ಶಾಪಿಂಗ್‌ಗೆ ತೆರಳಿದ್ದ ನಾಲ್ವರು ಭೀಕರ ಅಪಘಾತದಲ್ಲಿ ಸಾವು; ಇಡೀ ಕುಟುಂಬವೇ ಕಣ್ಮರೆ

ಶಾಪಿಂಗ್‌ ಮಾಡಲೆಂದು ತೆರಳಿದ್ದ ದಂಪತಿಗಳಿಬ್ಬರು ಮತ್ತು ಅವರ ಇಬ್ಬರು ಮಕ್ಕಳು ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಸತನಾದಲ್ಲಿ ನಡೆದಿದೆ.

ಅಪಘಾತದಲ್ಲಿ ಪತ್ನಿ-ಪತಿ ಮತ್ತು ಅವರ ಇಬ್ಬರು ಮಕ್ಕಳು ಅಸುನೀಗಿದ್ದು, ಪುಟ್ಟ ಕುಟುಂಬವೇ ಕಣ್ಮರೆಯಾಗಿದೆ.

ಕುಟುಂಬದ ಸದಸ್ಯರು ಷಾಪಿಂಗ್‌ಗಾಗಿ ಕಾರಿನಲ್ಲಿ ತೆರಳಿದ್ದರು. ಅವರು ಶಾಪಿಂಗ್‌ ಮುಗಿಸಿ ಮರಳುವಾಗ ಅವರ ಕಾರು ಅಪಘಾತಕ್ಕೀಡಾಗಿದ್ದು, ಸತ್ಯ (40), ಅವರ ಪತ್ನಿ ಮೋನಿಕಾ (36), ಮಕ್ಕಳಾದ ಇಶಾನಿ (10) ಹಾಗೂ ಸ್ನೇಹಾ (8) ಸಾವನ್ನಪ್ಪಿದ್ದಾರೆ.

ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ನಾಲ್ವರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸತನಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇನ್ನು ಈ ದುರ್ಘಟನೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್​ ಟ್ವೀಟ್‌ ಮಾಡಿದ್ದು, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘ಈ ಅಪಘಾತದ ಸುದ್ದಿ ಕೇಳಿ ತುಂಬಾ ಆಘಾತವಾಗಿದ್ದು, ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ಭಗವಂತ ಈ ನೋವು ಭರಿಸುವ ಶಕ್ತಿ ನೀಡಲಿ’ ಎಂದು ಪ್ರಾರ್ಥಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights