FACT CHECK | ಗೋವಾ- ಮಂಗಳೂರು ಹೆದ್ದಾರೆಯಲ್ಲಿ ಅನಿಲ ಟ್ಯಾಂಕರ್ ಸ್ಪೋಟದಿಂದ ದುರಂತ ಸಂಭವಿಸಿದ್ದು ನಿಜವೇ? ಪೋಸ್ಟ್‌ನ ಅಸಲೀಯತ್ತೇನು ಗೊತ್ತೇ?

ಈ ಬಾರಿ ಆಷಾಡದ ಮಳೆ ತಂದೊಡ್ಡಿರುವ ಅವಾಂತರ ಒಂದೆರಡಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮನೆಗಳು ನೀರಿನಲ್ಲಿ ಆವೃತವಾಗಿದ್ದರೆ, ಮಳೆ ರಭಸಕ್ಕೆ ಬೆಟ್ಟ ಗುಡ್ಡ ಕುಸಿದು ಹಲವರು ಪ್ರಾಣ ಕಳೆದೊಂಡು ನಾಪತ್ತೆಯಾಗಿದ್ದಾರೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದಿಂದಾಗಿ ಹಲವರು ನೀರುಪಾಲಾಗಿದ್ದರು.

Fact Check: ಗೋವಾ-ಮಂಗಳೂರು ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ ಎಂದ ವೀಡಿಯೋ ಬ್ರೆಜಿಲ್‌ನದ್ದು!

ಈಗ ಗೋವಾ-ಮಂಗಳೂರು ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್‌ವೊಂದು ಸ್ಫೋಟಗೊಂಡಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ಪ್ರಸಾರವಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಂತೆ ಗೋವಾ-ಮಂಗಳೂರು ರಸ್ತೆಯಲ್ಲಿ ಟ್ಯಾಂಕರ್ ಸ್ಪೋಟಗೊಂಡಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಗೋವಾ-ಮಂಗಳೂರು ರಸ್ತೆಯಲ್ಲಿ ಟ್ಯಾಂಕರ್ ಸ್ಪೋಟಗೊಂಡಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 4 ಜುಲೈ , 2024ರಂದು ಉಪುಕ್‌ನ್ಯೂಸ್‌ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಲಭ್ಯವಾಗಿದೆ. ಶೀರ್ಷಿಕೆಯಂತೆ ಬ್ರೆಜಿಲ್‌ನ ಪ್ಯಾರಾ ಭಾಗದಲ್ಲಿ ಟ್ಯಾಂಕರ್ ಸ್ಫೋಟಗೊಂಡ ಲೈವ್ ದೃಶ್ಯಾವಳಿ ಎಂದಿದೆ.

ಮತ್ತಷ್ಟು ಮಾಹಿತಿಗಾಗಿ ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ, ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡ ಬಗ್ಗೆ ಮಾಧ್ಯಮ ವರದಿಗಳು ಲಭ್ಯವಾಗಿವೆ. ಜುಲೈ 4, 2024ರ ಎಲ್ ಡೈರಿಯೋಮ್ಯಾಕ್ಸ್ ವರದಿ ಪ್ರಕಾರ ಬ್ರೆಜಿಲ್‌ನ ಪ್ಯಾರಾ ರಾಜ್ಯದಲ್ಲಿ ಪ್ಯಾರಾಗೊಮಿನಾಸ್ ಮತ್ತು ಉಲಿಯಾನೊಪೊಲಿಸ್ ನಡುವಿನ ಹೆದ್ದಾರಿಯಲ್ಲಿ ಅನಿಲ ಸಾಗಿಸುವ ಟ್ಯಾಂಕರ್ ಸ್ಫೋಟಗೊಂಡಿದ್ದು  , ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕ್ಯಾಮರಾಮನ್, ವರದಿಗಾರ ಮತ್ತು ತಂತ್ರಜ್ಞರು ಘಟನೆಯನ್ನು ವರದಿ ಮಾಡಲು ಬಂದಿದ್ದರು. ಸ್ಫೋಟಕ್ಕೆ ಕೆಲವೇ ಕ್ಷಣಗಳ ಮೊದಲು , ವಾಹನವು ಅಪಘಾತಕ್ಕೀಡಾಗಿತ್ತು ಎಂದು ಉಲ್ಲೇಖಿಸಲಾಗಿದೆ.

Fact Check: ಗೋವಾ-ಮಂಗಳೂರು ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ ಎಂದ ವೀಡಿಯೋ ಬ್ರೆಜಿಲ್‌ನದ್ದು!

4 ಜುಲೈ , 2024ರ ರಿಯಲಿಡೇಡ್ಸ್ ವರದಿ ಪ್ರಕಾರ, ಹೆದ್ದಾರಿಯಲ್ಲಿ ಟ್ಯಾಂಕರ್ ಟ್ರಕ್‌ ಸ್ಫೋಟದಿಂದ ವರದಿ ಮಾಡಲು ಬಂದಿದ್ದ ಮೂವರು ಮಾಧ್ಯಮ ಪ್ರತಿನಿದಿಗಳು ಮತ್ತು ಮೂರು ಮಿಲಿಟರಿ ಅಗ್ನಿಶಾಮಕ ಸಿಬ್ಬಂದಿಗೆ ಸುಟ್ಟಗಾಯಗಳಾಗಿವೆ. ಉತ್ತರ  ಬ್ರೆಜಿಲ್‌ನ ಪ್ಯಾರಾದಲ್ಲಿ ಹೆದ್ದಾರಿಯಲ್ಲಿ  ಅನಿಲ ಸಾಗಿಸುವ  ಟ್ಯಾಂಕರ್ ಅಪಘಾತಕ್ಕೀಡಾದ ಸಂದರ್ಭ, ಘಟನೆ ವರದಿ ಮಾಡಲುಬಂದ ಕ್ಯಾಮರಾಮನ್, ವರದಿಗಾರ ಮತ್ತು ತಂತ್ರಜ್ಞ ಸೇರಿದಂತೆ  ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ ಎಂದಿದೆ. (ಗೂಗಲ್‌ ಮೂಲಕ ಅನುವಾದಿಸಲಾಗಿದೆ)

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಇದೇ ರೀತಿಯ ವರದಿಗಳನ್ನು ಇಲ್ಲಿಇಲ್ಲಿಇಲ್ಲಿ  ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಬ್ರೆಜಿಲ್‌ನ ಪ್ಯಾರಾದ ಹೆದ್ದಾರಿಯಲ್ಲಿ 4 ಜುಲೈ , 2024ರಂದು ಅನಿಲ ಸಾಗಿಸುವ ಟ್ಯಾಂಕರ್  ಸ್ಫೋಟಗೊಂಡ ಘಟನೆಯನ್ನು ಗೋವಾ-ಮಂಗಳೂರು ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್‌ವೊಂದು ಸ್ಫೋಟಗೊಂಡಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನಿಮ್ಮ ಮನೆಯಿಂದ 60 ಕಿ.ಮೀ. ದೂರದೊಳಗೆ ಟೋಲ್‌ ಬೂತ್ ಇದ್ದರೂ ನೀವು ಟೋಲ್ ಶುಲ್ಕ ಕಟ್ಟುವಂತಿಲ್ಲ ಎಂದು ಹೇಳಿದ್ರಾ ನಿತಿನ್‌ ಗಡ್ಕರಿ ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights