ತೆಲಂಗಾಣ ಎಂಎಲ್‌ಸಿ ಚುನಾವಣೆ: ಮತದಾರರ ವೈಯಕ್ತಿಕ ಡೇಟಾ ಕದ್ದ BJP ಎಂಎಲ್‌ಸಿ!

ತೆಲಂಗಾಣದಲ್ಲಿ ಮುಂಬರುವ ಪದವೀಧರ ಕ್ಷೇತ್ರದ ಎಂಎಲ್‌ಸಿ ಚುನಾವಣೆಯು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಪದವೀದರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ನೊಂದಾಯಿಸಿಕೊಂಡಿರುವ ನೂರಾರು ಜನರು ಟ್ವಿಟರ್‌ನಲ್ಲಿ ಈ ಬಗ್ಗೆ ಪೊಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಬಿಜೆಪಿಯ ಎಂಎಲ್‌ಸಿ ಎನ್ ರಾಮಂದರ್ ರಾವ್ ಅವರು ತಮ್ಮ ವೈಯಕ್ತಿಕ ಡೇಟಾಗಳನ್ನು ಕದ್ದುದ್ದು, ತಮಗೆ ಆ ಬಗ್ಗೆ ಅವರು ಮೆಸೇಜ್‌ಗಳನ್ನು ಕಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಚುನಾವಣಾ ಆಯೋಗದಿಂದ ತಮ್ಮ ದೂರವಾಣಿ ಸಂಖ್ಯೆಗಳು ಸೇರಿದಂತೆ ಮತದಾರರ ದತ್ತಾಂಶ ಸೋರಿಕೆಯಾಗಿವೆ ಎಂಬುದು ಕಳಿಸಲಾಗಿರುವ ಮೆಸೇಜ್‌ನಿಂದ ಕಂಡುಬರುತ್ತಿದೆ. “ಈ ಡೇಟಾವನ್ನು ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿ ರಾಜಕೀಯ ಪಕ್ಷಗಳಿಗೆ ವಿತರಿಸುತ್ತಿದೆಯೇ? ಅಥವಾ ಈ ವಿವರಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ಕದಿಯಲಾಗಿದೆಯೇ? ಎಂಬ ಸಂಶಯಗಳನ್ನು ಹೊರಹಾಕಿದ್ದಾರೆ.

ಇಂತಹ ವಿಚಾರಗಳಲ್ಲಿ ಯಾವುದೇ ಮಾರ್ಗಸೂಚಿಗಳು ಇಲ್ಲದೇ ಇರುವುದರಿಂದ ಮತದಾರರಿಗೆ ರಾಜಕೀಯ ಪಕ್ಷಗಳಿಂದ ಹಾನಿಕಾರಕ ಮತ್ತು ಇಂತಹ ಮೆಸೇಜ್‌ಗಳಿಂದ ಮತದಾರರಿಗೆ ಆಗುವ ಪರಿಣಾಮಗಳನ್ನು ತಡೆಯುವಲ್ಲಿ ವಿಫಲಾಗಿದೆ ಎಂದು ಎಂದು ಫ್ರೀ ಸಾಫ್ಟ್‌ವೇರ್ ಮೂವ್‌ಮೆಂಟ್ ಆಫ್ ಇಂಡಿಯಾ (ಎಫ್‌ಎಸ್‌ಎಂಐ) ಪ್ರಧಾನ ಕಾರ್ಯದರ್ಶಿ ಕಿರಣ್ ಚಂದ್ರ ಆರೋಪಿಸಿದ್ದಾರೆ.

ಈ ಕುರಿತಂತೆ, ಕೆಲವರು 2008 ರ ಐಟಿ ಕಾಯ್ದೆಯ ಸೆಕ್ಷನ್ 66, 70, 72, 72 ಎ, ಮತ್ತು 80 ರ ಅಡಿಯಲ್ಲಿ ಸೈಬರ್ ಅಪರಾಧ ದೂರು ದಾಖಲಿಸಿದ್ದಾರೆ. ಮತದಾರರು ತಮ್ಮ ಡೇಟಾಗಳನ್ನು ಪಡೆದುಕೊಳ್ಳಲು ಬಿಜೆಪಿ ಎಂಎಲ್‌ಸಿಗೆ ಯಾವುದೇ ಒಪ್ಪಿಗೆ ನೀಡಿಲ್ಲ ಮತ್ತು ಎನ್ ರಾಮ್‌ಚಂದರ್ ರಾವ್ ಅವರೊಂದಿಗೆ ಯಾವುದೇ ವೈಯಕ್ತಿಕ ಸಂಪರ್ಕವಿಲ್ಲ ಎಂದು ಹೇಳಿದ್ದಾರೆ. ದತ್ತಾಂಶ ಸೋರಿಕೆಯ ಮೂಲವನ್ನು ಕಂಡುಹಿಡಿಯಲು ಮತ್ತು ಎನ್ ರಾಮಚಂದರ್ ರಾವ್ ಮತ್ತು ಚುನಾವಣಾ ಆಯೋಗದ ವಿರುದ್ಧ ತನಿಖೆ ನಡೆಸಲು ಮತದಾರರು ಒತ್ತಾಯಿಸಿದ್ದಾರೆ.

ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್‌ಸಿ, ತಾವು 2,50,000 ಮತದಾರರ ಡೇಟಾಬೇಸ್ ಹೊಂದಿದ್ದೇವೆ. ಈ ಡೇಟಾಬೇಸ್ ಸಂಗ್ರಹಿಸಲು ತಾವು 100 ಜನರನ್ನು ನೇಮಿಸಿಕೊಂಡಿರುವದಾಗಿ ಹೇಳಿದ್ದಾರೆ. ಅಲ್ಲದೆ, ಮತದಾರರಿಗೆ ಎಸ್‌ಎಂಎಸ್ ಕಳುಹಿಸುವಲ್ಲಿ “ತಪ್ಪೇನೂ ಇಲ್ಲ” ಮತ್ತು “ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಆದರೆ, ದೂರುದಾರರಲ್ಲಿ ಒಬ್ಬರು ಮತ್ತು ಎಫ್‌ಎಸ್‌ಎಂಐನ ಸಂಶೋಧಕರಾದ ಶ್ರೀನಿವಾಸ್ ಕೊಡಾಲಿ ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಎಂಎಲ್‌ಸಿ ಅಥವಾ ಬಿಜೆಪಿಯೊಂದಿಗೆ ಹಂಚಿಕೊಂಡಿಲ್ಲ ಮತ್ತು ಅವರಿಂದ ಅಂತಹ ಯಾವುದೇ ಸಂದೇಶಗಳನ್ನು ಸ್ವೀಕರಿಸಲು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.

ವಿಶೇಷವೆಂದರೆ, “ಈ ವಿಷಯವು ತನ್ನ ಗಮನಕ್ಕೆ ಬಂದಿಲ್ಲ ಮತ್ತು ಅದನ್ನು ಪರಿಶೀಲಿಸಲಾಗುವುದು ಎಂದು ತೆಲಂಗಾಣದ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.


ಇದನ್ನೂ ಓದಿ: ಗೋವಾ ಚುನಾವಣೆ: ಭರ್ಜರಿ ಗೆಲವು ಸಾಧಿಸಿದ ಬಿಜೆಪಿ; ಖಾತೆ ತೆರೆದ ಎಎಪಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights