ಫ್ಯಾಕ್ಟ್‌ಚೆಕ್: ಕಳೆದ 10 ವರ್ಷಗಳಲ್ಲಿ ಕೋಮು ಗಲಭೆಗಳು ನಡೆದಿಲ್ಲವೆಂಬ ಜಗ್ಗಿ ವಾಸುದೇವ್ ಮಾತು ನಿಜವಲ್ಲ

ISHA ಫೌಂಡೇಶನ್‌ನ ಸಂಸ್ಥಾಪಕ ಜಗ್ಗಿ ವಾಸುದೇವ್ ಸೋಮವಾರ ANI ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಯಾವುದೇ ಕೋಮು ಗಲಭೆಗಳ ಬಗ್ಗೆ ಕೇಳಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ANI ಸುದ್ದಿ ವಾಹಿನಿಯ ನಿರೂಪಕಿ ಸ್ಮಿತಾ ಪ್ರಕಾಶ್ ದೇಶದಲ್ಲಿ  ನಡಯುತ್ತಿರುವ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಜಗ್ಗಿ ವಾಸುದೇವ್ ಅವರನ್ನು ಕೇಳಲಾದ ಪ್ರಶ್ನೆಗೆ  ಉತ್ತರಿಸಿದ ಅವರು, ಕಳೆದೊಂದು ದಶಕದಿಂದ ದೇಶದಲ್ಲಿ ಅಂತಹ ಯಾವುದೇ ದೊಡ್ಡ ಕೋಮು ಸಂಘರ್ಷಗಳು ನಡೆದಿಲ್ಲ. ಕೇವಲ ಟಿವಿ ಸ್ಟುಡಿಯೋಗಳಲ್ಲಿ ಮಾತ್ರ ಅಸಹಿಷ್ಣುತೆ ಇದೆ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಟಿವಿ ಚಾನೆಲ್‌ಗಳು ಉತ್ಪೇಕ್ಷೆ ಮಾಡುತ್ತಿವೆ ಎಂದು ಉತ್ತರಿಸಿದ್ದರು. ಸುದ್ದಿಸಂಸ್ಥೆ ಎಎನ್ಐಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ತನ್ನ ಕಾಲೇಜು ದಿನಗಳಲ್ಲಿ, ದೇಶದಲ್ಲಿ ದೊಡ್ಡ ಗಲಭೆಗಳು ನಡೆದಿದ್ದವು. ಆದರೆ ಕಳೆದ 10 ವರ್ಷಗಳಿಂದ ದೇಶದಲ್ಲಿ ಯಾವುದೇ ಪ್ರಮುಖ ಕೋಮು ಗಲಭೆಗಳು ನಡೆದಿಲ್ಲ ಎಂದು ಹೇಳಿದ್ದಾರೆ.

ಹಾಗಿದ್ದರೆ ದೇಶದಲ್ಲಿ ಕಳೆದ 10 ವರ್ಷದಲ್ಲಿ ಕೋಮು ಸಂಘರ್ಷಗಳು ನಡೆದಿಲ್ಲವೇ ? ಜಗ್ಗಿ ವಾಸುದೇವ್ ಹೇಳುವಂತೆ ಇದೆಲ್ಲ ಟಿವಿ ಸ್ಟುಡಿಯೋಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಮಾಡುತ್ತಿರುವ ಉತ್ಪ್ರೇಕ್ಷೆಯೇ ? ಈ ಹೇಳಿಕೆಯು ಹಿಂದಿರುವ ವಾಸ್ತವವೇನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಭಾರತದಲ್ಲಿ ಅಸಹಿಷ್ಣುತೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಗ್ಗಿ, “ಕಳೆದ 25 ವರ್ಷಗಳಲ್ಲಿ ಈ ವಿಷಯಗಳು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ 25 ವರ್ಷಗಳ ಹಿಂದೆ, ನಾವು ವಿಶ್ವವಿದ್ಯಾನಿಲಯದಲ್ಲಿದ್ದಾಗ ಗಲಭೆಯನ್ನು ನೋಡದ ವರ್ಷವೇ ಇರಲಿಲ್ಲ. ದೇಶದಲ್ಲಿ ಕೋಮುಗಲಭೆಗಳು ಪ್ರತಿ ವರ್ಷ ಎಲ್ಲೋ ಒಂದು ಕಡೆ ನಡೆಯುತ್ತಿದ್ದವು. ಕಳೆದ 5-6 ವರ್ಷಗಳಲ್ಲಾಗಲಿ 10 ವರ್ಷಗಳಲ್ಲಾಗಲಿ ನೀವು ಅದರ ಬಗ್ಗೆ ಕೇಳಿಲ್ಲ” ಎಂದಿದ್ದರು.

ಆದರೆ, ಗೃಹ ವ್ಯವಹಾರಗಳ ಸಚಿವಾಲಯದ ಡೇಟಾವನ್ನು ಉಲ್ಲೇಖಿಸಿ 2012 ಮತ್ತು 2020 ರ ನಡುವೆ ಕನಿಷ್ಠ 6,285 ಕೋಮು ಗಲಭೆಗಳು ನಡೆದಿವೆ ಎಂದು BOOM ವರದಿ ಮಾಡಿದೆ. 2014 ಮತ್ತು 2020ರ ನಡುವೆ ದೇಶದಲ್ಲಿ 5,415 ಕೋಮು ಗಲಭೆಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ದತ್ತಾಂಶವನ್ನು ವರದಿ ಉಲ್ಲೇಖಿಸಿತ್ತು.

ಮಾರ್ಚ್ 22, 2022 ರಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಲೋಕಸಭೆಯಲ್ಲಿ ಈ ಸಂಬಂಧದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ರೈ ಅವರ ಪ್ರತಿಕ್ರಿಯೆಯ ಪ್ರಕಾರ, ದೇಶದಲ್ಲಿ 3399 ಕೋಮುಗಲಭೆಗಳು ನಡೆದಿವೆ.

Ministry of Home affairs (MHA) ಯ ಸಂಸದೀಯ ಪ್ರಶ್ನೆಗಳಿಗೆ ಇನ್ನೂ ಎರಡು ಪ್ರತಿಕ್ರಿಯೆಗಳನ್ನು ನಾವು ಕಂಡುಕೊಂಡಿದ್ದೇವೆ, ಒಂದು ಮಾರ್ಚ್ 10, 2015 ರಂದು ಮತ್ತೊಂದು ಏಪ್ರಿಲ್ 11, 2017 ರಂದು ನೀಡಲಾಗಿದೆ. ಅದರ ಪ್ರಕಾರ ಭಾರತವು 2012 ಮತ್ತು 2015 ರ ನಡುವೆ 2886 ಕೋಮು ಗಲಭೆಗಳ ಘಟನೆಗಳಿಗೆ ಸಾಕ್ಷಿಯಾಗಿದೆ. MHA ಒದಗಿಸಿದ ವಿವಿಧ ಅಂಕಿಅಂಶಗಳನ್ನು ಒಟ್ಟುಗೂಡಿಸಿದರೆ, 2012 ಮತ್ತು 2020 ರ ನಡುವೆ ದೇಶದಲ್ಲಿ 6285 ಕೋಮು ಗಲಭೆಗಳು ನಡೆದಿವೆ ಎಂದು ಅಧಿಕೃತ ವರದಿಗಳು ತಿಳಿಸುತ್ತವೆ.

ಕಳೆದ 10 ವರ್ಷಗಳಿಂದ ಕೋಮುಗಲಭೆಗಳೆ ನಡೆದಿಲ್ಲ ಎಂದು ಹೇಳಿರುವ ಜಗ್ಗಿ ವಾಸುದೇವ ದೆಹಲಿ ನಡೆದ ಭೀಕರ ಘಟನೆಯ ಬಗ್ಗೆ ಏನೆಂದು ಹೇಳುತ್ತಾರೆ. ಫೆಬ್ರವರಿ 2020 ರ ದೆಹಲಿ ಗಲಭೆಯಲ್ಲಿ 53 ಜನರ ಪ್ರಾಣವನ್ನು ಬಲಿತೆಗೆದುಕೊಂಡ ಘಟನೆಯನ್ನು ಸದ್ಗುರು ಏನೆಂದು ವ್ಯಾಖ್ಯಾನಿಸುತ್ತಾರೆ ಎಂದು BHOOM ಪ್ರಶ್ನಿಸಿದೆ.

ಇದಲ್ಲದೆ, 2021 ರಿಂದ ಹಲವಾರು ಕೋಮು ಗಲಭೆಗಳು ವರದಿಯಾಗಿವೆ – 2021 ರಲ್ಲಿ ಬಾಂಗ್ಲಾದೇಶದಲ್ಲಿ ದುರ್ಗಾಪೂಜಾ ಕೋಮು ಗಲಭೆಯ ನಂತರ ತ್ರಿಪುರಾದಲ್ಲಿ ಕೋಮು ಹಿಂಸಾಚಾರ, 2022 ರ ರಾಮನವಮಿ ಆಚರಣೆಯ ಸಮಯದಲ್ಲಿ ವಿವಿಧ ರಾಜ್ಯಗಳಲ್ಲಿ ಕೋಮು ಹಿಂಸಾಚಾರ ಮತ್ತು ಹನುಮಾನ್ ಜಯಂತಿ ಆಚರಣೆಯ ಸಂದರ್ಭದಲ್ಲಿ ಜಹಾಂಗೀರ್‌ ಪುರಿಯಲ್ಲಿ ಕೋಮು ಹಿಂಸಾಚಾರ, ಹೀಗೆ ಸಾಲು ಸಾಲಾಗಿ ನಡೆದಿರುವ ಕೋಮು ಹಿಂಸಾಚಾರಗಳು ಕಣ್ಣಮುಂದಿದ್ದರು ಅದನ್ನು ಪರಿಗಣಿಸದೆ ಏನು ಆಗಿಯೇ ಇಲ್ಲವೆಂದು ಸಂದರ್ಶನದ ವೇಳೆ ಜಗ್ಗಿ ವಾಸುದೇವ ಅವರು ಮಾತನಾಡಿದ್ದಾರೆ. ಆದರೆ ಈ ಹೇಳಿಕೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿ ಮಾಸ್ಟರ್ ಸ್ಟ್ರೋಕ್‌ಗೆ ಬೆಚ್ಚಿದ್ವಂತೆ ಅರಬ್ ರಾಷ್ಟ್ರಗಳು! ಯಪ್ಪಾ ಎಂಥಾ ಸುಳ್ಳು


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights