FACT CHECK | 2015ರ ಹಳೆಯ ರೈಲು ಅಪಘಾತದ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

ಇತ್ತೀಚೆಗೆ ಸಾಮಾಜಿಕ ಮಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಪ್ಯಾಸೆಂಜರ್ ರೈಲೊಂದು ಪ್ಲಾಟ್‌ಫಾರ್ಮ್‌ಗೆ ಡಿಕ್ಕಿ ಹೊಡೆದಿರುವ ಸಿಸಿಟಿವಿ ದೃಶ್ಯಾವಳಿಗಳನ್ನು (ಇಲ್ಲಿ ಮತ್ತು ಇಲ್ಲಿ) ನೋಡಬಹುದು.

ಈ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳುವ ಬಳಕೆದಾರರು ಭಾರತೀಯ ರೈಲ್ವೆ ಸಚಿವ ‘ಅಶ್ವಿನಿ ವೈಷ್ಣವ್,’ ಅವರನ್ನು ಕುರಿತು ರೈಲ್ವೇಯಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಇತ್ತೀಚಿನ ರೈಲು ಅಪಘಾತಗಳ ನಂತರ ಈ ಘಟನೆ ಸಂಭವಿಸಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ಆಗುತ್ತಿರುವ ವಿಡಿಯೋ 2015ರದ್ದು ಎಂಬ ಮಾಹಿತಿ ಲಭ್ಯವಾಗಿದೆ. ಮುಂಬೈನಲ್ಲಿ ಲೋಕಲ್ ರೈಲು ಹಳಿತಪ್ಪುವುದರೊಂದಿಗೆ ಚರ್ಚ್‌ಗೇಟ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಅಪಘಾಟಕ್ಕೊಳಗಾಗದೆ ಎಂಬ ಸುದ್ದಿ ವರದಿಗಳು ಲಭ್ಯವಾಗಿವೆ. ಈ ಘಟನೆಯಿಂದ ಹಲವರು ಗಾಯಗೊಂಡಿದ್ದು, ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.

ವರದಿಗಳ ಪ್ರಕಾರ, ಚರ್ಚ್‌ಗೇಟ್ ನಿಲ್ದಾಣದ ಅಧಿಕಾರಿಗಳು ಈ ದೃಶ್ಯವನ್ನು ಬಿಡುಗಡೆ ಮಾಡಿದ್ದಾರೆ, ಅವರು ಘಟನೆಗೆ ಕಾರಣ ಮಾನವ ದೋಷ ಎಂದು ಹೇಳಿದ್ದಾರೆ. ಭಾಯಂದರ್‌ನಿಂದ ಬರುತ್ತಿದ್ದ ಈ ರೈಲು ಅಪಘಾತಕ್ಕೀಡಾಗಿದ್ದು, ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೋಟರ್‌ಮ್ಯಾನ್, ರೈಲು ಸಿಬ್ಬಂದಿ ಮತ್ತು ಲೋಕೋ ಇನ್‌ಸ್ಪೆಕ್ಟರ್ ಅನ್ನು ಪಶ್ಚಿಮ ರೈಲ್ವೆ ಅಮಾನತುಗೊಳಿಸಿದೆ.

ಮುಂಬೈನ ಚರ್ಚ್‌ಗೇಟ್ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲು ಪ್ಲಾಟ್‌ಫಾರ್ಮ್ನಲ್ಲಿ ಹಳಿತಪ್ಪಿ ಹಲವು ಜನರು ಗಾಯಗೊಂಡಿರುವುದನ್ನು ಫೂಟೇಜ್ ತೋರಿಸುತ್ತದೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ.

ಇದಲ್ಲದೆ, 23 ಜುಲೈ 2024 ರಂದು, ರೈಲ್ವೇ ಸಚಿವಾಲಯವು ‘X’ ನಲ್ಲಿ ಈ ವೀಡಿಯೊ ಹಳೆಯದು ಎಂದು ಸ್ಪಷ್ಟಪಡಿಸಿದೆ ಮತ್ತು ತಪ್ಪು ಮಾಹಿತಿಯನ್ನು ಹರಡುವುದನ್ನು ತಡೆಯಲು ಸಾರ್ವಜನಿಕರನ್ನು ವಿನಂತಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2015 ರ ವಿಡಿಯೋವನ್ನು ಭಾರತದಲ್ಲಿನ ರೈಲು ಅಪಘಾತದ ಇತ್ತೀಚಿನ ವೀಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಪ್ರಾಣ ಉಳಿಸಿಕೊಳ್ಳಲು ಬಹುಮಹಡಿ ಕ್ಟಡದಿಂದ ಜಿಗಿದ್ರಾ ಹಿಂದೂಗಳು? ವೈರಲ್ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights