FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕಿಯನ್ನು ಅವಮಾನಿಸಿದ ವಿಡಿಯೋ ಎಂದು ಸಂಬಂಧವಿಲ್ಲ ವಿಡಿಯೋ ಹಂಚಿಕೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ಮುಂದುವರೆದಿವೆ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳಿಕೊಂಡು ಹಂಚಿಕೊಳ್ಳುತ್ತಿದ್ದು, ಹಿಂದೂ ಶಿಕ್ಷಕಿಯನ್ನು ಬಾಂಗ್ಲಾದೇಶದಲ್ಲಿ ಅವಮಾನಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಪೋಸ್ಟ್‌ ಮಾಡುತ್ತಿದ್ದಾರೆ.

ವೀಡಿಯೊದಲ್ಲಿರುವ ಮಹಿಳೆ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆಗಾಗಿ ಸಿಕ್ಕಿಬಿದ್ದಿದ್ದಾಳೆ.

ಬಾಂಗ್ಲಾದೇಶದಲ್ಲಿ  ಹಿಂದೂ ಶಿಕ್ಷಕರಿಗೆ ರಾಜೀನಾಮೆಯನ್ನು ಕೊಡಿಸಿ ಸಾರ್ವಜನಿಕವಾಗಿ ಅವಮಾನ ಮಾಡುತ್ತಿದ್ದಾರೆ” ಎಂದು  ಎಕ್ಸ್‌ (ಟ್ವಿಟರ್‌) ನ ಬಳಕೆದಾರರಾದ ಸುನಂದಾ ರಾಯ್ ಮತ್ತು ಅಜಯ್ ಚೌಹಾಣ್ ರವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ನಿಜವಾಗಿಯೂ ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕಿಯ ರಾಜೀನಾಮೆ ಕೊಡಿಸಿ ಅವಮಾನ ಮಾಡಲಾಗಿದೆಯೇ ಎಮದು ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಪೊಲಾಪಿನ್  ಯೂಟ್ಯೂಬ್‌ ಚಾನೆಲ್‌ನಲ್ಲಿ ಆಗಸ್ಟ್ 19 ರಂದು ವಿಡಿಯೋವನ್ನು “Body businessman, traffickers and extortionist arrested Maona Chowrasta Sripur, Gazipur.” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್‌ ಮಾಡಲಾಗಿದೆ.

ವೀಡಿಯೊದಲ್ಲಿರುವ ಮಹಿಳೆ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆಗಾಗಿ ಸಿಕ್ಕಿಬಿದ್ದಿದ್ದಾಳೆ.

ಆಗಸ್ಟ್‌ 17 ರಂದು ‘ ಬುರಿಗಂಗಾ ಟಿವಿ ‘ ಹೆಸರಿನ YouTube ಚಾನಲ್‌ನಲ್ಲಿ ಇದರ ಕುರಿತು ಅಪ್‌ಲೋಡ್‌ ಮಾಡಿದ ವಿಡಿಯೋವೊಂದು ಲಭ್ಯವಾಗಿದೆ. ಈ ವೀಡಿಯೊದಲ್ಲಿ “ಛತ್ರ ದಾಲ್ ” ಎಂಬ ಹೆಸರನ್ನು ಬಳಸಿಕೊಂಡಿದ್ದಾರೆ. ಮಹಿಳೆಯ ಪಕ್ಕದಲ್ಲಿ ನಿಂತಿರುವ ವ್ಯಕ್ತಿಯ ಎದೆಯ ಮೇಲೆ ತೂಗೂ ಹಾಕಿದ್ದ ಬೋರ್ಡ್‌ನ ಫಲಕವನ್ನು ಬಂಗಾಳಿ ಭಾಷೆಯಲ್ಲಿ ಬರೆಯಲಾಗಿದೆ.  ಅದನ್ನು ನಾವು ಕನ್ನಡ ಭಾಷೆಗೆ ಭಾಷಾಂತರಿಸಿದಾಗ ‘ನಾನು ಮಹಿಳೆಯರ ಕಳ್ಳಸಾಗಣೆದಾರ’ ಎಂದು ತಿಳಿದು ಬರುತ್ತದೆ. ಇದನ್ನು ಫೇಸ್‌ಬುಕ್‌ನ ಪೋಸ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

ವೀಡಿಯೊದಲ್ಲಿರುವ ಮಹಿಳೆ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆಗಾಗಿ ಸಿಕ್ಕಿಬಿದ್ದಿದ್ದಾಳೆ.

ಬಾಂಗ್ಲಾದೇಶದ ಪತ್ರಕರ್ತರಾದ  ಶೋಹನೂರ್ ರಹಮಾನ್‌,  ರವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ವೀಡಿಯೋದಲ್ಲಿರುವ ಮಹಿಳೆ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದಿದ್ದಳು ಎಂದು ತಿಳಿಸಿದ್ದಾರೆ. ಇದಲ್ಲದೆ, ವೇಶ್ಯಾವಾಟಿಕೆ ಮತ್ತು ಮಹಿಳಾ ಕಳ್ಳಸಾಗಣೆಯ ಆರೋಪದಲ್ಲಿ ಈ ವೀಡಿಯೊದಲ್ಲಿರುವ ಮಹಿಳೆ ಮತ್ತು ಕೆಲವರನ್ನು ಸಾರ್ವಜನಿಕವಾಗಿ ಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿ ರೆಹಮಾನ್ ರವರು  ಎರಡು ಫೇಸ್‌ಬುಕ್ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “Body businessman, traffickers and extortionist arrested Maona Chowrasta Sripur, Gazipur.” ಎಂದು ಬರೆಯಲಾಗಿದೆ.

ವೀಡಿಯೊದಲ್ಲಿರುವ ಮಹಿಳೆ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆಗಾಗಿ ಸಿಕ್ಕಿಬಿದ್ದಿದ್ದಾಳೆ.

ಮಹಿಳೆಯ ಕೊರಳಲ್ಲಿ ಬಾಂಗ್ಲಾ ಭಾಷೆಯಲ್ಲಿ ” ನಾನು ಮಹಿಳೆಯರ ಕಳ್ಳ ಸಾಗಾಣಿಕೆ ಮಾಡುವವಳು” ಎಂಬ ಫಲಕವನ್ನು ಚಪ್ಪಲಿ ಹಾರದೊಂದಿಗೆ ಹಾಕಲಾಗಿದೆ. ಹಾಗಾಗಿ ಹಿಂದೂ ಶಿಕ್ಷಕಿಯ ರಾಜೀನಾಮೆ ಕೊಡಿಸಿ ಅವಮಾನ ಮಾಡಲಾಗಿದೆ ಎಂಬುದು ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿನ ಜನರ ಗುಂಪೊಂದು ಮಹಿಳೆಯನ್ನು ಥಳಿಸುವ  ವಿಡಿಯೋವನ್ನು ಹಿಂದೂ ಶಿಕ್ಷಕಿಯನ್ನು ರಾಜೀನಾಮೆ ಕೊಡಿಸಿ ಅವಮಾನಿಸುತ್ತಿರುವ ವಿಡಿಯೋ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಕೋಮು ದ್ವೇಷ ಹರಡುವ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಮಕ್ಕಳ ತಾಯತವನ್ನು ಮುಸ್ಲಿಮರು ಬಲವಂತದಿಂದ ತೆಗೆಯುತ್ತಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights