ಗುಜರಾತ್‌ನಲ್ಲಿ ಕುಸಿಯುತ್ತಿದೆ ಬಿಜೆಪಿ; ಇದು ಕಾಂಗ್ರೆಸ್‌ಗೆ ಜನರನ್ನು ಸಜ್ಜುಗೊಳಿಸುವ ಸಮಯ: ಜಿಗ್ನೇಶ್ ಮೇವಾನಿ

ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಅವರು, ಪಕ್ಷಕ್ಕೆ ಸೇರಿದ ಕನ್ಹಯ್ಯಾ ಕುಮಾರ್ ಜೊತೆಗೆ ದೇಶದ ವಿವಿಧ ಭಾಗಗಳಲ್ಲಿ ಅಧಿಕಾರ ವಿರೋಧಿ ಚಳುವಳಿಯನ್ನು ಕಟ್ಟಲು ತಳಮಟ್ಟದಲ್ಲಿ ಯುವಕರೊಂದಿಗೆ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ.

“2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸುತ್ತೇನೆ. ನಾವು ರಾಜ್ಯದ ಜನರನ್ನು ತಲುಪುತ್ತೇವೆ ಮತ್ತು ಅವರೊಂದಿಗೆ ತೊಡಗಿಸಿಕೊಳ್ಳುತ್ತೇವೆ. ಗುಜರಾತ್‌ನಲ್ಲಿ ಒಂದು ಸಾಮೂಹಿಕ ಚಳುವಳಿಯನ್ನು ಕಟ್ಟುವುದು ನಮ್ಮ ಗುರಿಯಾಗಿದೆ. ಈ ಚಳುವಳಿಯು ಬಿಜೆಪಿ ಆಡಳಿತದಲ್ಲಿ ದೇಶವನ್ನು ಹಾಳಾಗದಂತೆ ರಕ್ಷಿಸಲು ಸಹಾಯ ಮಾಡುತ್ತದೆ. ನಾವು ನೀರು, ಆರೋಗ್ಯ, ನೈರ್ಮಲ್ಯ, ಶಿಕ್ಷಣ ಮತ್ತು ಮಾನವ ಹಕ್ಕುಗಳ ವಿಷಯಗಳ ಕುರಿತು ಮಾತನಾಡುತ್ತೇವೆ” ಎಂದು ಮೇವಾನಿ ಹೇಳಿದ್ದಾರೆ.

ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರದ ಕೋವಿಡ್ ದುರಾಡಳಿತವು ರಾಜ್ಯದ ಆರೋಗ್ಯ ಮೂಲಸೌಕರ್ಯಗಳ ಕಳಪೆ ಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಮೇವಾನಿ ಹೇಳಿದ್ದಾರೆ.

ನೋಟು ರದ್ದತಿ, ಲಾಕ್‌ಡೌನ್ ಮತ್ತು ಜಿಎಸ್‌ಟಿಯಿಂದಾಗಿ ರಾಜ್ಯದ ಸಣ್ಣ ಉದ್ಯಮಿಗಳು ಸಹ ಬಳಲುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಗುಜರಾತ್‌ನಲ್ಲಿ ಭಾರೀ ಒಳಜಗಳ ಮತ್ತು ದುರಾಡಳಿತದ ನಡುವೆ ಬಿಜೆಪಿ ಹೆಣಗಾಡುತ್ತಿದೆ ಎಂದು ಮೇವಾನಿ ಹೇಳಿದ್ದಾರೆ.

ಇದನ್ನೂ ಓದಿ: ರೈತರ ಮೇಲೆ ಸರ್ಕಾರ ದರ್ಪ; ಪ್ರತಿಭಟನಾನಿರತ ರೈತರ ಮೇಲೆ ಜಲ ಫಿರಂಗಿ ಬಳಸಿದ ಹರಿಯಾಣ ಸರ್ಕಾರ

“ಗುಜರಾತಿನಲ್ಲಿ ಬಿಜೆಪಿಯು ತನ್ನ ಕ್ಯಾಬಿನೆಟ್ ಸದಸ್ಯರನ್ನು ಆಯ್ಕೆ ಮಾಡಿದೆ. ಇದು ಹಾಲಿನಿಂದ ನೊಣವನ್ನು ಹೇಗೆ ಆರಿಸುವುದು ಎಂಬ ಗೊಂದಲ ಬಿಜೆಪಿಯಲ್ಲಿದೆ. ಪ್ರಧಾನಿಯವರ ತವರು ರಾಜ್ಯದಲ್ಲಿಯೇ ಬಿಜೆಪಿ  ಭಾರೀ ಗೊಂದಲದಲ್ಲಿದೆ. ಇದರಿಂದ ಬಿಜೆಪಿ ಭಾರೀ ಹಿನ್ನಡೆ ಅನುಭವಿಸುತ್ತಿದೆ” ಎಂದು ಅವರು ಹೇಳಿದ್ದಾರೆ.

1998 ರಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೆ, ಅಂತಿಮವಾಗಿ ಬಿಜೆಪಿಯನ್ನು ಕಾಂಗ್ರೆಸ್‌ನಿಂದ ತೊಡೆದು ಹಾಕುವಲ್ಲಿ ಯಶಸ್ವಿಯಾಗುತ್ತದೆ ಎಂದು ಮೆವಾನಿ ಹೇಳಿದ್ದಾರೆ.

2017ರ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಾಧನೆ ಅದ್ಭುತವಾಗಿದೆ. ನಾವು ಬಿಜೆಪಿಗಿಂತ ಕೇವಲ 19 ಸ್ಥಾನ ಕಡಿಮೆ ಗೆದ್ದಿದ್ದೇವೆ. ನಾವು ಈಗ ಸರಿದೂಗಿಸಬೇಕಾದ ಅಂತರವು ಒಂದು ಸಣ್ಣ ಸಂಖ್ಯೆಗೆ ಇಳಿದಿದೆ. ಇದು ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ಅವರು ಹೇಳಿದರು.

2017 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ, ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿ 99 ಸ್ಥಾನಗಳನ್ನು ಗೆದ್ದಿದೆ. ಇದು ಸದನದಲ್ಲಿ ಸರಳ ಬಹುಮತಕ್ಕೆ ಬೇಕಾಗಿರುವುದಕ್ಕಿಂತ ಕೇವಲ ಏಳು ಸ್ಥಾನಗಳಷ್ಟೆ ಗೆದ್ದಿದೆ. ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು 80 ಸ್ಥಾನಗಳನ್ನು ಗೆದ್ದಿವೆ. 2012ಕ್ಕೆ ಹೋಲಿಸಿದರೆ ಬಿಜೆಪಿ ಶೇಕಡಾ 49.1 ರಷ್ಟು ಮತಗಳನ್ನು ಪಡೆದುಕೊಂಡಿದೆ, ಆದರೆ 16 ಸ್ಥಾನಗಳನ್ನು ಕಳೆದುಕೊಂಡಿದೆ. ಕಾಂಗ್ರೆಸ್‌ 16 ಸ್ಥಾನಗಳಲ್ಲಿ ಜಿಗಿತ ಸಾಧಿಸಿದೆ

ಇದನ್ನೂ ಓದಿ: ಆರ್‌ಟಿಐ ಕಾರ್ಯಕರ್ತನ ಕೊಲೆ ಪ್ರಕರಣ: ಬಿಜೆಪಿ ನಾಯಕ ಸೋಲಂಕಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿದ ಗುಜರಾತ್ ಹೈಕೋರ್ಟ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights