ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ದೃಢ: ಜನರಲ್ಲಿ ಆತಂಕ

ಧಾರವಾಡದ ಸತ್ತೂರಿನಲ್ಲಿರುವ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಲಸಿಕೆ ಪಡೆದ 66 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಲಸಿಕೆ ಪಡೆದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

ಈ ಬಗ್ಗೆ ಸಾಕಷ್ಟು ನೆಟ್ಟಿಗರು ಸಾಮಾಜಿಕ ಜಾಲತಾಣ ‘ಕೂ’ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಚ್ಚಳವಾದರೆ ನಿಯಂತ್ರಣ ಕಷ್ಟ

ಅವಳಿನಗರದಲ್ಲಿ ಸುಮಾರು 9 ವಲಯ ವ್ಯಾಪ್ತಿಯ 20 ವಾರ್ಡ್‍ಗಳ 42 ಪ್ರದೇಶಗಳಲ್ಲಿ 1365 ಕೋವಿಡ್–19 ಪ್ರಕರಣಗಳು ದಾಖಲಾಗಿವೆ. ಇದೇ ರೀತಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾದರೆ ನಿಯಂತ್ರಿಸಲು ಕಷ್ಟಸಾಧ್ಯವಾಗುತ್ತದೆ ಎಂದು ಲಿಖಿತ್ ರೈ ಪೋಸ್ಟ್‌ ಮಾಡಿದ್ದಾರೆ.

ಸೋಂಕು ಹೆಚ್ಚಳವಾಗುವ ಭೀತಿಯೂ ಕಾಡುತ್ತಿದೆ

ಧಾರವಾಡ ಜಿಲ್ಲೆಯಲ್ಲಿ ಕೋವಿಡ್–19 ಸೋಂಕು ದೃಢಪಡುತ್ತಿರುವ ದರ ಶೇ 10.೫ರಷ್ಟಿದೆ. ಲಾಕ್‌ಡೌನ್‌ನಲ್ಲಿ ಒಂದಷ್ಟು ರಿಯಾಯಿತಿಯೊಂದಿಗೆ ಪರಿಷ್ಕೃತ ಆದೇಶ ನೀಡಿದ ಬೆನ್ನಲ್ಲೇ ನಗರ ಹಾಗೂ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಜನರ ಓಡಾಟ ಹೆಚ್ಚಾಗಿದೆ. ಕಿರಾಣಿ ಹಾಗೂ ಇನ್ನಿತರ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿದೆ. ಇದರ ಬೆನ್ನಲ್ಲೇ ಮತ್ತೆ ಸೋಂಕು ಹೆಚ್ಚಳವಾಗುವ ಭೀತಿಯೂ ಕಾಡುತ್ತಿದೆ ಎಂದು ಗಮನ ಭೀತಿ ವ್ಯಕ್ತಪಡಿಸಿದ್ದಾರೆ.

ನಿರ್ಲಕ್ಷ್ಯವೇ ಕಾರಣ

ಕೋವಿಡ್ ಸೋಂಕಿಗೆ ಕಾರಣವೇನು ಅಂತ ಪದೇ ಪದೇ ಚರ್ಚಿಸುವುದರಲ್ಲಿ ಅರ್ಥವಿಲ್ಲ, ಕಾರಣ ಒಂದೇ ನಮ್ಮ ಜೀವನ ಪದ್ದತಿ, ಸದ್ಯದ ಜೀವನ ಪದ್ದತಿ. 66 ವಿದ್ಯಾರ್ಥಿಗಳಿಗೆ ಧಾರವಾಡದ ಮೆಡಿಕಲ್ ಕಾಲೇಜಿನಲ್ಲಿ ಸೋಂಕು ಹರಡತ್ತೆ ಅಂತಾದ್ರೆ ಅವರ ನಿರ್ಲಕ್ಷ್ಯವೇ ಕಾರಣ, ಇನ್ನೇನು ಇರಲು ಸಾಧ್ಯ ಎಂದು ಸುನೀಲ್ ಹೇಳಿದ್ದಾರೆ.

ಆತಂಕದ ಛಾಯೆ ಮೂಡಿಸಿದೆ

ಧಾರವಾಡದಲ್ಲಿ 66 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಆತಂಕದ ಛಾಯೆ ಮೂಡಿಸಿದೆ. ಕಾಲೇಜಿಗೆ ಸಂಬಂಧಿಸಿದ 2 ಹಾಸ್ಟೆಲ್ ಗಳನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ ಹಾಗೂ ಅಧಿಕಾರಿಗಳಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ ಚಂದನಾ.

ಸೋಂಕಿತರು ಹೊರ ರಾಜ್ಯದವರು

ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಮೊದಲ ವರ್ಷದ ವಿದ್ಯಾರ್ಥಿಗಳು ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿಗೆ ಒಳಗಾದ ವಿದ್ಯಾರ್ಥಿಗಳಲ್ಲಿ ಬಹುತೇಕರು ಹೊರರಾಜ್ಯದವರು. ಅದೃಷ್ಟವಶಾತ್ ಕೊರೋನ ಎಂದು ಬಹುಬೇಗ ಪತ್ತೆಹಚ್ಚಲಾಗಿದ್ದು ಸೂಕ್ತವಾಗಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಎಲ್ಲಾ ವಿದ್ಯಾರ್ಥಿಗಳು ಬೇಗ ಗುಣಮುಖರಾಗಲಿ ಎಂದು ಆಶಿಸೋಣ ಎಂದಿದ್ದಾರೆ ಹರ್ಷಿತಾ.

ಇದನ್ನೂ ಓದಿ: ರೈತ ಹೋರಾಟಕ್ಕೆ ಮಸಿ ಬಳಿಯಲು ಸೃಷ್ಟಿಯಾದ ನಕಲಿ ಸೇನೆ; ಫೇಕ್‌ ಫ್ಯಾಕ್ಟರಿ ಬಹಿರಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights