ನೈಸ್‌ ರೋಡ್‌ನಲ್ಲಿ ಕಳ್ಳತನದ ವದಂತಿ; ಸ್ಪಷ್ಟನೆ ನೀಡಿದ ಪೊಲೀಸರು!

ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ಕಳ್ಳತನ ನಡೆಯುತ್ತಿದೆ. ಕರ್ಳಳಲು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಸಂಚರಿಸುವವರನ್ನು ಬೆದರಿಸಿ ದರೋಡೆ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೊಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಗರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಮಾರಕಾಸ್ತ್ರಗಳನ್ನು ಹಿಡಿದಿದ್ದ ಯುವಕರ ತಂಡ ಕಾರೊಂದನ್ನು ಅಡ್ಡಗಟ್ಟಿ ದೋಚಲು ಮುಂದಾಗಿದ್ದರು. ಆದರೆ ಕಾರು ಚಾಲಕ ಕೂಡಲೇ ಎಚ್ಚೆತ್ತು ಕಾರನ್ನು ರಿವರ್ಸ್ ಗೇರ್ ನಲ್ಲಿ ವೇಗವಾಗಿ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಈ ವೇಳೆ ಕಾರನ್ನು ಅಟ್ಟಾಡಿಸಿದ್ದ ದುಷ್ಕರ್ಮಿಗಳು ಕಾರಿನ ಮೇಲೆ ದೊಣ್ಣೆಗಳನ್ನು ಎಸೆದಿರುವ ವಿಡಿಯೋ ವೈರಲ್‌ ಆಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಈ ವಿಡಿಯೋ ಬೆಂಗಳೂರಿನದ್ದಲ್ಲ, ವಿಡಿಯೋದಲ್ಲಿ ಕಂಡು ಬಂದಿರುವವರು ಕರ್ನಾಟಕದವರಲ್ಲ. ರಾಜ್ಯದ ಯಾವುದೇ ಸ್ಥಳದಲ್ಲಿಯೂ ಇಂತಹ ಘಟನೆಗಳು ನಡೆದಿಲ್ಲ. ಯಾರು ಭಯಪಡುವ ಅಗತ್ಯವಿಲ್ಲ. ಆದರೂ, ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.

25 ಸೆಕೆಂಡುಗಳ ವೀಡಿಯೊ ಕ್ಲಿಪ್ ಬಹುಶಃ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿರಬಹುದು. ವಿಡಿಯೋವನ್ನು ಪರಿಶೀಲನೆ ನಡೆಸಲಾಗಿದೆ. ಇಂತಹ ಘಟನೆ ನಗರದಲ್ಲಿ ಎಲ್ಲಿಯೂ ನಡೆದಿಲ್ಲ. ಹೆಚ್ಚೆಚ್ಚು ವಾಹನಗಳು ಚಲಿಸುವ ಹೆದ್ದಾರಿಗಳಲ್ಲಿ ದರೋಡೆಕೋರರು ಕಳ್ಳತನಕ್ಕೆ ಇಳಿಯುವ ಧೈರ್ಯ ಮಾಡುವುದಿಲ್ಲ. ಹೆಚ್ಚು ವಾಹನಗಳು ಚಲಿಸದ ಹೆದ್ದಾರಿಗಳಲ್ಲಿ ಇಂತಹ ಘಟನೆಗಳು ನಡೆಯುವ ಸಾಧ್ಯತೆಗಳಿರುತ್ತವೆ. ನಗರದಲ್ಲಿ ಪೊಲೀಸರು ರಾತ್ರಿ ವೇಳೆಯಲ್ಲಿ ಆಗಾಗ ಗಸ್ತು ತಿರುಗುತ್ತಲೇ ಇರುತ್ತಾರೆ ಎಂದು ಉಪ ಪೊಲೀಸ್ ಆಯುಕ್ತ ಹರೀಷ್ ಪಾಂಡೆಯವರು ಹೇಳಿದ್ದಾರೆ.


ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ನಳಿನ್ ಕಟೀಲ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights