FACT CHECK | ಮೊಬೈಲ್ ರಿಚಾರ್ಜ್ ಮಾಡಿದ ಹಣಕ್ಕೆ ಬದಲಾಗಿ ವಿದ್ಯಾರ್ಥಿನಿಯನ್ನು I LOVE YOU ಎನ್ನುವಂತೆ ಕೇಳಿದ ಅಂಗಡಿಯವನು ಮುಸ್ಲಿಂ ವ್ಯಕ್ತಿಯೇ?

ರಾಜಸ್ಥಾನದ ದಿದ್ವಾನಾ-ಕುಚಮನ್ ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿನಿಯರ ಗುಂಪೊಂದು ತಮಗೆ ಕಿರುಕುಳ ನೀಡುತ್ತಿದ್ದ ಅಂಗಡಿಯವನಿಗೆ ಥಳಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕಿರುಕುಳ ನೀಡುತ್ತಿದ್ದ ಅಂಗಡಿಯವನನ್ನು ಧೈರ್ಯವಾಗಿ ಎದುರಿಸಿದ ಹುಡುಗಿಯರನ್ನು ಹೊಗಳಿ ಹಲವು ಬಳಕೆದಾರರು ಪ್ರತಿಕ್ರಯಿಸಿದ್ದಾರೆ. ಇದರ ಮಧ್ಯೆ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ಹುಡುಗಿಗೆ ಕಿರುಕುಳ ನೀಡಿದ ವ್ಯಕ್ತಿ ಗುರುತಿನ ಬಗ್ಗೆ ಕಮೆಂಟ್‌ ಮಾಡಿದ್ದು ಆತನ ಹೆಸರು ಸರ್ಫರಾಜ್ ಮುಸ್ಲಿಂ ವ್ಯಕ್ತಿ ಎಂದು ಹೇಳಿಕೊಳ್ಳುತ್ತಿದ್ದಾರೆ.

ಇನ್‌ಸ್ಟಾಗ್ರಾಮ್ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡು “ದಿದ್ವಾನ ರಾಜಸ್ಥಾನದಿಂದ ಬಂದ ವೈರಲ್ ವೀಡಿಯೊ: ಹುಡುಗಿಯೊಬ್ಬಳು ತನ್ನ ಮೊಬೈಲ್ ರೀಚಾರ್ಜ್ ಮಾಡಿಸಲು ಹೋಗಿದ್ದಾಳೆ, ಅಂಗಡಿಯವನು ರೀಚಾರ್ಜ್ ಮಾಡಿದ ಹಣಕ್ಕೆ ಬದಲಾಗಿ ತನಗೆ I Love You  ಎಂದು ಹೇಳುವಂತೆ ಕೇಳಿದ್ದಾನೆ. ಇದನ್ನು ತಿರಸ್ಕರಿಸಿದ ವಿದ್ಯಾರ್ಥಿನಿಯೊಂದಿಗೆ ಅಶ್ಲೀಲವಾಗಿ ನಡೆದುಕೊಳ್ಳಲು ಯತ್ನಿಸಿದ್ದಾನೆ. ತಕ್ಷಣಕ್ಕೆ ಎಚ್ಚೆತ್ತ ವಿದ್ಯಾರ್ಥಿನಿ ತನ್ನ ಸ್ನೇಹಿತೆಯರೊಂದಿಗೆ ಹೋಗಿ ಅಂಗಡಿಯ ಮುಸ್ಲಿಂ ವ್ಯಕ್ತಿಯನ್ನು ಥಳಿಸದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Life Of Student (@_life.of.student_)

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಮುಸ್ಲಿಂ ವ್ಯಕ್ತಿಗೆ ಥಳಿಸಿದ್ದಾರೆ ಎನ್ನಲಾದ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಘಟನೆ ಕುರಿತಾಗಿ ಹಲವು ಮಾಧ್ಯಮಗಳು ಮಾಡಿದ ವರದಿಗಳು ಲಭ್ಯವಾಗಿದೆ. ಅಮರ್ ಉಜಾಲಾದ ವರದಿಯ ಪ್ರಕಾರ, ರಾಜಸ್ಥಾನದ ದಿದ್ವಾನಾ-ಕುಚಾಮನ್ ಜಿಲ್ಲೆಯ ಕುಚಮನ್ ನಗರದ ಸಿಕರ್ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ ಎಂದು ಉಲ್ಲೇಖಿಸಿದೆ.

ಕೆಲವು ಶಾಲಾ ಬಾಲಕಿಯರು ಮೊಬೈಲ್ ರೀಚಾರ್ಜ್ ಗಾಗಿ ಈ ಅಂಗಡಿಗೆ ಹೋಗಿದ್ದರು. ರೀಚಾರ್ಜ್‌ ಮಾಡಿದ ಅಂಗಡಿಯವನು ಹಣಕ್ಕೆ ಬದಲಾಗಿ “ಐ ಲವ್ ಯೂ” ಎಂದು ಹೇಳುವಂತೆ ಕೇಳಿದ್ದಾನೆ ಎಂದು ವರದಿಯಾಗಿದೆ. ಅವನು ಇನ್ನೂ ಮುಂದೆ ಹೋಗಿ ಹುಡುಗಿಯ ಕೈಯನ್ನು ಹಿಡಿದು ಅಶ್ಲೀಲ ಸನ್ನೆಗಳನ್ನು ಮಾಡಿದನು. ನಂತರ ವಿದ್ಯಾರ್ಥಿನಿಯರ ಗುಂಪು ಬೀದಿಯಲ್ಲಿ ಸಾರ್ವಜನಿಕವಾಗಿ ಅಂಗಡಿಯವರಿಗೆ ಥಳಿಸಿದೆ. ಸ್ಥಳೀಯರು ಸಹ ಅವರಿಗೆ ಬೆಂಬಲ ನೀಡಿದ್ದು, ವೈರಲ್ ವಿಡಿಯೋದಲ್ಲಿ ಕಾಣಬಹುದು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದರು ಎಂದು ಉಲ್ಲೇಖಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಬಗ್ಗೆ ಪರಿಶೀಲಿಸಲು ಇಂಡಿಯಾ ಟುಡೆ ಫ್ಯಾಕ್ಟ್‌ಚೆಕ್ ತಂಡ ದಿಡ್ವಾನಾ ಪೊಲೀಸರನ್ನು ಸಂಪರ್ಕಿಸಿದಾಗ, ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದ ಅಂಗಡಿಯವನು ಮುಸ್ಲಿಂ ಅಲ್ಲ, ಹಿಂದೂ ಎಂದು ದಿವಾನ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ನರೇಂದ್ರ ಸಿಂಗ್ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್‌ಗೆ ತಿಳಿಸಿದ್ದಾರೆ. ಅಂಗಡಿಯವನ ಹೆಸರು ಓಂ ಪ್ರಕಾಶ್ ರೇಗಾರ್ ಎಂದು ಸಿಂಗ್ ತಿಳಿಸಿದ್ದಾರೆ.

ಈ ಘಟನೆ ಆಗಸ್ಟ್ 31 ರಂದು ನಡೆದಿದೆ ಎಂದು ಸಿಂಗ್ ಹೇಳಿದ್ದು, ದಿಡ್ವಾನಾ ಪೊಲೀಸರು ಓಂ ಪ್ರಕಾಶ್ ಅವರನ್ನು ಬಂಧಿಸಿದ್ದಾರೆ. ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಅಂಗಡಿಯ ಮಾಲೀಕರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಕಾನ್‌ಸ್ಟೆಬಲ್ ಹೇಳಿದ್ದಾರೆ. ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ಹೆಸರನ್ನು ಪೊಲೀಸರು ಟ್ವೀಟ್‌ ಮೂಲಕ ಬಹಿರಂಗಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಅಂಗಡಿಯವನು ಹಿಂದೂ ಎಂಬುದು ಸ್ಪಷ್ಟವಾಗಿದೆ. ಈ ಘಟನೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪತ್ರಕರ್ತರ ಪ್ರಶ್ನೆಗೆ ಹೆದರಿ ಓಡಿ ಹೋದ್ರಾ ಮಾಜಿ ಮುಖ್ಯಮಂತ್ರಿ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights