MLA ಸ್ಥಾನಕ್ಕೆ ರಾಜೀನಾಮೆ ನೀಡಿದ TMC ಶಾಸಕ ಸುವೆಂಡು ಅಧಿಕಾರಿ; BJP ಸೇರುವ ಸಾಧ್ಯತೆ!

ಪಶ್ವಿಮ ಬಂಗಾಳದ ಟಿಎಂಸಿ ಶಾಸಕ ಸುವೆಂಡು ಅಧಿಕಾರಿ ತಮ್ಮ ಎಲ್‌ಎಲ್‌ಎ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು ಪಕ್ಷದ ನಾಯಕರ ವಿರುದ್ಧ ಬಂಡಾಯವೆದ್ದಿದ್ದ ಅಧಿಕಾರಿ, ಕಳೆದ ತಿಂಗಳು ಸಚಿವ ಸ್ಥಾನ ತ್ಯಜಿಸಿದ್ದರು.

ಈ ವಾರದ ಕೊನೆಯಲ್ಲಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲಿದ್ದು, ಅಂದು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಪಶ್ವಿಮ ಬಂಗಾಳದ ಮಾಲ್ಡಾ, ಮುರ್ಷಿದಾಬಾದ್, ಪುರುಲಿಯಾ, ಬಂಕುರಾ ಮತ್ತು ಪಶ್ಚಿಮ ಮಿಡ್ನಾಪೋರ್‌ ಪ್ರದೇಶಗಳಲ್ಲಿ ಟಿಎಂಸಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದ ಮತ್ತು ಈ ಪ್ರದೇಶದಗಳಲ್ಲಿ ತನ್ನದೇ ಪ್ರಭಾವ ಬೆಳೆಸಿಕೊಂಡಿದ್ದ ಅಧಿಕಾರಿ ಅವರನ್ನು ಉಳಿಸಕೊಳ್ಳಲು ತೃಣಮೂಲ ಕಾಂಗ್ರೆಸ್‌ ಭಾರೀ ಪ್ರಯತ್ನ ನಡೆಸಿತ್ತು.

ಆದರೂ, ಇಂದು ತಮ್ಮ ಎಂಎಲ್‌ಎ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸುವೆಂಡು ಅಧಿಕಾರಿ, ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ತೆಲಂಗಾಣ ಎಂಎಲ್‌ಸಿ ಚುನಾವಣೆ: ಮತದಾರರ ವೈಯಕ್ತಿಕ ಡೇಟಾ ಕದ್ದ BJP ಎಂಎಲ್‌ಸಿ!


ಇದನ್ನೂ ಓದಿ: ಪ. ಬಂಗಾಳ ಚುನಾವಣೆ: TMCಯಲ್ಲಿ ಭಿನ್ನಾಭಿಪ್ರಾಯ; BJP ಗೆಲುವಿಗೆ ವರದಾನ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights