ಫ್ಯಾಕ್ಟ್‌ಚೆಕ್ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ಅಮೆರಿಕ ಗ್ರಂಥಾಲಯವನ್ನು ನಿರ್ಮಿಸಿದೆಯೇ?

ಭಾರತದ ಸಂವಿಧಾನ ಶಿಲ್ಪಿ ಡಾ. ಭೀಮ್ ರಾವ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಅಮೆರಿಕ ವಿಶ್ವದ ಅತಿದೊಡ್ಡ ಗ್ರಂಥಾಲಯವನ್ನು ತೆರೆದಿದೆ ಎಂಬ ಹೇಳಿಕೆಯೊಂದಿಗೆ ಹೈಟೆಕ್ ಗ್ರಂಥಾಲಯದ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

https://twitter.com/Vndnason/status/1735869840110625196

ಡಾ. ಬಿ.ಆರ್. ಅಂಬೇಡ್ಕರ್ ಅವರ ಗೌರವಾರ್ಥ ಅಮೆರಿಕ ವಿಶ್ವದ ಅತಿದೊಡ್ಡ ಗ್ರಂಥಾಲಯವನ್ನು ನಿರ್ಮಿಸಿದೆ ಎಂದು ಬೃಹತ್ ಕಟ್ಟಡವೊಂದರಲ್ಲಿ ಅಚ್ಚುಕಟ್ಟಾಗಿ ಜೋಡಿಸಿರುವ ಪುಸ್ತಕಗಳನ್ನು ತೋರಿಸುವ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಹಿಂದೂಸ್ತಾನ್ ಟೈಮ್ಸ್ ಮಾಡಿರುವ ವರದಿಯೊಂದು ಲಭ್ಯವಾಗಿದ್ದು. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಚಿತ್ರಗಳು ಚೀನಾದ “ಟಿಯಾಂಜಿನ್ ಬಿನ್‌ಹೈ ಲೈಬ್ರರಿಗೆ ಸೇರಿವೆ ಎಂದು ವರದಿ ಮಾಡಿದೆ.

ಈ ಬೃಹತ್ ಗ್ರಂಥಾಲಯವು ಚೀನಾ ಮೇನ್‌ಲ್ಯಾಂಡ್‌ನಲ್ಲಿದೆ. ವರದಿಗಳು ಪ್ರಕಾರ ಟಿಯಾಂಜಿನ್ ಬಿನ್ಹೈ ಬೃಹತ್ ಗ್ರಂಥಾಲಯವನ್ನು ಸ್ಥಳೀಯ ಪುರಸಭೆಯು ಕೇವಲ ಮೂರು ವರ್ಷಗಳ ದಾಖಲೆಯ ಸಮಯದಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.

ಈ ಲೈಬ್ರರಿಗೆ ಸಂಬಂಧಿಸಿದಂತೆ ಮತ್ತಷ್ಟು ಸರ್ಚ್ ಮಾಡಿದಾಗ,  ಬ್ಯುಸಿನೆಸ್ ಇನ್‌ಸೈಡರ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವೊಂದು ಲಭ್ಯವಾಗಿದ್ದು, “ಚೀನಾದಲ್ಲಿನ ಈ ಬೃಹತ್ ಲೈಬ್ರರಿಯಲ್ಲಿ ‘ಪುಸ್ತಕ ಪರ್ವತವನ್ನು ನೀವು ಏರಬಹುದು’ ಎಂಬ ಟೈಟಲ್‌ನೊಂದಿಗೆ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. 1.2 ಮಿಲಿಯನ್ ಪುಸ್ತಕಗಳಿಗೆ ಇಲ್ಲಿ ಸ್ಥಳಾವಕಾಶ ಮಾಡಲಾಗಿದೆ.

ಇದನ್ನು ಡಚ್ ಆರ್ಕಿಟೆಕ್ಚರ್ ಸಂಸ್ಥೆ MVRDV ಮತ್ತು ಟಿಯಾಂಜಿನ್ ನಗರ ಯೋಜನೆ ಮತ್ತು ವಿನ್ಯಾಸ ಸಂಸ್ಥೆಯಿಂದ ಸ್ಥಳೀಯ ವಾಸ್ತುಶಿಲ್ಪಿಗಳು ಪೂರ್ಣಗೊಳಿಸಿದ್ದಾರೆ. ಸ್ಥಳೀಯವಾಗಿ ಇದನ್ನು EYE ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಗ್ರಂಥಾಲಯದ ಮಧ್ಯಭಾಗದಲ್ಲಿ ಒಂದು ದೊಡ್ಡದಾದ ಗ್ಲೋಬ್‌ನ ಆಕಾರವಿದ್ದು ಅದರೊಳಗೆ ಸಭಾಂಗಣ ನಿರ್ಮಿಸಲಾಗಿದೆ. ಈ ಗ್ರಂಥಾಲಯ 2017 ರಲ್ಲಿ ಪ್ರಾರಂಭವಾದಾಗಿನಿಂದ ಪ್ರವಾಸಿ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಈ ಗ್ರಥಾಲಯಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಅಮೆರಿಕಾದಲ್ಲಿರುವ ಯಾವುದಾದರೂ ಗ್ರಂಥಾಲಯಗಳಿಗೆ ಡಾ ಬಿಆರ್ ಅಂಬೇಡ್ಕರ್ ಅವರ ಹೆಸರನ್ನು ಇಡಲಾಗಿದೆಯೇ ಪರಿಶೀಲಿಸಲಾಗಿದ್ದು ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಯಾವುದೇ ಗ್ರಂಥಾಲಯ ನಿರ್ಮಾಣ ಮಾಡಿದ ವರದಿಗಳು ಲಭ್ಯವಾಗಿಲ್ಲ.

ಆದರೂ, ಇತ್ತೀಚೆಗೆ 14 ಅಕ್ಟೋಬರ್ 2023 ರಂದು, ಅಮೆರಿಕಾದಲ್ಲಿ ಡಾ ಬಿಆರ್ ಅಂಬೇಡ್ಕರ್ ಅವರ ಅತಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ಎಂಬ ವರದಿಯೊಂದು ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಡಾ. ಬಿ.ಆರ್ ಅಂಬೇಡ್ಕರ್ ಅವರ ಗೌರವಾರ್ಥವಾಗಿ ಅಮೆರಿಕವು ಅತಿದೊಡ್ಡ ಗ್ರಂಥಾಲಯವನ್ನು ಸ್ಥಾಪಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಳಾದ ಚಿತ್ರಗಳು ವಾಸ್ತವವಾಗಿ ಚೀನಾಕ್ಕೆ ಸಂಬಂಧಿಸಿದ್ದಾಗಿವೆ. ಅಂಬೇಡ್ಕರ್ ಅವರಿಗೂ ಈ ಚಿತ್ರದಲ್ಲಿರುವ ಗ್ರಂಥಾಲಯಕ್ಕೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಯೂಟರ್ನ.ಇನ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ದಾವೂದ್ ಇಬ್ರಾಹಿಂ ಸಾವಿನ ಸುದ್ದಿ ಎಷ್ಟು ನಿಜ? ಎಷ್ಟು ಸುಳ್ಳು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights