ಡಿಸೆಂಬರ್ ತಿಂಗಳಿನಲ್ಲಿ ಬ್ಯಾಂಕ್ಗಳಿಗೆ ಬರೋಬ್ಬರಿ 12 ರಜೆಗಳು: ಡೀಟೇಲ್ಸ್ ಹೀಗಿದೆ
ಸರ್ಕಾರಿ ಉದ್ಯಮಗಳ ಪೈಕಿ ಬ್ಯಾಂಕ್ಗಳಿಗೆ ವಿಶೇಷವಾಗಿ ಪ್ರತಿ ತಿಂಗಳು ಕೆಲವು ರಜೆಗಳನ್ನು ನೀಡಲಾಗುತ್ತದೆ. ಕೆಲವೊಂದು ತಿಂಗಳುಗಳಲ್ಲಿ ಬ್ಯಾಂಕ್ಗಳಿಗೆ ಹೆಚ್ಚಿನ ಸಂಖ್ಯೆಯ ರಜೆಗಳು ದೊರೆಯುತ್ತವೆ. ಅದೇ ರೀತಿಯಲ್ಲಿ 2021ರ ಕಡೆಯ ತಿಂಗಳು, ಅಂದರೆ ಡಿಸೆಂಬರ್ನಲ್ಲಿ ಬರೋಬ್ಬರಿ 12 ರಜೆಗಳನ್ನು ಬ್ಯಾಂಕ್ಗಳಿಗೆ ನೀಡಲಾಗಿದೆ.
ಸಾಮಾನ್ಯವಾಗಿ ಬ್ಯಾಂಕ್ಗಳಿಗೆ ಸತತ 2-3 ದಿನಗಳ ಕಾಲ ರಜೆ ಇದ್ದಾಗಲೇ ಬ್ಯಾಂಕ್ ಗ್ರಾಹಕರು ಬ್ಯಾಂಕಿಂಗ್ ಚಟುವಟಿಕೆ ಇಲ್ಲದೆ ಹೈರಾಣಾಗುತ್ತಾರೆ. ಇಂತಹ ವೇಳೆ, ಇದೀಗ ಡಿಸೆಂಬರ್ನಲ್ಲಿ 12 ದಿನಗಳ ರಜೆ ಇದ್ದು, ಗ್ರಾಹಕರಿಗೆ ತೊಂದರೆ ಎದುರಾಗಲಿದೆ.
ಆನ್ಲೈನ್ ಬ್ಯಾಂಕಿಂಗ್ ಲಭ್ಯವಿದ್ದರೂ ಸಹ, ಆನ್ಲೈನ್ ವ್ಯವಹಾರದ ಬಗ್ಗೆ ಹೆಚ್ಚಿನ ಜನರಿಗೆ ಅರಿವಿರುವುದಿಲ್ಲ. ಹೀಗಾಗಿ, ಅಂತಹ ಜನರು ರಜೆ ದಿನಗಳ ಹಿಂದಿನ ದಿನವೇ ಬ್ಯಾಂಕ್ ವ್ಯವಹಾರವನ್ನು ಮುಗಿಸಿಕೊಳ್ಳಬೇಕಾದ ತುರ್ತು ಎದುರಾಗಿದೆ.
ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಸೇರಿದಂತೆ ಡಿಸೆಂಬರ್ನಲ್ಲಿ 12 ರಜೆಗಳಿವೆ. ಆದರೆ, ಎಲ್ಲಾ ರಾಜ್ಯಗಳಲ್ಲಿಯೂ 12 ದಿನ ರಜೆ ಇರುವುದಿಲ್ಲ. ಕೆಲವು ರಾಜ್ಯಗಳಲ್ಲಿ ಸ್ಥಳೀಯ ರಜೆಗಳು ಇರುತ್ತವೆ. ಹೀಗಾಗಿ, ರಾಜ್ಯದಿಂದ ರಾಜ್ಯಕ್ಕೆ ರಜೆಗಳು ಬದಲಾಗುತ್ತವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಬ್ಯಾಂಕ್ ರಜಾ ದಿನಗಳ ಪಟ್ಟಿ:
ಡಿಸೆಂಬರ್ 3: ಫೀಸ್ಟ್ ಆಫ್ ಸೇಂಟ್ ಫ್ರಾನ್ಸಿಸ್ ಗ್ಸೇವಿಯರ್
ಡಿಸೆಂಬರ್ 18: ಯು ಸೋಸೋ ಥಾಮ್ ಡೆತ್ ಆನಿವರ್ಸರಿ
ಡಿಸೆಂಬರ್ 24: ಕ್ರಿಸ್ಮಸ್ ಈವ್
ಡಿಸೆಂಬರ್ 25: ಕ್ರಿಸ್ಮಸ್
ಡಿಸೆಂಬರ್ 27: ಕ್ರಿಸ್ಮಸ್ ಸೆಲೆಬ್ರೇಷನ್
ಡಿಸೆಂಬರ್ 30: ಯು ಕಿಯಾಂಗ್ ನಾಂಗ್ಬಹ್
ಡಿಸೆಂಬರ್ 31: ನ್ಯೂ ಇಯರ್ ಈವ್
ಡಿಸೆಂಬರ್ 5- ಭಾನುವಾರ
ಡಿಸೆಂಬರ್ 11- ಎರಡನೇ ಶನಿವಾರ
ಡಿಸೆಂಬರ್ 12- ಭಾನುವಾರ
ಡಿಸೆಂಬರ್ 19- ಭಾನುವಾರ
ಡಿಸೆಂಬರ್ 25- ನಾಲ್ಕನೇ ಶನಿವಾರ & ಕ್ರಿಸ್ಮಸ್
ಡಿಸೆಂಬರ್ 26- ಭಾನುವಾರ
ರಜಾದಿನಗಳಲ್ಲಿ ಗ್ರಾಹಕರು ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿ ಎಂದು ಆರ್ಬಿಐ ಸಲಹೆ ನೀಡಿದೆ. ಈ ಮೇಲ್ಕಂಡ ರಜಾದಿನಗಳಲ್ಲಿ ಬ್ಯಾಂಕ್ಗಳು ಮುಚ್ಚಲ್ಪಟ್ಟಿರುತ್ತವೆ. ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಇದನ್ನೂ ಓದಿ: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ ಎಂದ ಮೋದಿ ವಿರುದ್ದ ಬಿಜೆಪಿ ನಾಯಕರ ವಾಗ್ದಾಳಿ!