ರೈತ ಹೋರಾಟಕ್ಕೆ ಒಂದು ವರ್ಷ: ಅನ್ನದಾತರ ಸಂಘರ್ಷದ ಪ್ರಮುಖ ಹೆಜ್ಜೆಗಳು!

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ದ ರೈತರು ನಡೆಸಿದ ಸಂಘರ್ಷಕ್ಕೆ ಜಯ ದೊರೆತಿದೆ. ಪ್ರಧಾನಿ ಮೋದಿ ಅವರು ಮೂರು ಕರಷಿ ಕಾಯ್ದೆಗಳನ್ನು ವಾಪಸ್‌ ಪಡೆದುಕೊಳ್ಳುವುದಾಗಿ ಘೋಷಿಸಿದ್ಧಾರೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟವೂ ಕಾಯ್ದೆಗಳನ್ನು ವಾಪಸ್‌ ತೆಗೆದುಕೊಳ್ಳಲು ಅನುಮೋದನೆ ನೀಡಿದೆ. ಕಾಯ್ದೆಗಳ ವಿರುದ್ದ ಸಿಡಿದೆದ್ದ ರೈತರ ಹೋರಾಟ ನ.26ಕ್ಕೆ ಒಂದು ವರ್ಷ ಪೂರೈಸಲಿದ್ದು, ಈ ಒಂದು ವರ್ಷದ ರೈತ ಸಂಘರ್ಷದ ಪ್ರಮುಖ ಹೆಜ್ಜೆಗಳು ಕೆಳಗಿನಂತಿವೆ.

ಜೂನ್ 5, 2020 | ಕೇಂದ್ರ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ಕೃಷಿ ಮಸೂದೆಗಳ ಪ್ರಸ್ತಾವನೆಯಮಂಡನೆ.

ಜೂನ್ 14, 2020 | ರೈತ ಸಂಘಟನೆ ಭಾರತೀಯಕಿಸಾನ್ಯೂನಿಯನ್ (ಉಗ್ರಾನ್) ನಿಂದ ಜೂನ್ 14 ರಂದು ಕೇಂದ್ರದ ಸುಗ್ರೀವಾಜ್ಞೆಗಳಿಗೆ ಆಕ್ಷೇಪ.

ಜೂನ್ 15 – 30, 2020 |ದೇಶದ ಹಲವೆಡೆ ರೈತರು ಹಂತಹಂತವಾಗಿ ತಮ್ಮ ಊರುಗಳ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ಪ್ರಾರಂಭ.

ಜುಲೈ 14, 2020 | ಕೊರೋನಾ ಭೀತಿಯ ಹಿನ್ನೆಲೆ ಪ್ರತಿಭಟನೆಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ ಎಂಬ ರಾಜ್ಯ ಸರ್ಕಾರದ ಆದೇಶವನ್ನು ಖಂಡಿಸಿ ಪಂಜಾಬ್ನ ರೈತರು ಪ್ರತಿಭಟನೆ.

ಜುಲೈ 20, 2020 | ಪಂಜಾಬ್‌ನ 11 ಮುಖ್ಯ ರೈತ ಸಂಘಗಳು ಸೇರಿ ರಾಜ್ಯದ ಹಲವೆಡೆ ಆಗಿನ ಶಿರೋಮಣಿ ಅಕಾಲಿದಳ – ಬಿಜೆಪಿ ಮೈತ್ರಿ ಕೂಟದ ಪ್ರತಿಕೃತಿಗಳನ್ನು ದಹನ ಮಾಡುವ ಮೂಲಕಆಕ್ರೋಶ.

ಸೆಪ್ಟೆಂಬರ್ 17, 2020 | ಕೃಷಿ ಮಸೂದೆಗಳನ್ನು ವಿರೋಧಿಸಿ ಕೇಂದ್ರ ಸಚಿವ ಸ್ಥಾನಕ್ಕೆ ಶಿರೋಮಣಿ ಅಕಾಲಿದಳದ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ.

ಸೆಪ್ಟೆಂಬರ್ 24, 2020 | ಕೃಷಿ ಮಸೂದೆಗಳನ್ನು ವಿರೋಧಿಸಿ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಹಾಗೂ ಭಾರತೀಯ ಕಿಸಾನ್ ಯೂನಿಯನ್ ಸೇರಿ ೧೨ ಸ್ಥಳಗಳಲ್ಲಿ ರೈಲ್ ರೋಖೋ ಚಳವಳಿ.

ಅಕ್ಟೋಬರ್ 8, 2020 | ಕೃಷಿ ಸುಧಾರಣಾ ನೀತಿಗಳ ಬಗ್ಗೆ ಮನವರಿಕೆ ಮಾಡಿಕೊಡಲು ರೈತರಿಗೆ ದೆಹಲಿಗೆ ಆಹ್ವಾನ. ಆದರೆ, ರೈತರಿಂದ ಸರ್ಕಾರದ ಆಹ್ವಾನ ತಿರಸ್ಕಾರ

ನವೆಂಬರ್ 5, 2020 | ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ 22 ರಾಜ್ಯಗಳ 200 ಕ್ಕೂ ಹೆಚ್ಚು ಕೃಷಿ ಸಂಘಟನೆಗಳು ರಾಷ್ಟ್ರವ್ಯಾಪಿ ಚಕ್ಕಾಜಾಮ್ (ರಸ್ತೆತಡೆ).

ನವೆಂಬರ್ 25, 2020 | ದೆಹಲಿ ಚಲೋಗೆ ಕರೆ.

ನವೆಂಬರ್ 26, 2020 | ಜಗತ್ತು ಕಂಡ ಐತಿಹಾಸಿಕ ಹೋರಾಟ. ವಿಶ್ವದ ಅತಿದೊಡ್ಡ ಸಂಘಟಿತ ಹಾಗೂ ಶಾಂತಿಯುತ ಹೋರಾಟ ಎನ್ನಿಸಿಕೊಂಡ ರೈತಚಳವಳಿಗೆ ದೇಶಾದ್ಯಂತ 25 ಕೋಟಿಗೂ ಹೆಚ್ಚು ಕೃಷಿ ಕಾರ್ಮಿಕರ ಬೆಂಬಲ.
ಶಾಂತಿಯುತವಾಗಿ ಟ್ರ್ಯಾಕ್ಟರ್ ರ್ಯಾಲಿ ಹೊರಟಿದ್ದ ರೈತರೊಂದಿಗೆ ಅಮಾನವೀಯವಾಗಿ ನಡೆದುಕೊಂಡ ದೆಹಲಿಪೊಲೀಸರು. ಅಂಬಾಲ ಬಳಿ ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗ. ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ಯತ್ನ.
ಹರ್ಯಾಣ ಸರ್ಕಾರ ಕೂಡ ದೆಹಲಿ ಗಡಿಯನ್ನು ಸಂಪರ್ಕಿಸುವ ಹೆದ್ದಾರಿಗಳ ನಡುವೆಯೇ ಆಳುದ್ದದ ಗುಂಡಿಗಳನ್ನುತೋಡಿತು. ಜೊತೆಗೆ ರಸ್ತೆಗೆ ಅಡ್ಡಲಾಗಿ ಕಾಂಕ್ರೀಟ್ ಬ್ಯಾರಿಕೇಡ್ಗಳನ್ನು ನಿಲ್ಲಿಸಿ ರೈತರು ದೆಹಲಿ ಪ್ರವೇಶಿಸದಂತೆ ತಡೆಯುವ ಪ್ರಯತ್ನ ನಡೆಸಿತು.

ನವೆಂಬರ್ 27, 2020 | ಪ್ರತಿಭಟನಾನಿರತ ರೈತರಿಗೆ ದೆಹಲಿ ಪ್ರವೇಶಕ್ಕೆ ಅನುಮತಿ.

ನವೆಂಬರ್ 26ರ ಹಿಂಸಾತ್ಮಕ ಘಟನೆಯ ಬಳಿಕ ರೈತರ ಹೋರಾಟಕ್ಕೆ ಅಂತರಾಷ್ಟ್ರೀಯ ಮನ್ನಣೆ. ಪೊಲೀಸರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ರೈತರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಭಾರತದ ರೈತರ ಹೋರಾಟ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗತೊಡಗಿತು.

ನವೆಂಬರ್ 28, 2020 | ಸರ್ಕಾರದ 2 ಷರತ್ತುಗಳಿಗೆ ಒಪ್ಪಿಕೊಳ್ಳುವುದಾದರೆ ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದು ಗೃಹ ಸಚಿವ ಅಮಿತ್ ಶಾ ಹೇಳಿಕೆ.

ಷರತ್ತುಗಳು: 1) ಹೋರಾಟ ನಿರತರು ಕೂಡಲೇ ದೆಹಲಿ ಗಡಿಗಳನ್ನು ಖಾಲಿ ಮಾಡಬೇಕು. 2) ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬುರಾರಿ ಮೈದಾನಕ್ಕೆ ಸ್ಥಳಾಂತರಿಸಬೇಕು.

ಆದರೆ, ರೈತರಿಂದ ಎರಡೂ ಷರತ್ತುಗಳ ನಿರಾಕರಣೆ.

ಡಿಸೆಂಬರ್ 1,2020 | ಬಿಲ್ಕಿಸ್ ದಾದಿ ಬಂಧನ. ಕೇಂದ್ರ ಸರ್ಕಾರದ ನಡೆಗೆ ಜನಾಕ್ರೋಶ.

35 ಕೃಷಿ ಸಂಘಟನೆಗಳ ಮುಖಂಡರೊಂದಿಗೆ ಮೋದಿ ಸರ್ಕಾರ ಮೊದಲ ಸುತ್ತಿನ ಮಾತುಕತೆ ನಡೆಸಿತು. ಆದರೆ, ಸಭೆಯಲ್ಲಿ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ.

ಡಿಸೆಂಬರ್ 2, 2020 | ಭಾರತದ ರೈತ ಹೋರಾಟ ಮತ್ತು ಮೋದಿ ಸರ್ಕಾರ ಅದನ್ನು ಹತ್ತಿಕ್ಕಲು ಯತ್ನಿಸುತ್ತಿರುವುದು ನಿಜಕ್ಕೂ ‘ಆತಂಕಕಾರಿ’ ಎನ್ನುವ ಮೂಲಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೂ ಭಾರತದ ರೈತಕ್ಕೆ ದನಿಗೂಡಿಸಿದ್ದರು.

ಡಿಸೆಂಬರ್ 3, 2020 | ರೈತ ನಾಯಕರು ಹಾಗೂ ಸರ್ಕಾರದ ಪ್ರತಿನಿಧಿಗಳ ನಡುವೆ ನಡೆದ ಮೊದಲ ಸುತ್ತಿನ ಮಾತುಕತೆ ವಿಫಲ.

ಡಿಸೆಂಬರ್ 4, 2020|ರೈತ ಹೋರಾಟಗಾರರ ದೃಢತೆ ಹಾಗೂ ಹೋರಾಟವನ್ನು ದೀರ್ಘಕಾಲದ ವರೆಗೆ ಮುನ್ನಡೆಸಲು ಅನ್ನದಾತರ ಸಿದ್ಧತೆ. ರೈತ ಹೋರಾಟಕ್ಕೆ ದೊಡ್ಡ ಮಟ್ಟದ ಮನ್ನಣೆ.

ಡಿಸೆಂಬರ್ 5, 2020 | ಸರ್ಕಾರದಪ್ರತಿನಿಧಿಗಳಜೊತೆಗಿನ 2ನೇ ಸುತ್ತಿನ ಮಾತುಕತೆ ವಿಫಲ.

ಡಿಸೆಂಬರ್ 5, 2020 | ರೈತರಪ್ರತಿಭಟನೆಗೆ ಪ್ರಪಂಚದಾದ್ಯಂತಬೆಂಬಲ.

ಡಿಸೆಂಬರ್ 6, 2020 | ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಾವಿರಾರು ಅನಿವಾಸಿ ಭಾರತೀಯರು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿ ಎದುರು ಪ್ರತಿಭಟನೆ.

ಡಿಸೆಂಬರ್ 8, 2020 | ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳಿಂದ ಭಾರತ ಬಂದ್ಗೆ ಕರೆ

ಡಿಸೆಂಬರ್ 8, 2020 | – ಗೃಹ ಸಚಿವ ಅಮಿತ್ ಹಾಗೂ ರೈತ ಸಂಘಟನೆಗಳ ನಡುವೆ ಏರ್ಪಟ್ಟ ಮಾತುಕತೆಯೂ ವಿಫಲ.

ಡಿಸೆಂಬರ್ 9, 2020 |– ಅಂಬಾನಿ, ಅದಾನಿಗಳ ಅನುಕೂಲಕ್ಕಾಗಿ ಹೊಸ ಕೃಷಿಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ಆರೋಪ. ಈ ಇಬ್ಬರೂ ಉದ್ಯಮಿಗಳಿಗೆ ಸೇರಿದ ಕಂಪನಿಗಳು ಒದಗಿಸುವ ಎಲ್ಲಾ ಸೇವೆಗಳ ಬಹಿಷ್ಕಾರ.

ಡಿಸೆಂಬರ್ 11, 2020| ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಭಾರತೀಯ ಕಿಸಾನ್ ಯೂನಿಯನ್.

ಡಿಸೆಂಬರ್ 13, 2020 | ರೈತ ಹೋರಾಟದ ಹಿಂದೆ ‘ತುಕ್ಡೆ ತುಕ್ಡೆ ಗ್ಯಾಂಗ್ ಕೈವಾಡ ಇದೆ’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪ.

ಡಿಸೆಂಬರ್ 16, 2020 | ಕೃಷಿ ಕಾನೂನುಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ.

ಡಿಸೆಂಬರ್ 20 2020 | ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೋರಾಡುತ್ತಲೇ ಕೊನೆಯುಸಿರೆಳೆದ ಹುತಾತ್ಮ ರೈತರಿಗೆ ಪ್ರತಿಭಟನಾನಿರತರ ಶ್ರದ್ಧಾಂಜಲಿ.

ಡಿಸೆಂಬರ್ 21, 2020 | ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ರೈತರಿಂದ 24 ಗಂಟೆಗಳ ಉಪವಾಸ ಸತ್ಯಾಗ್ರಹ.

ಜನವರಿ 4, 2021 | ಕೇಂದ್ರ ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳ ನಡುವೆ 7ನೇ ಸುತ್ತಿನ ಸಭೆ. ಈಸಭೆಯಲ್ಲೂ ಕೇಂದ್ರ ಸರ್ಕಾರ ಕೃಷಿಕಾಯ್ದೆಗಳನ್ನು ಹಿಂಪಡೆಯಲುಒಪ್ಪಲಿಲ್ಲ. ರೈತರು ಕೂಡ ತಮ್ಮ ಪಟ್ಟನ್ನು ಸಡಿಲಿಸಲಿಲ್ಲ.

ಜನವರಿ 4, 2021 | ಮುಖೇಶ್ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ತಾನು ಯಾವುದೇ ಕಾರಣಕ್ಕೂ ಕಾಂಟ್ರಾಕ್ಟ್ ಫಾರ್ಮಿಂಗ್ (ಗುತ್ತಿಗೆ ಕೃಷಿ) ನಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಹೇಳಿಕೆ.

ಜನವರಿ 7, 2021 | ಜನವರಿ 11 ರಂದು ಹೊಸ ಕಾನೂನುಗಳನ್ನು ಪ್ರಶ್ನಿಸುವ ಮತ್ತು ರೈತ ಪ್ರತಿಭಟನೆಯನ್ನು ವಿರೋಧಿಸುವ ಎರಡು ಕಡೆಯ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ.

ಜನವರಿ 8, 2021| ರೈತ ಸಂಘಟನೆಗಳು ಮತ್ತು ಕೇಂದ್ರದ ಪ್ರತಿನಿಧಿಗಳ ನಡುವೆ ನಡೆದ 8ನೇ ಸುತ್ತಿನ ಮಾತುಕತೆ ಸಹ ವಿಫಲ.

ಜನವರಿ 11, 2021 | ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ನಿಭಾಯಿಸಿದ ರೀತಿಗೆ ಸುಪ್ರೀಂಕೋರ್ಟ್ಅಸಮಾಧಾನ.

ಜನವರಿ 12, 2021 | ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ಅನುಷ್ಠಾನಕ್ಕೆ ಸುಪ್ರೀಂಕೋರ್ಟ್ ತಡೆ.

ಜನವರಿ 15, 2021 | ಸರ್ಕಾರ ಮತ್ತು ರೈತ ಸಂಘದ ಪ್ರತಿನಿಧಿಗಳ ನಡುವೆ ನಡೆದ 9ನೇ ಸುತ್ತಿನ ಮಾತುಕತೆಯೂವಿಫಲ.

ಜನವರಿ 18, 2021 | ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಸಂಬಂಧಿಸಿ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟನೆ.

ಜನವರಿ 20, 2021 | 3 ಕೃಷಿ ಕಾನೂನುಗಳನ್ನು ಒಂದೂವರೆ ವರ್ಷಗಳಕಾಲ ಅಮಾನತುಗೊಳಿಸುವ ಮತ್ತು ಶಾಸನಗಳ ಬಗ್ಗೆ ಚರ್ಚಿಸಲು ಜಂಟಿ ಸಮಿತಿ ರಚನೆಗೆ ಮೋದಿ ಸರ್ಕಾರ ಪ್ರಸ್ತಾಪ. ರೈತರಿಂದತಿರಸ್ಕಾರ. ವಿವಾದಿತ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯಲುಆಗ್ರಹ.

ಜನವರಿ 24, 2021| ರಾಷ್ಟ್ರ ರಾಜಧಾನಿಯಲ್ಲಿ ರೈತರು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ದೆಹಲಿ ಪೊಲೀಸರಿಂದ ಅನುಮತಿ.

ಜನವರಿ 26, 2021 | ದೆಹಲಿಯ ಒಂದು ಸ್ಥಳವನ್ನು ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ರೈತರ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಶಾಂತಿಯುತ. ಆದರೆ, ಒಂದು ಮಾರ್ಗದಲ್ಲಿ ಪೊಲೀಸರು ರಸ್ತೆಗಳಿಗೆ ಬ್ಯಾರಿಕೇಡ್ಗಳನ್ನು ಅಡ್ಡಲಾಗಿ ನಿಲ್ಲಿಸಿ ರೈತರ ರ್ಯಾಲಿಯನ್ನು ತಡೆಯಲು ಯತ್ನ. ರೈತರಿಂದಲೂ ಪ್ರತಿರೋಧ ಈ ವೇಳೆ ಹೋರಾಟ ನಿರತ ರೈತರ ಮೇಲೆ ದೆಹಲಿ ಪೊಲೀಸರಿಂದ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ.

ಜನವರಿ 26, 2021 | ರ್ಯಾಲಿ ವೇಳೆ ಉದ್ರಿಕ್ತ ಗುಂಪಿನಿಂದ ಕೆಂಪುಕೋಟೆಯ ಮೇಲೆ ರೈತ ಒಕ್ಕೂಟ ಮತ್ತುಸಿಖ್ ಮುದಾಯದ ಪವಿತ್ರ ಧ್ವಜವಾದ ನಿಶಾನ್ ಸಾಹಿಬ್ಧ್ವಜಾರೋಹಣ. ಗಲಭೆ, ಪರಿಸ್ಥಿತಿ ಉದ್ವಿಗ್ನ.

ಜನವರಿ 26, 2021 | ಟ್ರ್ಯಾಕ್ಟರ್ ರ್ರ್ಯಾಲಿ ಸಂದರ್ಭದಲ್ಲಿ ಸಮಾಜ ವಿರೋಧಿ ಶಕ್ತಿಗಳು ನುಸುಳಿ ನಡೆಸಿದ ಹಿಂಸಾಚಾರಕ್ಕೂ ಹೋರಾಟನಿರತ ರೈತರಿಗೂ ಯಾವುದೇ ಸಂಬಧವಿಲ್ಲ ಎಂದು ರೈತ ಸಂಘಟನೆಗಳ ಒಕ್ಕೂಟವಾದ ಕಿಸಾನ್ ಸಂಯುಕ್ತ ಮೋರ್ಚಾ ಹೇಳಿಕೆ.

ಜನವರಿ 26, 2021 | ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್, ರಾಜ್ಯದ ನಾಲ್ಕು ದಿಕ್ಕುಗಳಿಂದ ಟ್ರ್ಯಾಕ್ಟರ್ ಹಾಗೂ ವಿವಿಧ ವಾಹನಗಳೊಂದಿಗೆ ಬೆಂಗಳೂರಿಗೆ ರೈತರ ಆಗಮನ. ಎಂಎಸ್ಪಿ ಜಾರಿ ಮತ್ತು 3 ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ.

ಜನವರಿ 27, 2021 | ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ರೈತ ನಾಯಕರುಗಳಾದ ರಾಕೇಶ್ ಟಿಕಾಯತ್ ಮತ್ತು ಯೋಗೇಂದ್ರ ಯಾದವ್ ಸೇರಿದಂತೆ ಒಟ್ಟು 25 ಹೋರಾಟಗಾರರ ವಿರುದ್ಧ ಎಫ್ಐಆರ್.

ಜನವರಿ 27, 2021 | ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆ ಬಳಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣಾನಾಗಿದ್ದ ನಟ ದೀಪ್ ಸಿಧು ಜೊತೆಗೆ ಆಡಳಿತಾರೂಢ ಬಿಜೆಪಿಗರು ನಂಟು ಹೊಂದಿರುವುದಾಗಿ ಆರೋಪಿಸಿ ಪ್ರತಿಪಕ್ಷಗಳಿಂದ ಸರ್ಕಾರದ ಕಾರ್ಯ ಕಲಾಪಗಳಿಗೆ ಘೇರಾವ್.

ಜನವರಿ 28 , 2021 | ಉತ್ತರ ಪ್ರದೇಶ ಪೊಲೀಸರು, ದೆಹಲಿ ಮತ್ತು ಸಹರನಪುರ ಹೈವೇಯಲ್ಲಿ ಹೋರಾಟ ನಿರತರಾಗಿದ್ದ ರೈತರನ್ನು ಬಲವಂತವಾಗಿ ತೆರವುಗೊಳಿಸಲು ಯತ್ನ

ಜನವರಿ 29, 2021 | ಸಾಮಾಜಿಕ ಹೋರಾಟಗಾರ ಅಣ್ಣಾಹಜಾರೆ ರೈತ ಹೋರಾಟವನ್ನು ಬೆಂಬಲಿಸಿ ಜನವರಿ 30ರಿಂದ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಕೂರುವುದಾಗಿ ಘೋಷಣೆ.

ಜನವರಿ 30, 2021 | ರೈತರ ಟ್ರ್ಯಾಕ್ಟರ್ ರ್ಯಾಲಿಯ ಬಳಿಕ ದೆಹಲಿಯ ಕೆಲಭಾಗಗಳಲ್ಲಿ ಇಂಟರ್ನೆಟ್ ಸೇವೆ ಕಡಿತಗೊಳಿಸಿದ ಕೇಂದ್ರ ಸರ್ಕಾರ.

ಫೆಬ್ರವರಿ 2, 2021 | ರೈತ ಹೋರಾಟವನ್ನು ಬೆಂಬಲಿಸಿ ಪಾಪ್ ಗಾಯಕಿ ರಿಹಾನಾ ಮತ್ತು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಟ್ವೀಟ್. ಇದರ ಬೆನ್ನಿಗೆ ರೈತ ಹೋರಾಟಕ್ಕೆ ಮತ್ತೆ ಹೆಚ್ಚಿದ ಅಂತಾರಾಷ್ಟ್ರೀಯ ಜನ ಮನ್ನಣೆ.

ಫೆಬ್ರವರಿ 5, 2021 | ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ, ವಕೀಲೆ ರೈತ ಹೋರಾಟ ಬೆಂಬಲಿಸಿ ಟ್ವೀಟ್. ಕೇಂದ್ರಕ್ಕೆ ಇರಿಸು ಮುರಿಸು.

ಫೆಬ್ರವರಿ 9, 2021 | ಹರಿಯಾಣದ ಕುರುಕ್ಷೇತ್ರದ ಬಳಿ ಇರುವ ಗುಮ್ಥಲಾ ಗ್ರಾಗಮದಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಮೊದಲ ಕಿಸಾನ್ ಮಹಾ ಪಂಚಾಯತ್.

ಫೆಬ್ರವರಿ 10, 2021| ಸಿಂಘು ಗಡಿಯಲ್ಲಿ ಎರಡನೇ ರೈತ ಮಹಾ ಪಂಚಾಯತ್.

ಫೆಬ್ರವರಿ 13, 2021 | ಗ್ರೆಟ್ ಟೂಲ್ ಕಿಟ್ನಲ್ಲಿ ತಿದ್ದುಪಡಿ ಮತ್ತು ನಿಷೇಧಿತ ಸಂಘಟನೆಯ ವಿಡಿಯೋ ಸಭೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ.

ಫೆಬ್ರವರಿ 14, 2021 | ಹರಿಯಾಣದ ಕರ್ನಾಲ್ನಲ್ಲಿ ನಾಲ್ಕನೇ ಬೃಹತ್ ರೈತ ಮಹಾ ಪಂಚಾಯತ್.

ಫೆಬ್ರವರಿ 18, 2021 | 5ನೇ ಮಹಾಪಂಚಾಯತ್ನಲ್ಲಿ “ಕೇಂದ್ರ ಸರ್ಕಾರ ಭ್ರಮೆಯನ್ನು ಬಿಟ್ಟು ಹೊರಬರಲಿ, ಕೃಷಿ ಕಾಯ್ದೆ ಹಿಂಪಡೆಯುವವರೆಗೆ ಹೋರಾಟ ನಿಲ್ಲದು” ರೈತ ನಾಯಕ ರಾಕೇಶ್ ಟಿಕಾಯತ್ ಎಚ್ಚರಿಕೆ.

ಫೆಬ್ರವರಿ 20, 2021 | ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ 6ನೇ ಮಹಾ ಪಂಚಾಯತ್ ಆಯೋಜನೆ. ರಾಷ್ಟ್ರವ್ಯಾಪಿ ಹಲವೆಡೆ ರೈತ ಪಂಜಾಯತ್ ಆಯೋಜನೆಗೆ ಪ್ರೇರಣೆ.

ಫೆಬ್ರವರಿ 23, 2021| ಒಂದೇ ದಿನ ರಾಜಸ್ತಾನದ ಸರದಾರ್ ಶಹರ್ನಲ್ಲಿ 9 ನೇ ಹಾಗೂ ಸಿಕರ್ ಎಂಬಲ್ಲಿ 10ನೇ ಮಹಾಪಂಚಾಯತ್ಗಳು ನಡೆದವು.

ಫೆಬ್ರವರಿ 26, 2021| ರಾಜಸ್ತಾನದಗಂಗಾನಗರಜಿಲ್ಲೆಯಪದಮ್ಪುರಮಂಡಿಯಲ್ಲಿ 12 ಹಾಗೂಘಡಸಾನಾಮಂಡಿಯಲ್ಲಿ 13 ನೇಕಿಸಾನ್ಮಹಾಪಂಚಾಯತ್ಸಭೆಗಳುನಡೆದವು.

ಮಾರ್ಚ್ 4, 2021| ರೈತ ಹೋರಾಟಕ್ಕೆ ಮಹತ್ತರ ಮೈಲುಗಲ್ಲು. ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಗಳಲ್ಲಿ ಆರಂಭಿಸಿದ್ದ ಪ್ರತಿಭಟನೆ ಅಂದಿಗೆ 100 ದಿನಗಳನ್ನುಪೂರೈಸಿತ್ತು.

ಮಾರ್ಚ್ 20, 2021| ಕರ್ನಾಟಕದಲ್ಲಿ ಮೊದಲ ಬಾರಿಗೆ ರೈತ ಮಹಾ ಪಂಚಾಯತ್ಶಿವಮೊಗ್ಗದಲ್ಲಿ ನಡೆಯಿತು. ಎಲ್ಲಾ ರೈತ, ದಲಿತ, ಕಾರ್ಮಿಕ ಮತ್ತು ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಹೋರಾಟವನ್ನು ಆಯೋಜಿಸಿದ್ದವು. ಈ ಮಹಾ ಪಂಚಾಯತ್ನಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಮಾರ್ಚ್ 22,2021 | ಕೃಷಿ ಕಾಯ್ದೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಮಾರ್ಚ್ 24, 2021 | ಶಿವಮೊಗ್ಗದ ರೈತ ಮಹಾ ಪಂಚಾಯತ್ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಸಂಯುಕ್ತ ಕಿಸಾನ್ಮೋರ್ಚಾದ ಮುಖಂಡರಾದ ರಾಕೇಶ್ ಟಿಕಾಯತ್ ವಿರುದ್ಧ ಪ್ರಕರಣ ದಾಖಲು.

ಜುಲೈ 22, 2021| ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಬಂಡಾಯದ ನೆಲ ನರಗುಂದದಲ್ಲಿ ರೈತರಿಂದ ೪೫ ಕಿಮೀ ಪಾದಯಾತ್ರೆ ನಡೆಸಿ ಸಾತ್ವಿಕ ಆಕ್ರೋಶ.

ಅಕ್ಟೋಬರ್ 3, 2021| ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿನ ರೈತ ಹೋರಾಟಗಾರರ ಮೇಲೆ ಕಾರು ಚಲಾಯಿಸಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಅವರಿಂದ 4 ರೈತರ ಕೊಲೆ. ಭುಗಿಲೆದ್ದ ಹಿಂಸಾಚಾರದಲ್ಲಿ ಪತ್ರಕರ್ತ ಸೇರಿದಂತೆ 9 ಜನರ ಸಾವು.

ಅಕ್ಟೋಬರ್ 09, 2021| ಲಖೀಂಪುರ್ ಖೇರಿ ಹಿಂಸಾಚಾರದ ಪ್ರಮುಖ ಆರೋಪಿ ಆಶೀಶ್ ಮಿಶ್ರಾ ಬಂಧನಕ್ಕೆ ಪೊಲೀಸರ ಮೀನಾಮೇಶ. ಕೊನೆಗೂ ಸುಪ್ರೀಂ ಕಿಡಿಕಾರಿದ ಬಳಿಕ ಆರೋಪಿಯ ಬಂಧನ.

ನವೆಂಬರ್ 03, 2021| ಕರ್ನಾಟಕ, ದೆಹಲಿ ಹಿಮಾಚಲ ಪ್ರದೇಶ ಸೇರಿದಂತೆ 5 ರಾಜ್ಯಗಳ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಾರೀ ಹಿನ್ನಡೆ. ಕಳೆದ 1 ವರ್ಷದಲ್ಲಿ ಕೋಲ್ಕತ್ತಾ, ತಮಿಳುನಾಡು ಸೇರಿದಂತೆ 13 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ.

ಈ ಚುನಾವಣಾ ಫಲಿತಾಂಶಗಳು ಉತ್ತರ ಪ್ರದೇಶದ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ವ್ಯಾಖ್ಯಾನದಿಂದಲೇ ನಿದ್ದೆ ಗೆಟ್ಟ ಬಿಜೆಪಿ.

ನವೆಂಬರ್ 19 2021| ರೈತರ ಹಿತದೃಷ್ಟಿಯಿಂದಾಗಿ ವಿವಾದಾತ್ಮಕ ಕೃಷಿ ಕಾಯ್ದೆಯನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿಯಿಂದ ಘೋಷಣೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಮಸಿ ಬಳಿಯಲು ಸೃಷ್ಟಿಯಾದ ನಕಲಿ ಸೇನೆ; ಫೇಕ್‌ ಫ್ಯಾಕ್ಟರಿ ಬಹಿರಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights