FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಮಕ್ಕಳ ತಾಯತವನ್ನು ಮುಸ್ಲಿಮರು ಬಲವಂತದಿಂದ ತೆಗೆಯುತ್ತಿದ್ದಾರೆ ಎಂಬುದು ಸುಳ್ಳು
ಬಾಂಗ್ಲಾದೇಶದ ಮುಸ್ಲಿಮರು ಹಿಂದೂಗಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ ನೋಡಿ ಎಂದು ಪ್ರತಿಪಾದಿಸಿ “ಹಿಂದೂ ಬಾಲಕನೊಬ್ಬ ಕೊರಳಿಗೆ ಕಟ್ಟಿದ್ದ ತಾಯತವನ್ನು ಮುಸ್ಲಿಂ ಮೌಲ್ವಿಯೊಬ್ಬ ತನ್ನ ಬಾಯಿಯಿಂದ ಕಚ್ಚಿ ಕತ್ತರಿಸಿ, ಬಳಿಕ ಆ ಹಿಂದೂ ಬಾಲಕನಿಗೆ ಒಂದಷ್ಟು ದಿನಸಿ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಡುತ್ತಿದ್ದಾನೆ.
ಈ ಘಟನೆ ನಡೆದಿರುವುದು ಬಾಂಗ್ಲಾದೇಶದಲ್ಲಿ. ಇಂದು ಭಾರತದಲ್ಲಿ ಯಾರೆಲ್ಲ ಬಾಂಗ್ಲಾದೇಶಕ್ಕೆ ಬೆಂಬಲವನ್ನು ನೀಡುತ್ತಿದ್ದಾರೋ ಅವರೆಲ್ಲ ಇದಕ್ಕೆ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕು” ಎಂಬ ಹೇಳಿಕೆಯೊಂದಿಗೆ ಮಿ.ಸಿನ್ಹ ಎಂಬ ಬಲಪಂಥೀಯ ಪ್ರತಿಪಾದಕ ತನ್ನ ಎಕ್ಸ್ ಖಾತೆಯ ಮೂಲಕ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾನೆ.
ಇದೇ ವಿಡಿಯೋವನ್ನು ಬಳಸಿಕೊಂಡು ಬಿಜೆಪಿ ಬೆಂಬಲಿತ ಸುದ್ದಿ ತಾಣವಾದ ಒಪ್‌ಇಂಡಿಯಾ.ಕಾಮ್ ವರದಿಯನ್ನು ಪ್ರಕಟಿಸಿದ್ದು, ಇದರ ಜೊತೆಗೆ ಹಲವು ಮಂದಿ ಬಿಜೆಪಿ ಬೆಂಬಲಿಗರು ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಹಾಗಾಗಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ, ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,. ಈ ವೇಳೆ ತೌಹೀದ್ ಮತ್ತು ಇಸ್ಲಾಮಿಕ್ ಸೆಂಟರ್ ಎಂಬ ಹೆಸರಿನ ಫೇಸ್‌ಬುಕ್ ಪುಟವೊಂದರಲ್ಲಿ ಇದೇ ಫೋಟೋ ಮತ್ತು ವಿಡಿಯೋಗಳು ಲಭ್ಯವಾಗಿವೆ.
ಈ ಪೋಸ್ಟ್ ಅನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ, ಅದರಲ್ಲಿ ತೌಹೀದ್ ಅಕಾಡೆಮಿ ಮತ್ತು ಇಸ್ಲಾಮಿಕ್ ಸೆಂಟರ್ ನವಕಾಲಿಯ ಪ್ರವಾಹ ಸಂತ್ರಸ್ಥರಲ್ಲಿ 200ಕ್ಕೂ ಅಧಿಕ ಕುಟುಂಬಗಳಿಗೆ ಪರಿಹಾರವನ್ನು ಒದಗಿಸಿದೆ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.
ಮತ್ತಷ್ಟು ಮಾಹಿತಿಗಾಗಿ ಕೆಲವೊಂದು ಕೀವರ್ಡ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ, ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರ ಎಕ್ಸ್ ಖಾತೆಯ ಪೋಸ್ಟ್‌ವೊಂದು ಲಭ್ಯವಾಗಿದೆ. ಇದರಲ್ಲಿ ಅವರು ವೈರಲ್ ವಿಡಿಯೋ ಸುಳ್ಳಿನಿಂದ ಕೂಡಿದೆ ವೈರಲ್ ವಿಡಿಯೋದಲ್ಲಿ ಕಂಡು ಬಂದ ಬಾಲಕ ಹಿಂದೂವಲ್ಲ. ಆತ ಮುಸ್ಲಿಂ ಬಾಲಕನಾಗಿದ್ದು, ಆತನ ಹೆಸರು ಸೊಹೇಲ್ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಬಾಲಕ ಹಿಂದೂ ಅಲ್ಲ ಮುಸಲ್ಮಾನ ಎಂಬುದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಬಾಂಗ್ಲಾದೇಶದಲ್ಲಿ ಹಲವಾರು ಮುಸ್ಲಿಂ ಮೌಲ್ವಿಗಳು, ಹಿಂದೂಗಳ ತಾಯತವನ್ನು ಕತ್ತರಿಸುತ್ತಿದ್ದಾರೆ ಎಂಬುದು ನಿಜವೇ ಎಂಬುದನ್ನು ಪರಿಶೀಲನೆ ನಡೆಸಿದಾಗ, ಹೀಗೆ ತಯಾತಗಳನ್ನು ಕತ್ತರಿಸುತ್ತಿರುವುದು ಹಿಂದುಗಳದ್ದಲ್ಲ, ಮುಸಲ್ಮಾನರದ್ದು ಎಂಬುದು ತಿಳಿದುಬಂದಿದೆ. ಇದು ಮುಸಲ್ಮಾನರಲ್ಲಿನ ಮೌಢ್ಯಗಳನ್ನು ಹೋಗಲಾಡಿಸಲು ತೆಗೆದುಕೊಂಡ ಕ್ರಮ ಎಂಬುದು ತಿಳಿದು ಬಂದಿದೆ. ಕುರಿತು ಹುಡುಕಿದಾಗ 31 ಆಗಸ್ಟ್ 2024 ರಂದು ಎಕ್ಸ್ ಖಾತೆಯ ಪೋಸ್ಟ್ ಒಂದು ಕಂಡುಬಂದಿದ್ದು, ಅದರಲ್ಲಿ ಪ್ರವಾಹ ಸಂತ್ರಸ್ಥರಿಗೆ ಆಹಾರ ವಿತರಿಸುವ ಸಂದರ್ಭದಲ್ಲಿ ಅವರ ತಾಯಿತಗಳನ್ನು ಕತ್ತರಿಸಲಾಗುತ್ತಿದೆ ಮತ್ತು ಈ ಸಂದರ್ಭದಲ್ಲಿ ಹಿಂದೂ ಮತ್ತು ಶೀಯಾ ಕುಟುಂಬಗಳಿಗೆ ಪಡಿತರವನ್ನು ನೀಡಲಾಗಿಲ್ಲ ಎಂಬುದನ್ನು ಕೂಡ ಉಲ್ಲೇಖಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮತ್ತಷ್ಟು ಸರ್ಚ್ ಮಾಡಿದಾಗ 24 ಆಗಸ್ಟ್ 2024 ರಂದು ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಮತ್ತೊಂದು ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ಮೌಢ್ಯಯುತವಾದ ಬರಹವಿದ್ದು, ಅದರಲ್ಲಿ “ತಾಯತ ಧರಿಸಿ ನೀವು ಆಹಾರ ಸೇವಿಸಿ ಶಿರ್ಕ್ (ಅಂದರೆ ಪಾಪ) ಸ್ಥಿತಿಯಲ್ಲಿ ಸತ್ತರೆ ನೀವು ನರಕವಾಸಿಯಾಗುತ್ತಿರಿ” ಎಂದು ಉಲ್ಲೇಖಿಸಲಾಗಿದೆ. ಇಲ್ಲಿ ಮುಸಲ್ಮಾರನಲ್ಲೇ ಹಲವು ರೀತಿಯ ನಂಬಿಕೆಗಳಿವೆ. ಕೆಲವು ಮುಸಲ್ಮಾನರು ತಯಾತವನ್ನು ಧರಿಸಿದರೆ, ಇನ್ನೂ ಕೆಲ ಮುಸಲ್ಮಾನರು ತಾಯತ ಧರಿಸುವುದನ್ನು ವಿರೋಧಿಸುತ್ತಾರೆ. ಹೀಗಾಗಿ ಮುಸಲ್ಮಾನರ ತಾಯತವನ್ನು ಕತ್ತರಿಸಿಲಾಗಿದೆಯೇ ಹೊರತು ಹಿಂದೂಗಳ ತಯಾತವಲ್ಲಎಂಮಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವಂತೆ, ಹಿಂದೂ ಬಾಲಕನ ತಾಯತವನ್ನು ಮುಸಲ್ಮಾನ ಮೌಲ್ವಿಗಳು ಕತ್ತರಿಸಿದ್ದಾರೆ ಮತ್ತು ಆ ಮೂಲಕ ತಮ್ಮ ಧರ್ಮಾಂಧತೆಯನ್ನು ಪ್ರದರ್ಶಿಸಿದ್ದಾರೆ ಅಲ್ಲದೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಹೀನಾಯ ಪರಿಸ್ಥಿತಿ ಎಂಬುದು ಸುಳ್ಳು. ವಾಸ್ತವವಾಗಿ ಇದು ಹಿಂದೂಗಳಿಗೆ ಸಂಬಂಧಿಸಿಲ್ಲ. ಹಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಡಾ. ಬಿ.ಆರ್. ಅಂಬೇಡ್ಕರ್ ಕಾಲಿಗೆ ಗಾಂಧಿ ನಮಸ್ಕರಿಸಿದ್ದಾರೆ ಎಂದು ಎಡಿಟ್ ಮಾಡಿದ ಫೋಟೊ ಹಂಚಿಕೆ