FACT CHECK | ಕೊಲೆ ಮಾಡಿ ಯುವತಿಯ ಶವವನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟ 2022 ರ ಹಳೆಯ ಘಟನೆಯನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ

ಯುವತಿಯೊಬ್ಬಳನ್ನು ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಯಾರಿಗೂ ಗೊತ್ತಾಗದ ಹಾಗೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ  ಎಂದು ಆರೋಪಿಸಿ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಬಂಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆತನ ಬಗ್ಗೆ ಜನರು ವಿಚಾರಿಸಿದಾಗ ಯುವಕನು ತನ್ನ ಹೆಸರು ‘ಅಯಾನ್’ ಎಂದು ಹೇಳಿದ್ದಾನೆ. ಇದನ್ನು ‘ಲವ್ ಜಿಹಾದ್’ ಘಟನೆ ಎಂಬಂತೆ ಈ ವಿಡಿಯೋ ಹರಿದಾಡುತ್ತಿದೆ. ಇದರ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್ ಆಗುತ್ತಿದ್ದು ”  ‘ಲವ್ ಜಿಹಾದ್ ‘ ಅಂತಿಮ ಹಂತ ಇದು ಎಂಬ ಹೇಳಿಕೆಯೊಂದಿಗೆ ವಿಡಿಯೊ ವೈರಲ್ ಆಗಿದೆ.

ಇನ್ನೊಂದು ಲವ್ ಜಿಹಾದ್ (ಮೇರಾ ವಾಲಾ ಅಚ್ಚಾ ಹೈ ಪ್ಯಾರ್ ಹೈ ಕರೇಗಾ) “ನಾನು ಚೆನ್ನಾಗಿ ಇರ್ತೀನಿ ಅವನು ನನ್ನನ್ನು ತುಂಬಾ ಪ್ರೀತಿ ಮಾಡ್ತಾನೆ” ಅನ್ನೋ ಹುಡುಗಿಯರ ದೇಹ ಹೆಚ್ಚಾಗಿ ಸೂಟ್‌ಕೇಸ್‌ಗಳಲ್ಲಿ ಇರುತ್ತದೆ, ಅಥವಾ ಉಳಿದದ್ದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಹಿಂದೂ ಹುಡುಗಿಯರು ತಮ್ಮ ಹೆತ್ತವರ ಬಗ್ಗೆ ಯಾವಾಗ ಕಾಳಜಿ ವಹಿಸುತ್ತಾರೆಂದು ಯಾವಾಗ ಅರ್ಥಮಾಡಿಕೊಳ್ಳುತ್ತಾರೆ? ಉತ್ತರಾಖಂಡದಲ್ಲಿ ಈ ಲವ್ ಜಿಹಾದ್ ಅತ್ಯಂತ ವೇಗವಾಗಿ ನಡೆಯುತ್ತಿದೆ. ಎಂದು ಟ್ವೀಟ್ ಮಾಡಿದ್ದಾರೆ.

“ಅಬ್ದುಲ್‌ನೊಂದಿಗೆ ಪ್ರೀತಿಯಲ್ಲಿ ಬೀಳುವುದು ಎಂದರೆ ಸೂಟ್‌ಕೇಸ್‌ನಲ್ಲಿ ಕೊನೆಗೊಳ್ಳುವುದು” ಎಂದು ಬರೆದು ಇನ್‌ಸ್ಟಾಗ್ರಾಮ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇಂತಹ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ “ಲವ್ ಜಿಹಾದ್” ಆರೋಪಗಳು ಕೇಳಿ ಬರುತ್ತಿರುತ್ತವೆ, ಹಾಗಾಗಿ ಈ ಕೊಲೆ ನಿಜವಾಗಿಯೂ ಲವ್ ಜಿಹಾದ್ ಕಾರಣಕ್ಕೆ ನಡೆದಿದೆಯಾ ಎಂದು ಘಟನೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಘಟನೆಯು ಹರಿದ್ವಾರದ (ಉತ್ತರಾಖಂಡ) ಜವಾಲಾಪುರದಲ್ಲಿ 2022ರಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾರ್ಚ್ 25 ಮತ್ತು 26, 2022 ರಂದು ‘Etv ಭಾರತ್’ ಮತ್ತು ‘ನ್ಯೂಸ್ 18’ ಸೈಟ್‌ಗಳಲ್ಲಿ ಸುದ್ದಿ ಪ್ರಕಟಿಸಲಾಗಿದೆ. ಗುಲ್ಜೆಬ್ ಎಂಬ ಮುಸ್ಲಿಂ ಯುವಕ ರಾಮ್ಶಾ ಎಂಬ ಮುಸ್ಲಿಂ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ. ಹುಡುಗಿಯ ಮನೆಯವರು ಪ್ರೀತಿಯನ್ನು ಒಪ್ಪಲಿಲ್ಲ ಎಂದು ಕುಲ್ಜೇಬ್ ಪೊಲೀಸರಿಗೆ ತಿಳಿಸಿದ್ದು, ಮನೆಯಲ್ಲಿ ಅವರು ಹೇಳುವುದನ್ನು ಕೇಳಿ ಗೆಳತಿ ಕೂಡ ಮದುವೆಯಾಗಲು ನಿರಾಕರಿಸಿದ್ದರಿಂದ ಆಕೆಯನ್ನು  ಕೊಂದಿದ್ದಾನೆ ಎಂದು ವರದಿಯಾಗಿದೆ.

ಹೋಟೆಲ್ ನಲ್ಲಿ ರೂಂ ಚೆಕ್ ಮಾಡುವಾಗ ಹುಡುಗಿಯ ಹೆಸರು ಕಾಜಲ್ ಎಂದು ಹೇಳಲಾಗಿತ್ತು. ಆದರೆ ಪೊಲೀಸರ ತನಿಖೆಯಿಂದ ಮಹಿಳೆಯ ನಿಜವಾದ ಹೆಸರು ರಾಮ್ಶಾ ಎಂದು ತಿಳಿದುಬಂದಿದ್ದು, ಆಕೆ ಮಂಗಳೂರಿನವಳು. ಅಲ್ಲದೇ ದೂರದ ಸಂಬಂಧಿಗಳಾದ ಇವರು ಸುಮಾರು 8 ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ‘ಜಾಗ್ರಣ್’ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ಸುದ್ದಿಯಲ್ಲಿ ಉಲ್ಲೇಖಿಸಲಾಗಿದೆ.

ಇವುಗಳಿಂದ ಕೊಲೆಯಾದ ಮಹಿಳೆ ಮತ್ತು ಕೊಲೆಗಾರ ಇಬ್ಬರೂ ಇಸ್ಲಾಂ ಧರ್ಮಕ್ಕೆ ಸೇರಿದವರು ಎಂಬುದು ಖಚಿತವಾಗಿದೆ. ಈ ಕೊಲೆಯಲ್ಲಿ ಯಾವುದೇ ಕೋಮು ಹಿನ್ನಲೆಯಾಗಲಿ, ಲವ್ ಜಿಹಾದ್‌ ಆಗಲಿ ಇಲ್ಲ.

ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸಿ ಮತಾಂತರ ಮಾಡಿ ಹತ್ಯೆಗೈದಿರುವ ಬಗ್ಗೆ ಹಲವು ಸುಳ್ಳು ಸುದ್ದಿಗಳನ್ನು ಬಲಪಂಥೀಯರು ‘ಲವ್ ಜಿಹಾದ್’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿದ್ದಾರೆ. ಇದು ಅಂತಹ ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಯುವತಿ ಮತ್ತು ಆಕೆಯನ್ನು ಕೊಲೆ ಮಡಿದ ಆರೋಪಿ ಇಬ್ಬರು ಒಂದೇ ಸಮುದಾಯಕ್ಕೆ ಸೇರಿದ್ದವರಾಗಿದ್ದು, ದೂರದ ಸಂಬಂಧಿಯೂ ಆಗಿದ್ದರು ಆದರೆ ಯುವತಿ ಮತ್ತು ಯುವತಿಯ ಕುಟುಂಬದವರು ಮದುವೆಗೆ ಸಮ್ಮತಿ ಸೂಚಿಸದ ಕಾರಣ ಕೋಪಗೊಂಡ ಯುವಕ ಯುವತಿಯನ್ನು ಕೊಲೆ ಮಾಡಿದ 2022ರ ಹಳೆಯ ಘಟನೆಯನ್ನು ಇತ್ತೀಚೆಗೆ ನಡೆದ ಲವ್ ಜಿಹಾದ್ ಪ್ರಕರಣ ಎಂದು ತಪ್ಪಾಗಿ ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಗೋವಾ- ಮಂಗಳೂರು ಹೆದ್ದಾರೆಯಲ್ಲಿ ಅನಿಲ ಟ್ಯಾಂಕರ್ ಸ್ಪೋಟದಿಂದ ದುರಂತ ಸಂಭವಿಸಿದ್ದು ನಿಜವೇ? ಪೋಸ್ಟ್‌ನ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights