹಲಿ ಪೊಲೀಸರು ಗುರುತಿಸಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ದೆಹಲಿಯ ಸಶಸ್ತ್ರ ಪಡೆಯ ಮೂವರು ಪೊಲೀಸರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಲ್ಲದೆ, ಗುರುತು ಪತ್ತೆ ಹಚ್ಚುವ ಉದ್ದೇಶಕ್ಕಾಗಿ 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಅಪರಾಧ ವಿಭಾಗದ ವಿಶೇಷ ತನಿಖಾ ತಂಡವು ವಿಚಾರಣೆಗೆ ಒಳಪಡಿಸಿದೆ. ಮತ್ತು ಡ್ಯೂಟಿ ರೋಸ್ಟರ್ಗಳಂತಹ ಹಲವಾರು ದಾಖಲೆಗಳನ್ನು ವಿಶ್ಲೇಷಿಸಲಾಗಿದೆ ಎಂದು ವರದಿ ಮಾಡಿದೆ.
ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಈ ಘಟನೆಯ ವೀಡಿಯೊದಲ್ಲಿ ಪೊಲೀಸ್ ಸಿಬ್ಬಂದಿ ರಸ್ತೆಯಲ್ಲಿ ಮಲಗಿದ್ದ ಐವರು ಗಾಯಾಳುಗಳನ್ನು ಥಳಿಸಿ, ರಾಷ್ಟ್ರಗೀತೆ ಹೇಳಲು ಹಾಗೂ ‘ವಂದೇ ಮಾತರಂ’ ಪಠಿಸಲು ಒತ್ತಾಯಿಸಿದ್ದಾರೆ.
ಘಟನೆಯ ಕೆಲವು ದಿನಗಳ ನಂತರ 24 ವರ್ಷದ ಕಾರ್ಡಮ್ ಪುರಿ ನಿವಾಸಿ ಫೈಝಾನ್ ದಿಲ್ಲಿಯ ಲೋಕ ನಾಯಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಫೈಝಾನ್ ಸಾವಿನ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ The Quint ‘ಗೆ ಹೇಳಿದ್ದರು. ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಆರೋಪಗಳನ್ನು ಪಟ್ಟಿ ಮಾಡಿದ್ದಾರೆ.