Fact Check: ಚಾರ್ಜ್‌ನಲ್ಲಿಟ್ಟ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ನೀರು ಕುಡಿದರೆ ಸ್ಫೋಟಗೊಳ್ಳುತ್ತದೆಯೇ?

ವ್ಯಕ್ತಿಯೊಬ್ಬ ತನ್ನ ಫೋನ್‌ಅನ್ನು ಚಾರ್ಜ್‌ನಲ್ಲಿಟ್ಟು ಫೋನ್ ಕರೆಯಲ್ಲಿ ಮಾತನಾಡುತ್ತಿರುವ ಸಿಸಿಟಿವಿ ದೃಶ್ಯಾವಳಿಗಳ ವಿಡಿಯೋ ವೈರಲ್ ಆಗಿದೆ. ಆತ ಫೋನ್‌ನಲ್ಲಿ ಮಾತನಾಡುತ್ತಾ ನೀರು ಕುಡಿದಾಗ ಅವರ ಕಿವಿಯ ಮೇಲೆ ಫೋನ್ ಸ್ಫೋಟಗೊಂಡಿದೆ ಎಂದು ವೀಡಿಯೊ ಹೇಳುತ್ತದೆ. ಮರಾಠಿ ಭಾಷೆಯಲ್ಲಿರುವ ಹೇಳಿಕೆಯೊಂದಿಗೆ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ – “ಇದು ಅಪಾಯಕಾರಿ! ನೀರು ಕುಡಿಯುವ ವೇಳೆ ಚಾರ್ಜ್‌ನಲ್ಲಿರುವ ನಿಮ್ಮ ಫೋನ್ ಅನ್ನು ಬಳಸುವಾಗ ಎಲ್ಲರೂ ಕಾಳಜಿ ವಹಿಸಿ. ಮೆದುಳು ಕೂಡ ಆಘಾತಕ್ಕೊಳಗಾಗುವ ಸಾಧ್ಯತೆ ಇದೆ” ಎಂದು ಬರೆಯಲಾಗಿದೆ.

ಪುಣೆ ಮೂಲದ ಫೇಸ್‌ಬುಕ್ ಪೇಜ್‌ ಫನ್‌ ಮರಾಠಿಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಹಲವಾರು ಇತರ ಫೇಸ್‌ಬುಕ್‌ ಬಳಕೆದಾರರು ಸಹ ಈ ವಿಡಿಯೋವನ್ನುಹಂಚಿಕೊಂಡಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್ ಮತ್ತು ಯೂಟ್ಯೂಬ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ.

ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಕೂಡ ಪೋಸ್ಟ್ ಮಾಡಿದ್ದಾರೆ. ಬಳಿಕ ಅದನ್ನು ಅಳಿಸಿದ್ದಾರೆ.

ಸತ್ಯಾಂಶ:

ಇದು ನೈಜ ಘಟನೆ ಎಂದು ವೈರಲ್ ಆಗುತ್ತಿರುವ ದೃಶ್ಯಾವಳಿಯ ಸಂಪೂರ್ಣ ವೀಡಿಯೊದ ಕ್ಲಿಪ್  ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿದೆ. ಇದು ಸ್ಕ್ರಿಪ್ಟೆಂಡ್‌ ವಿಡಿಯೋ ಎಂದು ಹೇಳಲಾಗಿದೆ.

ಸಂಪೂರ್ಣ ವಿಡಿಯೋವನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಗುಟ್ಟಾ ಜ್ವಾಲಾ ಪೋಸ್ಟ್ ಮಾಡಿದ್ದಾರೆ. ಶೀರ್ಷಿಕೆಯು ‘ಎಚ್ಚರಿಕೆಯಿಂದಿರಿ’ ಎಂದು ಕಾಣಿಸುತ್ತದೆ ಮತ್ತು ‘ಇನ್ನಷ್ಟು ವೀಕ್ಷಿಸಿ’ ಕ್ಲಿಕ್ ಮಾಡಿದ ನಂತರ ಕೆಳಗೆ ಓದಿದಾಗ ವೈರಲ್‌ ಆಗುತ್ತಿರುವ ಹೇಳಿಕೆ ತಪ್ಪು ಎಂದು ಗೊತ್ತಾಗುತ್ತದೆ. – “ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು! ಈ ಪುಟವು ಸ್ಕ್ರಿಪ್ಟ್ ಮಾಡಿದ ನಾಟಕಗಳು ಮತ್ತು ವಿಡಂಬನೆಗಳನ್ನು ಸಹ ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ!” ಎಂದು ಬರೆಯಾಗಿದೆ.

‘ಸ್ಫೋಟ’ದ ಹೇಳಿಕೆಯನ್ನು ಉಪಶೀರ್ಷಿಕೆಯಾಗಿ ಮಾತ್ರ ಮಾಡಲಾಗಿದೆ ಎಂಬುದನ್ನು ಓದುಗರು ಗಮನಿಸಬೇಕು. ವೀಡಿಯೋದಲ್ಲಿ ನಿಜವಾದ ಸ್ಫೋಟ ನಡೆಯುತ್ತಿಲ್ಲ.

ಅದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಮತ್ತೊಂದು ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ತುಂಡರಿಸಿ ಹಂಚಿಕೊಳ್ಳಲಾಗಿದೆ. ಮೂಲ ವಿಡಿಯೋವು ಇದು ಸ್ಕ್ರಿಪ್ಟೆಂಡ್ ವಿಡಿಯೋ ಎಂಬುದನ್ನು ಸ್ಪಷ್ಟಪಡಿಸಿದೆ. ಆದರೆ, ವಿಡಿಯೋದ ರಚನೆಕಾರರು ಇದು ಚಿತ್ರೀಕರಿಸಲಾದ ವಿಡಿಯೋ ಎಂದು ತಿಳಿಸಲು ವೀಡಿಯೊಗಳಲ್ಲಿ ಸರಿಯಾದ ಮತ್ತು ಸ್ಪಷ್ಟವಾದ ಹೇಳಿಯನ್ನು ಸೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸೂಚಿಸುವುದು ಯೋಗ್ಯವಾಗಿದೆ.

ಚಾರ್ಜ್‌ನಲ್ಲಿಟ್ಟ ಮೊಬೈಲ್‌ ಫೋನ್‌ನಲ್ಲಿ ಮಾತನಾಡುವಾಗ ಫೋನ್‌ ಸ್ಪೋಟಗೊಂಡಿರುವ ವರದಿಗಳಾಗಿವೆ. ಆದರೆ, ಚಾರ್ಜ್‌ನಲ್ಲಿಟ್ಟ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಾ ನೀರು ಕುಡಿಯುವಾಗ ಸ್ಪೋಟಗೊಂಡಿರುವ ಬಗ್ಗೆ ಯಾವುದೇ ಘಟನೆಯು ವರದಿಯಾಗಿಲ್ಲ. ಆದರೂ, ಮೊಬೈಲ್‌ ಫೋನ್‌ ಜಾರ್ಜ್‌ನಲ್ಲಿದ್ದಾಗ ಫೋನ್‌ನಲ್ಲಿ ಮಾತನಾಡುವುದು ಅಪಾಯಕಾರಿ ಎಂಬುದು ನಮ್ಮ ಅರಿನಲ್ಲಿರಬೇಕು.

ಕೃಪೆ: ಆಲ್ಟ್‌ನ್ಯೂಸ್‌

ಇದನ್ನೂ ಓದಿ: Fact Check: ತಿರುಪತಿ ಪುರೋಹಿತರ ಮನೆಯಲ್ಲಿ 128KG ಚಿನ್ನ ಪತ್ತೆ? ನಿಜಾಂಶವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights