ಗೋವಾ ಚುನಾವಣೆ: ಭರ್ಜರಿ ಗೆಲವು ಸಾಧಿಸಿದ ಬಿಜೆಪಿ; ಖಾತೆ ತೆರೆದ ಎಎಪಿ!

ಗೋವಾ ಜಿಲ್ಲಾ ಜಿಲ್ಲಾಪಂಚಾಯತಿಯ 49 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದಿದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ 04, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷವು 3 ಸ್ಥಾನಗಳಲ್ಲಿ ಗೆದ್ದರೆ ಎನ್‌ಸಿಪಿ ಮತ್ತು ಎಎಪಿ ಪಕ್ಷಗಳು ತಲಾ ಒಂದೊಂದು ಸ್ಥಾನಗಳನ್ನು ಗೆದ್ದುಕೊಂಡಿವೆ. 7 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ದಕ್ಷಿಣ ಗೋವಾದ ಬೆನೌಲಿಮ್ ಸ್ಥಾನವನ್ನು ಎಎಪಿ ಅಭ್ಯರ್ಥಿ ಹ್ಯಾನ್ಜೆಲ್ ಫರ್ನಾಂಡಿಸ್ ಅವರು ಗೆದ್ದಿದ್ದು, ಗೋವಾದಲ್ಲಿ ಮೊದಲ ಬಾರಿಗೆ ಎಎಪಿ ಗೆಲುವು ಸಾಧಿಸಿದೆ. ಇದು ಗೋವಾದಲ್ಲಿ ನಡೆಯುವ ಮುಂದಿನ ವಿಧಾನಸಭಾ ಚುನಾವಣೆಗೆ ಮೆಟ್ಟಿಲಾಗಲಿದೆ ಎಂದು ಎಎಪಿ ಘೋಷಿಸಿದೆ.

“ಗೋವಾದಲ್ಲಿ ಬೆನೌಲಿಮ್ ಜಿಲ್ಲಾ ಪಂಚಾಯತ್ ಸ್ಥಾನವನ್ನು ಗೆದ್ದ ಎಎಪಿಯ ಹ್ಯಾನ್ಜೆಲ್ ಫರ್ನಾಂಡಿಸ್ ಅವರಿಗೆ ಅಭಿನಂದನೆಗಳು. ಇತರ ಅನೇಕ ಎಎಪಿ ಅಭ್ಯರ್ಥಿಗಳು ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ. ಇದು ಕೇವಲ ಪ್ರಾರಂಭ. ಎಎಪಿ ಗೋವಾನ್ನರ ನಂಬಿಕೆ ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲಿದೆ ಎಂದು ನನಗೆ ಖಾತ್ರಿಯಿದೆ ”ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ದೇಶದ ಚಿತ್ತ ತಮಿಳುನಾಡಿನತ್ತ! ಕುತೂಹಲ ಕೆರಳಿಸಿದೆ ದ್ರಾವಿಡ ನಾಡಿನ ಚುನಾವಣೆ!

“ಆಪ್ ನಾಯಕತ್ವ ಮತ್ತು ಸ್ವಯಂಸೇವಕರು ಹೆಚ್ಚು ಶ್ರಮವಹಿಸಿ ಮತದಾರರ ನಿರೀಕ್ಷೆಗಳನ್ನು ಈಡೇರಿಸಲು ಮತ್ತು ಅವರ ಹೃದಯವನ್ನು ಗೆಲ್ಲಲು ಪ್ರಯತ್ನಿಸಿದ್ದಾರೆ. ಗೋವಾದಲ್ಲಿ ಎಎಪಿಗೆ ತಮ್ಮ ಮೊದಲ ಜಯವನ್ನು ನೀಡಿದಕ್ಕಾಗಿ ಬೆನೌಲಿಮ್ ಜನರಿಗೆ, ಧನ್ಯವಾದಗಳು. ಎಎಪಿ ಗೋವಾ ಮತ್ತು ಗೋವಾನ್ನರಿಗಾಗಿ ಕೆಲಸ ಮಾಡುತ್ತದೆ ”ಎಂದು ಎಎಪಿಯ ಗೋವಾ ಸಂಚಾಲಕ ರಾಹುಲ್ ಮಾಂಬ್ರೆ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಅಸ್ಸಾಂ ಚುನಾವಣೆ: ಕಾಂಗ್ರೆಸ್‌ನಿಂದ ಗೆದ್ದಿದ್ದ ಏಕೈಕ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights