ಫ್ಯಾಕ್ಟ್‌ಚೆಕ್ : ಕಲ್ಲು ಹೃದಯವನ್ನು ಕರಗುವಂತೆ ಮಾಡಿದ್ದ, 2016ರಲ್ಲಿ ಸೆರೆಯಾದ ಈ ಚಿತ್ರದಲ್ಲಿರುವ ಮಗು ಈಗ ಹೇಗಿದ್ದಾನೆ ಗೊತ್ತೇ? ಈ ಸ್ಟೋರಿ ಓದಿ

ಒಂದೂವರೆ ವರ್ಷ ಪ್ರಾಯವಾದ ಈ ಮಗು ಪಿಶಾಚಿಯ ಸಂತಾನ ಎಂದು ಆರೋಪಿಸಿ ಕುಟುಂಬದವರು ಹೋಪ್‌ನನ್ನು ಬೀದಿಗೆಸೆದಿದ್ದರು. ಆನಂತರ ವಾರಸುದಾರರಿಲ್ಲದೆ ಈ ಮಗು ಎಂಟು ತಿಂಗಳು ಬೀದಿಯಲ್ಲಿ ಅಲೆದು  ಆಗಲೂ ಈಗಲೋ ಸಾಯುವಂತೆ ಆಗಿತ್ತು. ಅದೇ ಸಂದರ್ಭದಲ್ಲಿ ಈ ವಿಷಯ ತಿಳಿದ ಪಾಶ್ಚಾತ್ಯ ಚ್ಯಾರಿಟಿ ಕಾರ್ಯಕರ್ತರು, ಮಗುವನ್ನು ರಕ್ಷಿಸಿದ್ದರು.

ಕುಡಿಯಲು ಸರಿಯಾಗಿ ನೀರು ಇಲ್ಲ. ಆಹಾರವೂ ಇಲ್ಲ. ಯಾರಾದರೂ ಕೊಟ್ಟರೆ ಇದೆ. ಇಂತಹ ಸ್ಥಿತಿಯಲ್ಲಿ ಮಗು ಇನ್ನೇನಾಗಬೇಕು. ಇಂತಿರುವಾಗ ಚ್ಯಾರಿಟಿ ಕಾರ್ಯಕರ್ತೆ ಅಂಜ ಮಗುವಿಗೆ ನೀರುಕುಡಿಸಿದರು. 2016 ರಲ್ಲಿ ಮಗುವಿಗೆ ನೀರು ಕುಡಿಸುತ್ತಿರುವ ಚಿತ್ರ ಎಂತಹ ಕಲ್ಲು ಹೃದಯದ ಮನುಷ್ಯನಿಗೂ ಹೃದಯ ಕರಗುವಂತೆ ಮಾಡುವ ಚಿತ್ರವಾಗಿತ್ತು.

2016ರಲ್ಲಿ ನೈಜೀರಿಯಾದಲ್ಲಿ ಇನ್ನೇನು ಸತ್ತೇ ಹೋಗುತ್ತದೆ ಎಂಬ ಮಗುವೊಂದನ್ನು (ಹೋಪ್) ಕಾಪಾಡಿದ ಸಂದರ್ಬ
2016ರಲ್ಲಿ ನೈಜೀರಿಯಾದಲ್ಲಿ ಇನ್ನೇನು ಸತ್ತೇ ಹೋಗುತ್ತದೆ ಎಂಬ ಮಗುವೊಂದನ್ನು (ಹೋಪ್) ಕಾಪಾಡಿದ ಸಂದರ್ಬ

ಅವರು ನೀರು ಕೊಟ್ಟರು ಮಾತ್ರವಲ್ಲ ಆಹಾವರನ್ನೂ ಕೊಟ್ಟರು. ಸ್ನಾನ ಮಾಡಿಸಿದರು. ಆಸ್ಪತ್ರೆಗೂ ಸೇರಿಸಿದರು.  ಅಂಜ, ಆಫ್ರಿಕನ್ ಚಿಲ್ಡ್ರನ್ಸ್ ಎಯ್ಡ್ ಎಜುಕೇಶನ ಆಂಡ್ ಡೆವಲೆಪ್ ಮೆಂಟ್ ಫೌಂಡೇಶನ್ ಸ್ಥಾಪಕಿಯಾಗಿದ್ದಾರೆ. 2016ರಲ್ಲಿ ಅಂಜಾ ರಿಂಗ್‌ಗ್ರೆನ್ ಲವೆನ್ ಅವರಿಂದ ರಕ್ಷಿಸಲ್ಪಟ್ಟ ಮಗು ಈಗ ಹೇಗಿದೆ ಎಂಬ ಕುತೂಹಲ ನೀರು ಕುಡಿಸಿ ಜೀವ ಉಳಿಸುತ್ತಿರುವ ತಾಯಿ ಹೃದಯದ ಮಹಿಳೆ ಮತ್ತು ಮಗುವಿನ ಚಿತ್ರವನ್ನು ನೋಡಿದ ಪ್ರತಿಯೊಬ್ಬರಿಗೂ ಇದ್ದೇ ಇದೆ. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಕೊಲಾಜ್ ಮಾಡಲಾದ ಫೋಟೊವೊಂದು ಪ್ರಸಾರವಾಗುತ್ತಿದ್ದು, 2016ರಲ್ಲಿ ಅಂಜಾ ರಿಂಗ್‌ಗ್ರೆನ್ ಲವೆನ್ ಅವರಿಂದ ರಕ್ಷಿಸಲ್ಪಟ್ಟ ಮಗು ಈಗ ಬೆಳೆದು ದೊಡ್ಡವನಾಗಿದ್ದಾನೆ ನೋಡಿ ಎಂಬ ಹೇಳಿಕೆಯೊಂದಿಗೆ ಪ್ರಸಾರ ಮಾಡಲಾಗುತ್ತಿದೆ.

ಕೆಲವು ವರ್ಷಗಳ ಹಿಂದೆ ಅಂಜಾನಿಂದ ರಕ್ಷಿಸಲ್ಪಟ್ಟ ಹೋಪ್ ಎಂಬ ಪುಟ್ಟ ಬಾಲಕನೇ ಈ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದು, ಈಗ ಅವನು ಬೆಳೆದಿದ್ದಾನೆ ಎಂಬ ಹೇಳಿಕೆಯೊಂದಿಗೆ ಫೋಟೊವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಟೊದಲ್ಲಿರುವ ಮಗು ನೈಜೀರಿಯಾದಲ್ಲಿ ರಕ್ಷಿಸಲ್ಪಟ್ಟ ಪಿಶಾಚಿ ಎಂದು ತಿರಸ್ಕರಿಸಲ್ಪಟ್ಟ ಹೋಪ್ ಹೆಸರಿನ ಹುಡುಗನೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೊದಲ್ಲಿ ಇರುವ ಇಬ್ಬರು ಹೋಪ್ ಎಂಬ ಮಗುವಿನ ಚಿತ್ರವೇ ಎಂದು ಪರಿಶೀಲಿಸಲು, ಅಂಜ ರಿಂಗ್ರೆನ್ ಲೋಬನ್ ಅವರ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಅಬ್ಬಯ ಪರಿಶೀಲಿಸಿದಾಗ, 7 ವರ್ಷಗಳ ಹಿಂದೆ ರಕ್ಷಿಸಲ್ಪಟ್ಟ ಮಗು ಹೋಪ್‌ಗೂ, ಮತ್ತೊಂದು ಚಿತ್ರದಲ್ಲಿರುವ ಬಿಳಿ ಟೀ ಶರ್ಟ್ ಧರಿಸಿರುವ ಹುಡುಗನಿಗೂ ಸಂಬಂಧವಿಲ್ಲ.

ಏಳು ವರ್ಷಗಳ ಹಿಂದೆ ಅಂಜನಿಂದ ರಕ್ಷಿಸಲ್ಪಟ್ಟ ಪುಟ್ಟ ಮಗು ಹೋಪ್‌ಗೆ ಈಗ ಹತ್ತು ವರ್ಷ. ಫೆಬ್ರುವರಿ 2023 ರಲ್ಲಿ ಅಂಜಾ ಅವರು ಹೋಪ್ ಅವರ ಇತ್ತೀಚಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನೀವು ಅದನ್ನು ಈ ಕೆಳಗಿನ ಕೊಲಾಜ್‌ನಲ್ಲಿ ನೋಡಬಹುದು.

ಒಂದೂವರೆ ವರ್ಷ ಪ್ರಾಯವಾದ ಈ ಮಗು ಪಿಶಾಚಿಯ ಸಂತಾನ ಎಂದು ಆರೋಪಿಸಿ ಕುಟುಂಬದವರು ಹೋಪ್‌ನನ್ನು ಬೀದಿಗೆಸೆದಿದ್ದರು. ಆನಂತರ ವಾರಸುದಾರರಿಲ್ಲದೆ ಈ ಮಗು ಎಂಟು ತಿಂಗಳು ಬೀದಿಯಲ್ಲಿ ಅಲೆದು  ಆಗಲೂ ಈಗಲೋ ಸಾಯುವಂತೆ ಆಗಿತ್ತು. ಅದೇ ಸಂದರ್ಬದಲ್ಲಿ ಈ ವಿಷಯ ತಿಳಿದ ಪಾಶ್ಚಾತ್ಯ ಚ್ಯಾರಿಟಿ ಕಾರ್ಯಕರ್ತರು, ಮಗುವನ್ನು ರಕ್ಷಿಸಿದ್ದರು.

The healthy-looking boy has made a remarkable recovery after his traumatic ordeal 

ಆಫ್ರಿಕದಲ್ಲಿರುವ ಡ್ಯಾನಿಷ್ ಚ್ಯಾರಿಟಿ ಕಾರ್ಯಕರ್ತೆ ಅಂಜ ರಿಂಗ್ರೆನ್ ಲೋಬನ್ ಮಗುವನ್ನು ನೋಡಿದಾಗ ಹುಳು ಬಾಧಿಸಿತ್ತು. ಅಷ್ಟು ಕೊಳಕು ಸ್ಥಿತಿಯಲ್ಲಿ ತಿಂಗಳುಗಟ್ಟೆಲೆ ಆ ಮಗು ಬದುಕುಳಿದು ಅಲೆದಾಡುತ್ತಿತ್ತು ಎನ್ನುವುದೇ ಒಂದು ಅದ್ಭುತ. ಆಗ ಆ ಮಗುವಿಗೆ ಆರೈಕೆ ಮಾಡಿ ಸಾಯುವ ಸ್ಥಿತಿಯಲ್ಲಿದ್ದ ಮಗುವಿನ ಜೀವ ಉಳಿಸಿದರು ಅಂಜಾ.Image

1 ವ್ಯಕ್ತಿ, ನಗುತ್ತಿದ್ದಾರೆ ಮತ್ತು ಕನ್ನಡಕ ನ ಚಿತ್ರವಾಗಿರಬಹುದು

 

 

1 ವ್ಯಕ್ತಿ ನ ವಿವರಣೆಯಾಗಿರಬಹುದು 2 ಜನರು ಮತ್ತು ಜನರ ಮುಗುಳುನಗೆ ನ ಚಿತ್ರವಾಗಿರಬಹುದು

ಅಂಜಾ ಅವರ ತಂಡ ಹೋಪ್ ಎಂಬ ಮಗುವನ್ನು ರಕ್ಷಿಸಿದಾಗ, ಆ ಮಗುವಿನ ಮಯಸ್ಸು 3 ವರ್ಷ. ಆರಂಭದಲ್ಲಿ ಹೋಪ್‌ನ ಆಸ್ಪತ್ರೆ ಬಿಲ್‌ನ್ನು ಅಂಜಾ ಅವರೇ ಭರಿಸಿದ್ದರು. ಆನಂತರ ಭಾರೀ ಹಣ ಬೇಕಾದಾಗ ಅವರು ಸಮಾಜದ ನೆರವು ಕೋರಿದ್ದರು. ಜಗತ್ತಿನಾದ್ಯಂತದಿಂದ ಹೋಪ್‌ನ ಶುಶ್ರೂಷೆಗಾಗಿ ಒಂದು ಮಿಲಿಯನ್ ಡಾಲರ್‌ನಷ್ಟು ಹಣವನ್ನು ಜನರೇ ಕೊಟ್ಟರು. ಆದ್ದರಿಂದ ಹೋಪ್‌ನಿಗೆ ಉತ್ತಮ ಚಿಕಿತ್ಸೆ ದೊರಕಿತ್ತು.  ಈಗ ಹೋಪ್ ಗೆ 10ವರ್ಷ ಅವನ ಆರೋಗ್ಯ ಚೆನ್ನಾಗಿದ್ದು, ಕಲಿಯುತ್ತಿದ್ದಾನೆ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ಅಂಜ ಅವರೇ ಹೇಳಿದ್ದಾರೆ.

ಹೆಚ್ಚಿನ ಚಿತ್ರಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಚಿತ್ರಗಳಿಗೆ ಇಲ್ಲಿ ಕ್ಲಿಕ್ ಮಾಡಿ

 

ಇನ್ನೊಂದು ಚಿತ್ರದಲ್ಲಿರುವ ದೊಡ್ಡ ಹುಡುಗ ಯಾರು?

ಕೊಲಾಜ್ ಮಾಡಲಾದ ಮತ್ತೊಂದು ಚಿತ್ರದಲ್ಲಿರುವ ಹುಡುಗನ ಹೆಸರು ಪ್ರಿನ್ಸ್‌. ಆತನಿಗೆ 19 ವರ್ಷ. ಇವನನ್ನು ಅಂಜಾ ಅವರು ಏಪ್ರಿಲ್ 2023 ರಲ್ಲಿ ವಿಶ್ವವಿದ್ಯಾನಿಲಯಕ್ಕೆ ಸೇರಿಸಿದಾಗ ತೆಗೆದ ಚಿತ್ರ. ಈ ಚಿತ್ರದಲ್ಲಿರುವ ಹುಡುಗನಿಗೂ ನೈಜೀರಿಯಾದಲ್ಲಿ ಸಾಯುವಂತಿದ್ದ ಹೋಪ್‌ ಎಂಬ ಮಗುವಿಗೂ ಸಂಬಂಧವಿಲ್ಲ.

ಪ್ರಿನ್ಸ್‌ ಎಂಬ ಹುಡುಗ
ಪ್ರಿನ್ಸ್‌ ಎಂಬ ಹುಡುಗ

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಎರಡು ಚಿತ್ರದಲ್ಲಿರುವ ಮಕ್ಕಳ ಚಿತ್ರ ಒಂದೇ ಮಗುವಿನದಲ್ಲ. ಈ ಎರಡು ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಒಂದು ಚಿತ್ರದಲ್ಲಿರುವುದು ನೈಜೀರಿಯಾದ ಹೋಪ್ ಎಂಬ ಮಗು ಮತ್ತೊಂದು ಚಿತ್ರದಲ್ಲಿರುವ ಹುಡುಗ ಪ್ರಿನ್ಸ್‌. ಇಬ್ಬರೂ ಬೇರೆ ಬೇರೆ ಎಂಬುದು ಸ್ಪಷ್ಟವಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹೋಪ್ ಎಂಬ ಹುಡುಗ ಬೆಳೆದು ದೊಡ್ಡವನಾಗಿದ್ದಾನೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ತಂದೆಯೊಬ್ಬ ತನ್ನ ಸ್ವಂತ ಮಗಳನ್ನೆ ನಾಲ್ಕನೇ ಪತ್ನಿಯಾಗಿ ಸ್ವೀಕರಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights