Cricket: ಮ್ಯಾಚ್ ಫಿಕ್ಸಿಂಗ್‌ ಮಾಡಿದ್ದಕ್ಕೆ ಆರು ವರ್ಷ ಬ್ಯಾನ್ ಆದ ಬ್ಯಾಟ್ಸ್‌ಮನ್

ವಿಶ್ವಕ್ರಿಕೆಟ್​ನಲ್ಲಿ ನಿಧಾನವಾಗಿ ಕಾಲೂರುತ್ತಿರುವ ತಂಡ ಅಫ್ಘಾನಿಸ್ತಾನ. ಅಫ್ಘಾನ್‌ ಕ್ರಿಕೆಟ್‌ ತಂಡದಲ್ಲಿದ್ದ ಆಟಗಾರನೊಬ್ಬ ಫಿಕ್ಸಿಂಗ್ ವ್ಯೂಹದಲ್ಲಿ ಸಿಕ್ಕಿಕೊಂಡು ಬರೋಬ್ಬರಿ ಆರು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದಾನೆ.

ಅಫ್ಘಾನ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್ ಶಫೀಕುಲ್ಲಾ ಶಫಕ್ ಸದ್ಯ ಬ್ಯಾನ್ ಆಗಿರುವ ಆಟಗಾರ. 2018ರಲ್ಲಿ‌ ನಡೆದ ಅಪ್ಘಾನಿಸ್ತಾನ ಪ್ರೀಮಿಯರ್ ಲೀಗ್(ಎಪಿಎಲ್)ನಲ್ಲಿ ಶಫಕ್ ಫಿಕ್ಸಿಂಗ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಎಪಿಎಲ್​ನಲ್ಲಿ ಶಫಕ್ ಫಿಕ್ಸಿಂಗ್​​ನಲ್ಲಿ ಭಾಗಿಯಾಗಿರುವುದಲ್ಲದೆ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಸಹ ಆಟಗಾರನನ್ನು ಫಿಕ್ಸಿಂಗ್​ನಲ್ಲಿ ಶಾಮೀಲಾಗಲು ಪ್ರೇರೇಪಿಸಿದ್ದ ಎನ್ನುವ ವಿಚಾರ ತಿಳಿದು ಬಂದಿದೆ.

ರಾಷ್ಟ್ರೀಯ ತಂಡದ ಆಟಗಾರನ ಈ ನಡೆಗೆ ಅಪ್ಘನ್ ಕ್ರಿಕೆಟ್ ಬೋರ್ಡ್ ಸದ್ಯ ಆರು ವರ್ಷದ ನಿಷೇಧ ಹೇರಿದೆ. ವಿಚಾರಣೆ ವೇಳೆ ಶಫಕ್ ತಾನು ಮಾಡಿರುವ ತಪ್ಪನ್ನೆಲ್ಲ ಒಪ್ಪಿಕೊಂಡ ಪರಿಣಾಮ ಬೋರ್ಡ್ ದೀರ್ಘಾವಧಿಯ ನಿಷೇಧವನ್ನು ಆರು ವರ್ಷಕ್ಕೆ ಇಳಿಸಿದೆ.

ಆರು ವರ್ಷದ ಈ ನಿಷೇಧ ಉಳಿದ ಎಲ್ಲ ಆಟಗಾರರಿಗೂ ಎಚ್ಚರಿಕೆಯ ಸಂದೇಶ ಎಂದಿರುವ ಬೋರ್ಡ್, ಮುಂದಿನ ದಿನದಲ್ಲಿ ಯಾರೂ ಸಹ ಇಂತಹ ಕೃತ್ಯದಲ್ಲಿ ಪಾಲ್ಗೊಳ್ಳಬಾರದು ಎಂದಿದೆ.

ಶಫಕ್ ನಿಷೇಧದ ಬಗ್ಗೆ ಅಪ್ಘಬ್ ಕ್ರಿಕೆಟ್ ಬೋರ್ಡ್ ತನ್ನ ಟ್ವಿಟರ್ ಖಾತೆಯನ್ನು ಮಾಹಿತಿ ನೀಡಿದೆ. ವಾರದ ಹಿಂದೆ ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಸಹ ಇದೇ ಫಿಕ್ಸಿಂಗ್ ವಿಚಾರದಲ್ಲಿ ಮೂರು ವರ್ಷ ನಿಷೇಧಕ್ಕೊಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights