FACT CHECK | ಹರಿಯಾಣದಲ್ಲಿ RSS ಮೆರವಣಿಗೆ ಎಂದು ಕೇರಳದ ವಿಡಿಯೋ ಹಂಚಿಕೆ

ಮಳೆಗಾಲದ ಕೊನೆಯಲ್ಲಿ ನಡೆಯುತ್ತಿರುವ ಹರಿಯಾಣದ ಚುನಾವಣಾ ಕಾವು ನಿಧಾನವಾಗಿ ಏರತೊಡಗಿದೆ. ಹರಿಯಾಣದ ಹಲವು ಸಂಗತಿಗಳು ಆಡಳಿತರೂಢ ಬಿಜೆಪಿಗೆ ಹಿನ್ನಡೆಯನ್ನುಟು ಮಾಡುವ ಸಾಧ್ಯತೆಯು ಇದೆ ಎಂದು ಹೇಳಲಾಗುತ್ತಿದೆ. ಇತ್ತ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಾಣದಲ್ಲಿ ಆರ್.ಎಸ್.ಎಸ್ ಕ್ರಿಯಾಶೀಲವಾಗಿದೆ ಎಂದು ಬಿಂಬಿಸುವ ಪ್ರಯತ್ನವನ್ನು BJP ಐಟಿ ಸೆಲ್ ಮಾಡುತ್ತಿದೆ. ಅದಕ್ಕೆ ಪೂರಕವೆಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಹರಿಯಾಣದಲ್ಲಿ ಆರ್.ಎಸ್.ಎಸ್ ಈಗ ಹೈಪರ್ ಆಕ್ಟಿವ್ ಮೋಡ್‌ನಲ್ಲಿರುವುದನ್ನು ನೋಡಲು ಸಂತೋಷವಾಗಿದೆ. ಆರೆಸ್ಸೆಸ್  ಮತ್ತು ಬಿಜೆಪಿ ನಡುವಿನ ಎಲ್ಲಾ ಆಂತರಿಕ ಸಮಸ್ಯೆಗಳು ಇತ್ಯರ್ಥವಾಗಿವೆ. ಅವರಿಗೆ ಮಾತ್ರ ಭೂಮಿ ಭಾರತ. ಅದಕ್ಕಾಗಿ ಎಂತಹ ಭಿನ್ನಾಭಿಪ್ರಾಯಗಳನ್ನು ಮೀರಲು ಸಿದ್ದವಿದೆ. ತನ್ನನ್ನು ಆರ್‌ಎಸ್‌ಎಸ್‌ನ ಸ್ವಯಂಸೇವಕ ಎಂದು ಕರೆದುಕೊಳ್ಳಲು ಹೆಮ್ಮೆಪಡುತ್ತೇನೆ ಎಂಬ ಹೇಳಿಕೆಯೊಂದಿಗೆ ಎಕ್ಸ್‌ ಖಾತೆ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಆರ್‌ಎಸ್‌ಎಸ್‌ ಪಥಸಂಚಲನ ಮಾಡುತ್ತಿರುವ ಈ ದೃಶ್ಯಗಳು ಹರಿಯಾಣಕ್ಕೆ ಸಂಬಂಧಿಸಿವೆ ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕೇರಳದ ಮಲಪ್ಪುರಂನ ತನೂರ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸದಸ್ಯರು ಮೆರವಣಿಗೆ ನಡೆಸುತ್ತಿರುವ ಹಳೆಯ ವೀಡಿಯೊವನ್ನು 2024 ರ ಅಕ್ಟೋಬರ್ 1 ರಂದು ರಾಜ್ಯ ಚುನಾವಣೆಗೆ ಮುಂಚಿತವಾಗಿ ಹರಿಯಾಣದ ಇತ್ತೀಚಿನ ಮೆರವಣಿಗೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಕ್ಟೋಬರ್ 7, 2022 ರ ಅದೇ ವೀಡಿಯೊದೊಂದಿಗೆ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವೀಡಿಯೊದ ಸ್ಥಳವನ್ನು “ತನೂರು, ಮಲಪ್ಪುರಂ ಜಿಲ್ಲೆ” ಎಂದು ಬರೆಯಲಾಗಿದೆ.

ವೀಡಿಯೊದ ದೃಶ್ಯಗಳು ವೈರಲ್ ವೀಡಿಯೊದೊಂದಿಗೆ ಹೊಂದಿಕೆಯಾಗುತ್ತವೆ.

ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಸ್ಥಳದ ಸುಳಿವು – ತನೂರು, ಮಲಪ್ಪುರಂ, ಕೇರಳ, ಗೂಗಲ್ ನಕ್ಷೆಗಳಲ್ಲಿ ನಾವು ಅದೇ ಸ್ಥಳವನ್ನು ಕಂಡುಕೊಂಡಿದ್ದೇವೆ, ಅದು ವೈರಲ್ ವೀಡಿಯೊವನ್ನು ಅಲ್ಲಿ ಚಿತ್ರೀಕರಿಸಲಾಗಿದೆ ಎಂದು ಸ್ಥಾಪಿಸುತ್ತದೆ.

ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ವೈರಲ್ ವೀಡಿಯೊದಲ್ಲಿರುವಂತೆ ಅದೇ ಅಂಗಡಿ ಮತ್ತು ಜಾಹೀರಾತು ಫಲಕಗಳನ್ನು ಈ ಸ್ಥಳದಲ್ಲಿ ಕಾಣಬಹುದು. ಹೋಲಿಕೆಯನ್ನು ಕೆಳಗೆ ನೋಡಬಹುದು:

ಒಟ್ಟಾರೆಯಾಗಿ ಹೇಳುವುದಾದರೆ, ಕೇರಳದ ಮಲಪ್ಪುರಂನ ತನೂರ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸದಸ್ಯರು ಮೆರವಣಿಗೆ ನಡೆಸುತ್ತಿರುವ 2022ರ ಹಳೆಯ ವಿಡಿಯೋವನ್ನು 2024 ರ ಅಕ್ಟೋಬರ್ 1 ರಂದು ರಾಜ್ಯ ಚುನಾವಣೆಗೆ ಮುಂಚಿತವಾಗಿ ಹರಿಯಾಣದಲ್ಲಿ ನಡೆದ ಇತ್ತೀಚಿನ ಮೆರವಣಿಗೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಗಿ ಪೋಸ್ಟ್‌ನಲ್ಲಿ ಮಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕಿಯನ್ನು ಅವಮಾನಿಸಿದ ವಿಡಿಯೋ ಎಂದು ಸಂಬಂಧವಿಲ್ಲ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights