13 ವರ್ಷದ ಬಾಲಕಿಯ ಅಪಹರಣ : ಸಾಮೂಹಿಕ ಅತ್ಯಾಚಾರ – 7 ಆರೋಪಿಗಳು ಅರೆಸ್ಟ್!

ಮಹಾರಾಷ್ಟ್ರದ ಪುಣೆಯಲ್ಲಿ 13 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಏಳು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಆಗಸ್ಟ್ 31 ರ ರಾತ್ರಿ ಈ ಘಟನೆ ನಡೆದಿದ್ದು, ಹುಡುಗಿ ಪುಣೆ ರೈಲ್ವೇ ನಿಲ್ದಾಣದಲ್ಲಿ ಸ್ನೇಹಿತನಿಗಾಗಿ ಕಾಯುತ್ತಿದ್ದಾಗ ಆಟೋ ರಿಕ್ಷಾ ಚಾಲಕ ಆಕೆಯನ್ನು ಗಮನಿಸಿದ್ದಾನೆ. ಆದರೆ ಎಷ್ಟೇ ಸಮಯವಾದರೂ ಸ್ನೇಹಿತ ಬರದಿದ್ದಾಗ ಮನೆಗೆ ಮರಳನ್ನು ನಿರ್ಧರಿಸಿದ್ದಾಳೆ.  ಆಗ ಆಟೋ ಚಾಲಕ ಆಕೆಯನ್ನು ಕರೆದೊಯ್ದು ಕೆಲವು ಸ್ನೇಹಿತರಿಗೆ ಕರೆ ಮಾಡಿದ್ದಾನೆ. ನಂತರ ಆರೋಪಿಗಳು ನಗರದ ಸುತ್ತಲೂ ಓಡಾಡಿ ಅನೇಕ ಸ್ಥಳಗಳಲ್ಲಿ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ನಂತರ ಅವರು ಆಕೆಯನ್ನು ಮುಂಬೈಗೆ ಹೋಗುವ ಬಸ್ ಹತ್ತುವಂತೆ ಒತ್ತಾಯಿಸಿದ್ದಾರೆ.

ಅದಾಗಲೆ ಬಾಲಕಿಯ ತಂದೆ ವನವಾಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ವೇಳೆ ಪೊಲೀಸರು ಆಕೆಯನ್ನು ಹುಡುಕತೊಡಗಿದರು ಎಂದು ಪುಣೆಯಲ್ಲಿ ಉಪ ಪೊಲೀಸ್ ಆಯುಕ್ತ ನಮ್ರತಾ ಪಾಟೀಲ್ ತಿಳಿಸಿದ್ದಾರೆ.

“ನಾವು ಆಕೆಯನ್ನು ಪುಣೆಯಲ್ಲಿ ಕಂಡುಕೊಂಡೆವು ಮತ್ತು ಆಕೆಯ ಹೇಳಿಕೆಯನ್ನು ದಾಖಲಿಸಿದೆವು, ನಾವು ಆರೋಪಿಯನ್ನು ಬಂಧಿಸಿದ್ದೇವೆ. ಆಕೆ ಈಗ ಸ್ಥಿರವಾಗಿದ್ದಾಳೆ” ಎಂದು ಅಧಿಕಾರಿ ಹೇಳಿದರು.

“ನಾಪತ್ತೆ ದೂರಿನ ತನಿಖೆಯ ಸಮಯದಲ್ಲಿ ನಾವು ಭಾನುವಾರ ಬಾಲಕಿಯನ್ನು ಪತ್ತೆ ಮಾಡಿದ್ದೇವೆ. ಆಕೆಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿದೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ” ಎಂದು ವನ್ವಾಡಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ದೀಪಕ್ ಲಗಡ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಕೆಲವು ಆರೋಪಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights