ಅಮಿತ್ ಶಾ ಹುಬ್ಬಳ್ಳಿ ಭೇಟಿ ಖಂಡಿಸಿ ‘ಗೋ ಬ್ಯಾಕ್ ಅಮಿತ್ ಶಾ ಪ್ರೊಟೆಸ್ಟ್’

ಹುಬ್ಬಳ್ಳಿ ಜನಜಾಗೃತಿ ಸಮಾವೇಶದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದು, ಶಾ ಭೇಟಿ ವಿರೋಧಿಸಿ ‘ಗೋ ಬ್ಯಾಕ್ ಅಮಿತ್ ಶಾ ಪ್ರೊಟೆಸ್ಟ್’ ಮಾಡಲಾಗುತ್ತಿದೆ.

ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿಎಎ ವಿರೋಧಿಗಳು ಹುಬ್ಬಳಿಯ ಚೆನ್ನಮ್ಮ ಸರ್ಕಲ್ ಬಳಿ ಪ್ರತಿಭಟನೆ ವೇಳೆ ಕಪ್ಪು ಬಟ್ಟೆ ಧರಿಸಿ ಅಮಿತ್ ಶಾ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಇಂದು ಜನಜಾಗೃತಿ ಸಮಾವೇಶದಲ್ಲಿ ಅಮಿತ್ ಶಾ ಭಾಗವಹಿಸಲಿದ್ದು, ಇದನ್ನ ವಿರೋಧಿಸಿ ಪ್ರತಿಭಟನೆ ಮಾಡಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights