ಬಂಗಾಳ ಬೈ ಎಲೆಕ್ಷನ್: ಸಿಎಂ ಮಮತಾ ಬ್ಯಾನರ್ಜಿಗೆ ಭರ್ಜರಿ ಜಯ; ಉಳಿದ ಎರಡು ಸ್ಥಾನದಲ್ಲೂ ಟಿಎಂಸಿ ಮುನ್ನಡೆ!

ಮುಖ್ಯಮಂತ್ರಿ ಖುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಉಪಚುನಾವಣೆ ಎದುರಿಸಿದ್ದ ಸಿಎಂ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದು, ಸಿಎಂ ಖುರ್ಚಿ ಭದ್ರ ಮಾಡಿಕೊಂಡಿದ್ದಾರೆ.

ಭವಾನಿಪುರ ಉಪಚುನಾವೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಿಯಾಂಕ ಟಿಬ್ರೆವಾಲ್ ವಿರುದ್ಧ 58,389 ಮತಗಳ ಅಂತರದಲ್ಲಿ ಮಮತಾ ಗೆಲುವು ಸಾಧಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಸುವೇಂದು ಅಧಿಕಾರಿ ವಿರುದ್ದ ಪರಾಭವಗೊಂಡಿದ್ದರು. ಹೀಗಾಗಿ ಅವರು ಸಿಎಂ ಸ್ಥಾನವನ್ನು ಉಳಿಸಿಕೊಳ್ಳಲು ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಇಂದು ನಡೆದ ಹದಿನಾರು ಸುತ್ತಿನ ಮತ ಎಣಿಕೆಯ ನಂತರ ಮಮತಾ ಬ್ಯಾನರ್ಜಿಯವರು 52,017 ಮತಗಳಿಂದ ಮುನ್ನಡೆಯಲ್ಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿತ್ತು. 2011 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ತನ್ನ ಗೆಲುವಿನ ಅಂತರ 49,936 ಮತಗಳಿತ್ತು. ಈ ಬಾರಿ ಆ ಮುರಿದು ದಾಖಲೆ ಬರೆದಿದ್ದಾರೆ.

ಭವಾನಿಪುರ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಬ್ಯಾನರ್ಜಿ 76,413 ಮತಗಳನ್ನು ಪಡೆದಿದ್ದರೆ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ 24,396 ಮತಗಳನ್ನು ಪಡೆದಿದ್ದರು.

ಮುರ್ಷಿದಾಬಾದ್‌ನ ಸಂಸರ್‌ಗಂಜ್ ಮತ್ತು ಜಂಗೀಪುರ ಉಪ ಚುನಾವಣೆಗಳಲ್ಲಿ ಸಹ ಟಿಎಂಸಿ ಮುಂಚೂಣಿಯಲ್ಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights